ದುಬೈನಲ್ಲಿ ಸೂಪರ್‌ಸ್ಟಾರ್‌ಗಳು: ಟಾಮ್ ಕ್ರೂಸ್, ಶಾರೂಖ್, ಸುದೀಪ್?

ಕನ್ನಡದ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಸ್ತುತ ದುಬೈನಲ್ಲಿದ್ದಾರೆ. ಸಿನಿ ಇಂಡಸ್ಟ್ರಿಯಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫದ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬಿಡುಗಡೆಯಾಗುತ್ತಿದೆ.

Recommended Video

ಕನ್ನಡದ ಕಂಪನ್ನು ದುಬೈನಲ್ಲಿ ಹಾರಿಸಿದ ಕಿಚ್ಚ | Filmibeat Kannada

ಈ ಹಿನ್ನೆಲೆ ಕಿಚ್ಚ ಸುದೀಪ್, ನಿರ್ಮಾಪಕ ಜಾಕ್ ಮಂಜು, ನಿರ್ದೇಶಕ ಅನೂಪ್ ಭಂಡಾರಿ, ಸುದೀಪ್ ಪತ್ನಿ ಪ್ರಿಯಾ ಸೇರಿದಂತೆ ಹಲವರು ದುಬೈಗೆ ತೆರಳಿದ್ದಾರೆ. ಸರ್ಪ್ರೈಸ್ ಏನಪ್ಪಾ ಅಂದ್ರೆ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಸಹ ದುಬೈನಲ್ಲಿದ್ದಾರಂತೆ.

ಟಾಮ್ ಕ್ರೂಸ್ ಮತ್ತು ಶಾರೂಖ್ ಖಾನ್ ದುಬೈನಲ್ಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದ ಸುದೀಪ್ ಅಭಿಮಾನಿಗಳಲ್ಲಿ ಸಣ್ಣದೊಂದು ಕುತೂಹಲ. ಕಿಚ್ಚನ 25ನೇ ವರ್ಷದ ಕಾರ್ಯಕ್ರಮದಲ್ಲಿ ಈ ಸ್ಟಾರ್ಸ್ ಭಾಗಿಯಾಗುತ್ತಾರಾ ಅಂತ. ಹಾಗಾದ್ರೆ, ಈ ಸ್ಟಾರ್ಸ್ ದುಬೈನಲ್ಲಿ ಏನು ಮಾಡ್ತಿದ್ದಾರೆ?

ಶೂಟಿಂಗ್‌ನಲ್ಲಿ ಟಾಮ್ ಕ್ರೂಸ್?

ಶೂಟಿಂಗ್‌ನಲ್ಲಿ ಟಾಮ್ ಕ್ರೂಸ್?

ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣ ಹಿನ್ನೆಲೆ ದುಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಿಷನ್ ಇಂಪಾಸಿಬಲ್ 7 ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಆ ಕಾರಣದಿಂದಲ್ಲಿ ದುಬೈನಲ್ಲಿದ್ದಾರೆ. ಟಾಮ್ ಕ್ರೂಸ್ ದುಬೈನಲ್ಲಿರುವ ಫೋಟೋಗಳನ್ನು ನಿರ್ದೇಶಕ ಕ್ರಿಸ್ಟೋಫರ್ ಮೆಕ್‌ಕ್ವಾರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶಾರೂಖ್ ಖಾನ್ ಸಹ ಶೂಟಿಂಗ್?

ಶಾರೂಖ್ ಖಾನ್ ಸಹ ಶೂಟಿಂಗ್?

ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ಅವರು ಮುಂದಿನ ಸಿನಿಮಾ ಪಠಾಣ್ ಚಿತ್ರೀಕರಣಕ್ಕಾಗಿ ದುಬೈಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಕುರಿತು ಚಿತ್ರತಂಡವಾಲಿ ಅಥವಾ ಶಾರೂಖ್ ಕಡೆಯಿಂದಾಗಲಿ ಖಚಿತವಾಗಿಲ್ಲ. ಎಮಿರೇಟ್ ಉದ್ಯಮಿ ಅನಸ್ ಬುಖಾಶ್, ಶಾರೂಖ್ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಅದು ಈಗಿನ ಫೋಟೋ ಎನ್ನುವುದರ ಬಗ್ಗೆ ಅಧಿಕೃತವಿಲ್ಲ. ಇದಕ್ಕೂ ಮುಂಚೆ ಮುಂಬೈ ಏರ್‌ಪೋರ್ಟ್‌ನಲ್ಲಿ ಮಗಳು ಸುಹಾನ ಜೊತೆ ಶಾರೂಖ್ ಕಾಣಿಸಿಕೊಂಡಿದ್ದರು.

ದುಬೈನಲ್ಲಿ ಮಹೇಶ್ ಬಾಬು?

ದುಬೈನಲ್ಲಿ ಮಹೇಶ್ ಬಾಬು?

ತೆಲುಗು ನಟ ಮಹೇಶ್ ಬಾಬು ಅವರು ಸಹ ದುಬೈಗೆ ಬಂದಿಳಿದಿದ್ದಾರೆ ಎಂದು ಹೇಳಲಾಗಿದೆ. ಸರ್ಕಾರು ವಾರಿ ಪಾಟ ಸಿನಿಮಾದ ಚಿತ್ರೀಕರಣಕ್ಕಾಗಿ ಪತ್ನಿ ಜೊತೆ ಮಹೇಶ್ ದುಬೈಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಫೋಟೋ ಲಭ್ಯವಾಗಿಲ್ಲ.

ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ

ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ

ದುಬೈನ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಕಟೌಟ್ ಪ್ರದರ್ಶನವಾಗಲಿದೆ. ಈ ಹಿನ್ನೆಲೆ ಉಪೇಂದ್ರ, ಪ್ರಿಯಾಮಣಿ, ರಮ್ಯಾಕೃಷ್ಣ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.

More from Filmibeat

English summary
Hollywood Baadshah Tom Cruise, Bollywood Baadshah Shah Rukh Khan, Sandalwood Baadshah Kichcha Sudeep are all in Dubai. what is the reason behind this star's visit to Dubai?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X