ಕಬಾಲಿ, ರೋಬೋ ದಾಖಲೆ ಬ್ರೇಕ್ ಮಾಡುವತ್ತಾ ಕೆಜಿಎಫ್ ಹೆಜ್ಜೆ.!
ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ವರ್ಲ್ಡ್ ವೈಡ್ ಬಾಕ್ಸ್ ಅಫೀಸ್ ಕಲೆಕ್ಷನ್ ನಲ್ಲಿ ನೂರು ಕೋಟಿ ಗಳಿಸುವ ಸನಿಹದಲ್ಲಿದೆ. ಈಗಾಗಲೇ 50 ಗಳಿಸಿ, 100 ಕೋಟಿಯತ್ತ ಹೆಜ್ಜೆಯಿಟ್ಟಿದೆ. ಹಾಗ್ನೋಡಿದ್ರೆ, ಮೊದಲ ನೂರು ಗಳಿಸಿದ ಕನ್ನಡ ಸಿನಿಮಾ ಕೆಜಿಎಫ್ ಎಂಬ ದಾಖಲೆ ಮಾಡಲು ಸಜ್ಜಾಗುತ್ತಿದೆ.
ಇನ್ನೊಂದು ಕಡೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಮತ್ತು ಎಂಥೀರನ್ ಚಿತ್ರಗಳು ರೆಕಾರ್ಡ್ ಬ್ರೇಕ್ ಮಾಡುವ ಸುವರ್ಣ ಅವಕಾಶ ಕೆಜಿಎಫ್ ಚಿತ್ರಕ್ಕಿದೆ.
ಸದ್ಯದ ವರದಿ ಪ್ರಕಾರ ಕೆಜಿಎಫ್ ಸಿನಿಮಾದ ಹಿಂದಿ ವರ್ಷನ್ ಮೊದಲ ನಾಲ್ಕು ದಿನಗಳಲ್ಲಿ 12.10 ಕೋಟಿ ಗಳಿಸಿದೆ. ಶಂಕರ್ ನಿರ್ದೇಶನ 'ಐ' ಚಿತ್ರವನ್ನ ಹಿಂದಿಕ್ಕಿ ಮುನ್ನುಗತ್ತಿರುವ ಕೆಜಿಎಫ್ ಈಗ ರಜನಿ ಚಿತ್ರಗಳನ್ನ ದಾಖಲೆಯನ್ನ ಉಡೀಸ್ ಮಾಡಬಹುದು.? ಅದು ಹೇಗೆ? ಮುಂದೆ ಓದಿ.....

ಹಿಂದಿ ಡಬ್ ಸಿನಿಮಾಗಳಲ್ಲಿ ಕೆಜಿಎಫ್ 7ನೇ ಸ್ಥಾನ.!
ಹಿಂದಿಯಲ್ಲಿ ಡಬ್ ಆಗಿರುವ ಬೇರೆ ಭಾಷೆಯ ಚಿತ್ರಗಳ ಕಲೆಕ್ಷನ್ ಪಟ್ಟಿಯಲ್ಲಿ ಕೆಜಿಎಫ್ ಸಿನಿಮಾ ಏಳನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 (511ಕೋಟಿ), ಎರಡನೇ ಸ್ಥಾನದಲ್ಲಿ 2.0 (188 ಕೋಟಿ ನಾಟ್ ಔಟ್), ಮೂರನೇ ಸ್ಥಾನದಲ್ಲಿ ಬಾಹುಬಲಿ 1 (112 ಕೋಟಿ) ಗಳಿಸಿ ಟಾಪ್ ಮೂರರಲ್ಲಿದೆ. 12.1 ಕೋಟಿ ಗಳಿಸಿರುವ ಕೆಜಿಎಫ್ ಏಳನೇ ಸ್ಥಾನದಲ್ಲಿದೆ.

'ಕಬಾಲಿ' ದಾಖಲೆ ಬ್ರೇಕ್ ಮಾಡಬಹುದು
ಟಾಪ್ ಹತ್ತರ ಪಟ್ಟಿಯಲ್ಲಿ ರಜನಿಕಾಂತ್ ಅಭಿನಯದ ಕಬಾಲಿ (24 ಕೋಟಿ) ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ರಜನಿಯ ಇನ್ನೊಂದು ಸಿನಿಮಾ ಎಂಥಿರನ್ (22 ಕೋಟಿ) ಗಳಿಸಿ ಐದನೇ ಸ್ಥಾನದಲ್ಲಿದೆ. ಆರನೇ ಸ್ಥಾನದಲ್ಲಿ ಕಮಲ್ ಹಾಸನ್ ಅಭಿನಯದ ವಿಶ್ವರೂಪಂ (13.1ಕೋಟಿ) ಇದೆ. ಹಾಗ್ನೋಡಿದ್ರೆ, ಕೆಜಿಎಫ್ ಸಿನಿಮಾ ವಿಶ್ವರೂಪಂ ಚಿತ್ರವನ್ನ ಹಿಂದಿಕ್ಕುವುದು ಬಹುತೇಕ ಖಚಿತ. ಆದ್ರೆ, ತಲೈವಾ ಚಿತ್ರಗಳ ಹಿಂದಿಕ್ಕಲು ಟ್ರೈ ಮಾಡಬಹುದು.

24.1 ಕೋಟಿ ಗಳಿಸಬೇಕಿದೆ ಕೆಜಿಎಫ್
ರಜನಿಕಾಂತ್ ಚಿತ್ರಗಳ ದಾಖಲೆ ಮುರಿಯಬೇಕಾದರೇ, ಕೆಜಿಎಫ್ 24.1ಕೋಟಿ ಗಳಿಸಬೇಕಿದೆ. ಸದ್ಯದ ಯಶಸ್ಸು ನೋಡ್ತಿದ್ರೆ ಬಹುಶಃ ಗಳಿಸಬಹುದು ಎಂಬ ನಿರೀಕ್ಷೆ ಇದೆ. ಆದ್ರೆ, ಎರಡನೇ ವಾರಾಂತ್ಯಕ್ಕೆ ಕೆಜಿಎಫ್ ಕಲೆಕ್ಷನ್ ಹೇಗಿರುತ್ತೆ ಎಂಬುದರ ಮೇಲೆ ಇದು ನಿರ್ಣಯವಾಗಲಿದೆ.

ಕಮಲ್ ಹಾಸನ್ ಚಿತ್ರ ಮೀರಿಸಿದ ಕೆಜಿಎಫ್
ಕಮಲ್ ಹಾಸನ್ ನಟನೆಯ ಇಂಡಿಯನ್ ಸಿನಿಮಾ 12 ಕೋಟಿ ಗಳಿಸಿತ್ತು. ಈ ದಾಖಲೆಯನ್ನ ಕೆಜಿಎಫ್ ಬ್ರೇಕ್ ಮಾಡಿದೆ. ಇದಕ್ಕೂ ಮುಂಚೆ ಶಂಕರ್ ನಿರ್ದೇಶನದ ಐ ಸಿನಿಮಾ 11.5 ಕೋಟಿ ಕಲೆಕ್ಷನ್ ಮಾಡಿತ್ತು. ಆ ಚಿತ್ರವನ್ನ ಕೆಜಿಎಫ್ ಹಿಂದಿಕ್ಕಿದೆ. ಕೊನೆಯದಾಗಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಬಾಂಬೆ' ಸಿನಿಮಾ 10 ಕೋಟಿ ಗಳಿಸಿ ಕೊನೆಯ ಸ್ಥಾನದಲ್ಲಿದೆ.


Click it and Unblock the Notifications











