'ಬಸಣ್ಣಿ ಬಾ' ವಿಡಿಯೋ ಸಾಂಗ್ ಬಿಡುಗಡೆ ದಿನಾಂಕ ಪ್ರಕಟ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವಾಗಿದೆ. ಅದಕ್ಕೂ ಮುಂಚೆ ಯಜಮಾನ ಸಿನಿಮಾದ ಹಾಡುಗಳು ಸಖತ್ ಸದ್ದು ಮಾಡಿದ್ವು.
ಒಂದಕ್ಕಿಂತ ಒಂದು ಹಾಡುಗಳು ಜನರ ಮೆಚ್ಚುಗೆ ಗಳಿಸಿಕೊಂಡು, ಯೂಟ್ಯೂಬ್ ನಲ್ಲಂತೂ ದಾಖಲೆ ಮೇಲೆ ದಾಖಲೆ ಬರೆದಿತ್ತು. ಅದರಲ್ಲೂ 'ಬಸಣ್ಣಿ ಬಾ....' ಹಾಡು ಪ್ರೇಕ್ಷಕರನ್ನ ಎದ್ದು ಕುಣಿಸಿತ್ತು. ಈ ಹಾಡಿನಲ್ಲಿ ನಟ ದರ್ಶನ್ ಮತ್ತು ತಾನ್ಯ ಹೋಪ್ ಜಬರ್ ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು.

ಇದೀಗ, ಈ ಹಾಡಿನ ವಿಡಿಯೋ ವರ್ಷನ್ ಬಿಡುಗಡೆಯಾಗುತ್ತಿದೆ. ಇಷ್ಟು ದಿನ ಆಡಿಯೋ ಕೇಳಿ ಎಂಜಾಯ್ ಮಾಡಿದ್ದ ಸಂಗೀತಾಭಿಮಾನಿಗಳು ಈಗ ಬಸಣ್ಣಿ ಬಾ ವಿಡಿಯೋ ಝಲಕ್ ನೋಡಬಹುದು. ಹೌದು, ಏಪ್ರಿಲ್ 19 ರಂದು ಬೆಳಿಗ್ಗೆ 10 ಗಂಟೆಗೆ ಡಿ-ಬೀಟ್ಸ್ ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಲಿದೆ.
ಸದ್ಯ, ಬಸಣ್ಣಿ ಬಾ ಲಿರಿಕಲ್ ವಿಡಿಯೋ 23 ಮಿಲಿಯನ್ ವೀಕ್ಷಣೆ ಕಂಡಿದೆ. ಹರಿಕೃಷ್ಣ ಸಂಗೀತ ನೀಡಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದರು. ಸ್ವತಃ ಹರಿಕೃಷ್ಣ ಮತ್ತು ವರ್ಷ ಬಿ ಸುರೇಶ್ ಅವರೇ ಹಾಡಿದ್ದರು.
ಇನ್ನುಳಿದಂತೆ ಹರಿಕೃಷ್ಣ ಮತ್ತು ಪಿ ಕುಮಾರ್ ಯಜಮಾನ ಚಿತ್ರವನ್ನ ನಿರ್ದೇಶನ ಮಾಡಿದ್ದು, ಬಿ ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಿಸಿದ್ದರು. ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ಠಾಕೂರ್ ಅನೂಪ್ ಸಿಂಗ್, ದೇವರಾಜ್, ಧನಂಜಯ್, ರವಿಶಂಕರ್, ಸಾಧುಕೋಕಿಲಾ ಸೇರಿದಂತೆ ಹಲವರು ನಟಿಸಿದ್ದರು.


Click it and Unblock the Notifications











