For Quick Alerts
  ALLOW NOTIFICATIONS  
  For Daily Alerts

  ವಿಶ್ವದ ಬೇಡಿಕೆಯ ನಟ: ಶಾರೂಖ್, ಅಲ್ಲು ಅರ್ಜುನ್, ಪ್ರಿಯಾಂಕಾ ಟಾಪ್

  |

  ವಿಶ್ವದ ಅತ್ಯಂತ ಬೇಡಿಕೆ ನಟರ ಪಟ್ಟಿಯಲ್ಲಿ ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ಶಾರೂಖ್ ಖಾನ್ ನಂತರದ ಸ್ಥಾನದಲ್ಲಿ ತೆಲುಗು ನಟ ಅಲ್ಲು ಅರ್ಜುನ್, ನಟಿ ಪ್ರಿಯಾಂಕಾ ಚೋಪ್ರಾ ಇದ್ದಾರೆ ಎಂದು ಕಂಟೆಂಟ್ ಡಿಮ್ಯಾಂಡ್ ಅನಾಲಿಟಿಕ್ಸ್ ಕಂಪನಿ ವರದಿ ಮಾಡಿದೆ.

  ಜುಲೈ 20 ರಿಂದ ಆಗಸ್ಟ್ 18 ರವರೆಗೆ ಈ ಸಮೀಕ್ಷೆ ಮಾಡಲಾಗಿದ್ದು, ವಿಶ್ವಾದ್ಯಂತ ಹೆಚ್ಚು ಬೇಡಿಕೆಯಿರುವ 10 ತಾರೆಯರ ಪಟ್ಟಿಯಲ್ಲಿ ಭಾರತೀಯ ನಟರೇ ಹೆಚ್ಚು ಪ್ರಭಾವ ಬೀರಿದ್ದಾರೆ. ಟಾಪ್ ಹತ್ತರ ಪಟ್ಟಿ ಬಹಿರಂಗಪಡಿಸಿದ್ದು, ಇದರಲ್ಲಿ ಪ್ರಿಯಾ ಚೋಪ್ರಾ ಸೇರಿದಂತೆ ಮತ್ತೊಬ್ಬ ನಟಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ತಮಿಳು ನಟ ಧನುಶ್, ಮಲಯಾಳಂ ನಟ ದುಲ್ಕರ್ ಸಲ್ಮಾನ್, ಬಾಲಿವುಡ್ ನಟ ಸಲ್ಮಾನ್ ಖಾನ್, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹಾಗು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಟಾಪ್ ಹತ್ತರ ಪಟ್ಟಿಯಲ್ಲಿ ಇದ್ದಾರೆ. ಮುಂದೆ ಓದಿ...

  ಸೌತ್ ಇಂಡಿಯಾದ ಟಾಪ್ ವಿಲನ್: ಜಗಪತಿ ಬಾಬು ಸಂಭಾವನೆ ಎಷ್ಟಿದೆ?ಸೌತ್ ಇಂಡಿಯಾದ ಟಾಪ್ ವಿಲನ್: ಜಗಪತಿ ಬಾಬು ಸಂಭಾವನೆ ಎಷ್ಟಿದೆ?

  ಮೂರು ವರ್ಷದಿಂದ ಸಿನಿಮಾನೇ ಮಾಡಿಲ್ಲ

  ಮೂರು ವರ್ಷದಿಂದ ಸಿನಿಮಾನೇ ಮಾಡಿಲ್ಲ

  2018ರಲ್ಲಿ ತೆರೆಕಂಡ 'ಜೀರೋ' ಚಿತ್ರದ ನಂತರ ಶಾರೂಖ್ ಖಾನ್ ನಟನೆಯ ಚಿತ್ರ ಬಿಡುಗಡೆಯಾಗಲೇ ಇಲ್ಲ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ಶಾರೂಖ್ ನಟಿಸುತ್ತಿದ್ದು, ಮುಂದಿನ ವರ್ಷ ತೆರೆಗೆ ಬರುವ ತಯಾರಿ ನಡೆದಿದೆ. ಇದರ ಜೊತೆ ತಮಿಳು ನಿರ್ದೇಶಕ ಅಟ್ಲಿ ಜೊತೆ ಒಂದು ಸಿನಿಮಾ ಮಾಡುವುದಾಗಿ ಸುದ್ದಿ ಹರಿದಾಡಿದೆ. ಅಧಿಕೃತವಾಗಿ ಎಲ್ಲಿಯೂ ಘೋಷಣೆಯಾಗಿಲ್ಲ. ರಾಜ್ ಕುಮಾರ್ ಹಿರಾನಿ ಜೊತೆಯೂ ಶಾರೂಖ್ ಸಿನಿಮಾ ಲೈನ್ ಅಪ್ ಆಗಿದೆ ಎಂಬ ಮಾಹಿತಿ ಇದೆ. ಕಳೆದ ಮೂರು ವರ್ಷದಿಂದ ಸಿನಿಮಾಗಳೇ ಇಲ್ಲದಿದ್ದರೂ ಶಾರೂಖ್ ಖಾನ್, ವಿಶ್ವದ ಹೆಚ್ಚು ಬೇಡಿಕೆಯ ನಟರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಸರ್ಪ್ರೈಸ್ ಆಗಿದೆ.

  ಭಾರತದ ಟಾಪ್ ನಿರ್ದೇಶಕರಿಂದ ನಿರ್ಮಾಣ ಸಂಸ್ಥೆ, ಚೊಚ್ಚಲ ಚಿತ್ರ ಯಾವುದು?ಭಾರತದ ಟಾಪ್ ನಿರ್ದೇಶಕರಿಂದ ನಿರ್ಮಾಣ ಸಂಸ್ಥೆ, ಚೊಚ್ಚಲ ಚಿತ್ರ ಯಾವುದು?

  ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು

  ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು

  ತೆಲುಗು ಸಿನಿಮಾ ಇಂಡಸ್ಟ್ರಿಯ ಪೈಕಿ ಇಬ್ಬರು ನಟರು ಟಾಪ್ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಪ್ರಿನ್ಸ್ ಮಹೇಶ್ ಬಾಬು. ಅಲ್ಲು ಅರ್ಜುನ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ದಲ್ಲಿ ನಟಿಸುತ್ತಿದ್ದಾರೆ. ಎರಡು ಭಾಗವಾಗಿ ಈ ಚಿತ್ರ ರಿಲೀಸ್ ಆಗಲಿದ್ದು, ಮೊದಲನೇ ಭಾಗ ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಈ ಕಡೆ ಮಹೇಶ್ ಬಾಬು ಅಭಿನಯದಲ್ಲಿ ತಯಾರಾಗುತ್ತಿರುವ 'ಸರ್ಕಾರು ವಾರಿ ಪಾಟ' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರ್ತಿದೆ. ಅಲ್ಲು ಅರ್ಜುನ್ ಎರಡನೇ ಸ್ಥಾನದಲ್ಲಿದ್ದರೆ, ಮಹೇಶ್ ಬಾಬು ಎಂಟನೇ ಸ್ಥಾನದಲ್ಲಿದ್ದಾರೆ.

  ಸಲ್ಮಾನ್ ಮತ್ತು ಸಲ್ಮಾನ್ ಖಾನ್

  ಸಲ್ಮಾನ್ ಮತ್ತು ಸಲ್ಮಾನ್ ಖಾನ್

  ಮಲಯಾಳಂ ಇಂಡಸ್ಟ್ರಿಯಿಂದ ದುಲ್ಕರ್ ಸಲ್ಮಾನ್ ಟಾಪ್ ಹತ್ತರ ಪಟ್ಟಿಯಲ್ಲಿದ್ದಾರೆ. ಆರನೇ ಸ್ಥಾನದಲ್ಲಿ ದುಲ್ಕರ್ ಇದ್ದರೆ, ಏಳನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಅವಕಾಶ ಪಡೆದುಕೊಂಡಿದ್ದಾರೆ. ದಬಾಂಗ್ 3 ಚಿತ್ರದ ಬಳಿಕ ರಾಧೇ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಈಗ ಟೈಗರ್ 3 ಚಿತ್ರದ ಶೂಟಿಂಗ್‌ನಲ್ಲಿ ಸಲ್ಲು ಭಾಯ್ ಬ್ಯುಸಿ ಇದ್ದಾರೆ.

  ಪ್ರಿಯಾಂಕಾ ಮತ್ತು ಕಿಯಾರಾ

  ಪ್ರಿಯಾಂಕಾ ಮತ್ತು ಕಿಯಾರಾ

  ಬಾಲಿವುಡ್ ಮತ್ತು ಹಾಲಿವುಡ್ ಚಿತ್ರರಂಗದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಹೆಸರು ಸರ್ಪ್ರೈಸ್ ಆಗಲಿಲ್ಲ. ಆದರೆ, ಕಬೀರ್ ಖಾನ್ ಚಿತ್ರದ ಕಿಯರಾ ಅಡ್ವಾಣಿ ಹೆಸರು ನಿಜಕ್ಕೂ ಸರ್ಪ್ರೈಸ್. ಕತ್ರಿನಾ, ದೀಪಿಕಾ, ಸನ್ನಿ ಲಿಯೋನ್ ಅಂತಹ ಪ್ರಭಾವಿ ನಟಿಯರ ನಡುವೆ ಕಿಯಾರಾ ಜಾಗತಿಕ ಸಮೀಕ್ಷೆಯಲ್ಲಿ ಸ್ಥಾನ ಪಡೆದಿರುವುದು ಅಚ್ಚರಿ. ಪ್ರಿಯಾಂಕಾ 3ನೇ ಸ್ಥಾನ ಹಾಗೂ ಕಿಯಾರಾ 10ನೇ ಸ್ಥಾನದಲ್ಲಿದ್ದಾರೆ.

  ತಮಿಳು ನಟ ಧನುಶ್

  ತಮಿಳು ನಟ ಧನುಶ್

  ಯಾವುದೇ ಪ್ಯಾನ್ ಇಂಡಿಯಾ ಚಿತ್ರವಿಲ್ಲದಿದ್ದರೂ ಪ್ಯಾನ್ ಇಂಡಿಯಾ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ನಟ ಧನುಶ್. ಇತ್ತೀಚಿಗಷ್ಟೆ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸಿ ಬಂದಿದ್ದು, ಆ ಸಿನಿಮಾ ರಿಲೀಸ್ ಆಗಿಲ್ಲ. ಈ ಕಡೆ ತಮಿಳಿನಲ್ಲಿ ಸತತವಾಗಿ ಧನುಶ್ ಚಿತ್ರಗಳು ತೆರೆಗೆ ಬರ್ತಾನೆ ಇದೆ. ಈಗ ವಿಶ್ವದ ಅತಿ ಹೆಚ್ಚು ಬೇಡಿಕೆಯ ನಟರ ಟಾಪ್ ಹತ್ತರ ಪಟ್ಟಿಯಲ್ಲಿ ಧನುಶ್ ಐದನೇ ಸ್ಥಾನದಲ್ಲಿದ್ದಾರೆ.

  English summary
  Most In Demand Actors Worldwide 2021: Shah Rukh Khan, Allu arjun and Priyanka Chopra are in Top 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X