For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರ್ ಸಿನಿಮಾದ ಬಗ್ಗೆ ಟಾಲಿವುಡ್ ವಿಲನ್ ಮಾತು

  By Naveen
  |
  Seetharama Kalyana : ಆದಿತ್ಯ ಮೆನನ್ ಬಾಯಲ್ಲಿ ಕನ್ನಡ ಕೇಳೋದೇ ಹಮ್ಮೆ.! | Filmibeat Kannada

  ನಟ ನಿಖಿಲ್ ಕುಮಾರ್ ಅವರ 'ಸೀತಾರಾಮ ಕಲ್ಯಾಣ' ಸಿನಿಮಾ ದಿನೇ ದಿನೇ ಹೈಪ್ ಹೆಚ್ಚಿಸಿಕೊಳ್ಳುತ್ತಿದೆ. ಸಿನಿಮಾದ ಟೀಸರ್ ಯೂ ಟ್ಯೂಬ್ ನಲ್ಲಿ ದಾಖಲೆ ಮಾಡಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಅಂದಹಾಗೆ, ಈ ಸಿನಿಮಾದ ಬಗ್ಗೆ ಇದೀಗ ಟಾಲಿವುಡ್ ವಿಲನ್ ಆದಿತ್ಯ ಮೆನನ್ ಮಾತನಾಡಿದ್ದಾರೆ.

  ಈ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಈ ಸಿನಿಮಾದಲ್ಲಿ ತೆಲುಗಿನ ಖಳನಟ ಆದಿತ್ಯ ಮೆನನ್ ಸಹ ನಟಿಸಿದ್ದು, ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

  'ಸೀತಾರಾಮ' ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್ 'ಸೀತಾರಾಮ' ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್

  ''ಜಾಗ್ವರ್' ಸಿನಿಮಾದ ನಂತರ ಮತ್ತೆ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಈ ಸಿನಿಮಾದ ಕಥೆ ತುಂಬ ಇಷ್ಟ ಆಯ್ತು. ನಮ್ಮ ಮನೆಯಲ್ಲಿ ನಡೆಯುವಂತಹ ಕಥೆ ಇದು. ಈ ಸಿನಿಮಾ ನಿಮಗೆ ಒಳ್ಳೆಯ ಫೀಲ್ ನೀಡುತ್ತದೆ. ದೊಡ್ಡ ಹಿಟ್ ಆಗುವ ಕಥೆ ಇದು. ಈ ಸಿನಿಮಾದಲ್ಲಿ ಮುಖ್ಯವಾದ ಕಥಾ ಪಾತ್ರ ಮಾಡುತ್ತಿದ್ದೇನೆ. ಕನ್ನಡದಲ್ಲಿ ನನಗೆ ಈ ರೀತಿಯ ಪಾತ್ರ ಹಿಂದೆ ಸಿಕ್ಕಿರಲಿಲ್ಲ.'' ಎಂದ ಅವರು ನಟ ನಿಖಿಲ್ ಬಗ್ಗೆ ಸಹ ಮಾತನಾಡಿದರು.

  ''ನಿಖಿಲ್ ಅವರ ಜೊತೆಗೆ 'ಜಾಗ್ವರ್' ಸಿನಿಮಾ ಮಾಡಿದ್ದೆ. ಆದರೆ, ಆ ಸಿನಿಮಾಗೆ ಹೋಲಿಸಿದರೆ ಈ ಸಿನಿಮಾಗೆ ಬಹಳಷ್ಟು ಚೆನ್ನಾಗಿ ನಟಿಸಿದ್ದಾರೆ. ಅವರು ಕನ್ನಡದಲ್ಲಿ ದೊಡ್ಡ ನಟ ಆಗುತ್ತಾರೆ ಎಂಬ ನಂಬಿಕೆ ನನಗೆ ಇದೆ.'' ಎಂದು ನಿಖಿಲ್ ಕುಮಾರ್ ಗೆ ಆದಿತ್ಯ ಮೆನನ್ ಶುಭ ಹಾರೈಸಿದರು.

  ಅಂದಹಾಗೆ, 'ಸೀತಾರಾಮ ಕಲ್ಯಾಣ' ಸಿನಿಮಾವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ನಿಖಿಲ್ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

  English summary
  Tollywood villain Adithya Menon spoke about Nikhil Kumaraswamy Starrer 'Seetharam Kalyana' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X