#SSMB27 ಟ್ರೆಂಡಿಂಗ್: 2020ಕ್ಕೆ ಸೆಟ್ಟೇರಲಿದೆ ಪ್ರಶಾಂತ್ ನೀಲ್ ಮತ್ತು ಮಹೇಶ್ ಬಾಬು ಸಿನಿಮಾ?

'ಕೆಜಿಎಫ್' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸದ್ಯ 'ಕೆಜಿಎಫ್-2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಪ್ರಶಾಂತ್. 'ಕೆಜಿಎಫ್-2' ಮುಗಿದ ಬಳಿಕ ಪ್ರಶಾಂತ್ ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಚರ್ಚೆ ಈಗಾಗಲೆ ಪ್ರಾರಂಭವಾಗಿದೆ.

ಪ್ರಶಾಂತ್ ನೀಲ್ ಟಾಲಿವುಡ್ ಕಡೆ ಮುಖಮಾಡಲಿದ್ದಾರೆ ಎನ್ನುವ ಸುದ್ದಿ ಆಗಾಗ ಕೇಳಿ ಬರುತ್ತಿರುತ್ತದೆ. ಜ್ಯೂ.ಎನ್ ಟಿ ಆರ್ ಗೆ ಸಿನಿಮಾ ಮಾಡಲಿದ್ದಾರೆ, ಮಹೇಶ್ ಬಾಬುಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೀಗ ಪ್ರಶಾಂತ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುವುದು ಪಕ್ಕಾ ಎನ್ನುತ್ತಿವೆ ಮೂಲಗಳು. ಇದರ ಜೊತೆಗೆ ಮಹೇಶ್ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ.

ಮಹೇಶ್ ಬಾಬುಗೆ ಪ್ರಶಾಂತ್ ನೀಲ್ ಸಿನಿಮಾ?

ಮಹೇಶ್ ಬಾಬುಗೆ ಪ್ರಶಾಂತ್ ನೀಲ್ ಸಿನಿಮಾ?

ಮಹೇಶ್ ಬಾಬು 27ನೇ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಮತ್ತೆ ಜೋರಾಗಿ ಸದ್ದು ಮಾಡುತ್ತಿದೆ. ಮಹೇಶ್ ಬಾಬು ಸದ್ಯ 'ಸರಿಲೇರು ನೀಕವ್ವರು' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನಂತರ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

#SSMB27 ಟ್ರೆಂಡ್ ಆಗಿದೆ

#SSMB27 ಟ್ರೆಂಡ್ ಆಗಿದೆ

ಮಹೇಶ್ ಬಾಬು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಹೇಶ್ ಬಾಬು ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ಟ್ರೆಂಡ್ ಶುರುಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ #SSMB27 ಎಂದು ಬರೆದು ಟ್ರೆಂಡಿಂಗ್ ಮಾಡುತ್ತಿದ್ದಾರೆ. ಅಂದರೆ ಸೂಪರ್ ಸ್ಟಾರ್ ಮಹೇಶ್ ಬಾಬು 27ನೇ ಸಿನಿಮಾ ಎಂದು ಅರ್ಥ.

ಪ್ಯಾನ್ ಇಂಡಿಯ ಸಿನಿಮಾ

ಪ್ಯಾನ್ ಇಂಡಿಯ ಸಿನಿಮಾ

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಹೇಶ್ ಬಾಬು 27ನೇ ಸಿನಿಮಾ ಪ್ಯಾನ್ ಇಂಡಿಯ ಸಿನಿಮಾ ಆಗಿರಲಿದೆಯಂತೆ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲು ತೆರೆಗೆ ಬರುವ ಜೊತೆಗೆ, ಹಿಂದಿಯಲ್ಲೂ ರಿಲೀಸ್ ಆಗಲಿದೆಯಂತೆ. ಈ ಮೂಲಕ ಮಹೇಶ್ ಬಾಬು ಬಾಲಿವುಡ್ ಗೂ ಎಂಟ್ರಿ ಕೊಡುತ್ತಿದ್ದಾರೆ.

2020 ಮೇನಲ್ಲಿ ಸೆಟ್ಟೇರಲಿದೆ ಸಿನಿಮಾ?

2020 ಮೇನಲ್ಲಿ ಸೆಟ್ಟೇರಲಿದೆ ಸಿನಿಮಾ?

ಮಹೇಶ್ ಬಾಬು ಮತ್ತು ಪ್ರಶಾಂತ್ ನೀಲ್ ಸಿನಿಮಾ ಮುಂದಿನ ವರ್ಷ ಮಾರ್ಚ್ ನಲ್ಲಿ ಸೆಟ್ಟೇರಲಿದೆಯಂತೆ. ಹೀಗಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಆಗಲಿ ಅಥವ ಮಹೇಶ್ ಬಾಬು ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಮುಂದಿನ ಸಿನಿಮಾದ ಗುಟ್ಟನ್ನು ಇಬ್ಬರು ಬಿಟ್ಟುಕೊಟ್ಟಿಲ್ಲ. ಆದರೆ ಈಗಾಗಲೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ನಿಜವೆ ಆದರೆ ಮಹೇಶ್ ಬಾಬು ಅಭಿಮಾನಿಗಳಿಗೆ ದೊಡ್ಡ ಹಬ್ಬ.

More from Filmibeat

English summary
Tollywood star actor Mahesh Babu will team up with KGF director Prashanth Neel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X