ಕ್ರಿಸ್‌ಮಸ್ ದಿನದಂದು ಭಾರತದಲ್ಲಿ ಅತಿಹೆಚ್ಚು ಗಳಿಸಿದ 5 ಚಿತ್ರಗಳು; 'ವೇದ' ಚಿತ್ರಕ್ಕೆ ಎಷ್ಟನೇ ಸ್ಥಾನ?

ಈ ವರ್ಷ ಬಿಡುಗಡೆಯಾದ ಹಲವಾರು ಚಿತ್ರಗಳು ನಿರೀಕ್ಷೆಗೂ ಮೀರಿ ಗಳಿಕೆ ಮಾಡಿವೆ. ಭಾರತದ ಬರೋಬ್ಬರಿ 30 ಚಿತ್ರಗಳು ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ್ದು, ಹೆಚ್ಚಾಗಿ ಸೌತ್ ಇಂಡಸ್ಟ್ರಿ ಚಿತ್ರಗಳು ಅಬ್ಬರಿಸಿ ಬಾಲಿವುಡ್ ಎದುರು ಗೆದ್ದು ಬೀಗಿವೆ. ದಕ್ಷಿಣ ಭಾರತದ ಚಿತ್ರಗಳಾದ ಕೆಜಿಎಫ್ ಚಾಪ್ಟರ್ 2 ಹಾಗೂ ಆರ್ ಆರ್ ಆರ್ ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿಗಿಂತ ಅಧಿಕ ಹಣ ಗಳಿಸಿದ ಇಂಡಿಯನ್ ಸಿನಿಮಾಸ್ ಎನಿಸಿಕೊಂಡಿವೆ.

ಇನ್ನು ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್‌ನ ಹಲವಾರು ಚಿತ್ರಗಳು ಸೇರಿದಂತೆ ಸೌತ್ ಇಂಡಸ್ಟ್ರಿಯ ಹಲವು ಬಹು ನಿರೀಕ್ಷಿತ ಚಿತ್ರಗಳು ಸೋಲನ್ನೂ ಸಹ ಕಂಡಿವೆ. ಹೀಗೆ ದೊಡ್ಡ ಸೋಲು ಹಾಗೂ ಅತಿದೊಡ್ಡ ಗೆಲುವುಗಳನ್ನು ಹೊಂದಿರುವ 2022ರ ಅಂತಿಮ ತಿಂಗಳ ನಾಲ್ಕನೇ ಶುಕ್ರವಾರ ಬಿಡುಗಡೆಗೊಂಡ ಚಿತ್ರಗಳೂ ಸಹ ಒಳ್ಳೆಯ ಗಳಿಕೆಯನ್ನು ಮಾಡುತ್ತಿವೆ.

ಡಿಸೆಂಬರ್ 23ರ ಶುಕ್ರವಾರ ಕನ್ನಡದಲ್ಲಿ ಶಿವ ರಾಜ್‌ಕುಮಾರ್ ನಟನೆಯ ವೇದ ಚಿತ್ರ ಬಿಡುಗಡೆಗೊಂಡರೆ, ತೆಲುಗಿನಲ್ಲಿ ರವಿತೇಜಾ ನಟನೆಯ ಧಮಾಕಾ ಬಿಡುಗಡೆಗೊಂಡಿದೆ. ಇನ್ನು ತಮಿಳಿನಲ್ಲಿ ನಯನತಾರಾ ನಟನೆಯ ಹಾರರ್ ಥ್ರಿಲ್ಲರ್ ಕನೆಕ್ಟ್ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟನೆಯ ಕಾಪ್ಪ ಚಿತ್ರಗಳು ಬಿಡುಗಡೆಗೊಂಡಿವೆ. ಬಾಲಿವುಡ್‌ನಲ್ಲಿ ಸರ್ಕಸ್ ಎಂಬ ಚಿತ್ರವೂ ಸಹ ತೆರೆಗೆ ಬಂದಿದೆ. ಹೀಗೆ ಇಷ್ಟು ದೊಡ್ಡ ಚಿತ್ರಗಳು ಡಿಸೆಂಬರ್ 23ರ ಶುಕ್ರವಾರ ಬಿಡುಗಡೆಯಾದರೂ ಸಹ ಇದಕ್ಕೂ ಹಿಂದಿನ ವಾರದಲ್ಲಿ ತೆರೆಕಂಡಿದ್ದ 'ಅವತಾರ್ ದ ವೇ ಆಫ್ ವಾಟರ್' ಚಿತ್ರದ ಅಬ್ಬರ ಕಡಿಮೆಯಾಗಿಲ್ಲ.

ಕ್ರಿಸ್‌ಮಸ್ ದಿನದ ಗಳಿಕೆಯಲ್ಲಿ ಅವತಾರ್ ಟಾಪ್

ಕ್ರಿಸ್‌ಮಸ್ ದಿನದ ಗಳಿಕೆಯಲ್ಲಿ ಅವತಾರ್ ಟಾಪ್

ಇನ್ನು ಮೇಲ್ಕಂಡ ಚಿತ್ರಗಳು ಈ ವಾರ ಬಿಡುಗಡೆಯಾಗಿದ್ದರೂ ಸಹ ಕ್ರಿಸ್‌ಮಸ್ ದಿನದಂದು ( ಡಿಸೆಂಬರ್ 25 ) ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಯನ್ನು ಅವತಾರ್ ದ ವೇ ಆಫ್ ವಾಟರ್ ತನ್ನದಾಗಿಸಿಕೊಂಡಿದೆ. ಹೌದು, ಕ್ರಿಸ್‌ಮಸ್ ಹಾಗೂ ಭಾನುವಾರದ ಬಿಡುವಿನಲ್ಲಿದ್ದ ಸಿನಿ ರಸಿಕರು ಡಿಸೆಂಬರ್ 25ರಂದು ಚಿತ್ರಮಂದಿರಗಳತ್ತ ಹೆಜ್ಜೆ ಹಾಕಿದ್ದು, ಹೆಚ್ಚು ಹಣವನ್ನು ಅವತಾರ್ ತೆಕ್ಕೆಗೆ ಹಾಕಿದ್ದಾರೆ. ಈ ದಿನದಂದು ಭಾರತದಲ್ಲಿ 36.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ ಅವತಾರ್ ದ ವೇ ಆಫ್ ವಾಟರ್ ಚಿತ್ರ.

ವೇದ ಐದನೇ ಸ್ಥಾನದಲ್ಲಿ

ವೇದ ಐದನೇ ಸ್ಥಾನದಲ್ಲಿ

ಇನ್ನು ಕ್ರಿಸ್‌ಮಸ್ ವಿಶೇಷ ದಿನದಂದು ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ವೇದ ಚಿತ್ರ ಐದನೇ ಸ್ಥಾನದಲ್ಲಿದೆ. ತನ್ನ ಮೂರನೇ ದಿನ 1.90 ಕೋಟಿ ರೂಪಾಯಿಗಳನ್ನು ಗಳಿಸಿದೆ ವೇದ ಚಿತ್ರ. ಇನ್ನು ವೇದ ಚಿತ್ರದ ಕತೆಗೆ ಕನ್ನಡ ಸಿನಿ ರಸಿಕರು ಫುಲ್ ಮಾರ್ಕ್ಸ್ ನೀಡಿದ್ದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಚಿತ್ರ ಮೊದಲ ಹಾಗೂ ಎರಡನೇ ದಿನಗಳಿಗಿಂತ ಮೂರನೇ ದಿನ ಹೆಚ್ಚು ಗಳಿಸಿದೆ.

ಅತಿಹೆಚ್ಚು ಗಳಿಸಿದ ಟಾಪ್ 5 ಚಿತ್ರಗಳು

ಅತಿಹೆಚ್ಚು ಗಳಿಸಿದ ಟಾಪ್ 5 ಚಿತ್ರಗಳು

ಕ್ರಿಸ್‌ಮಸ್ 2022ರಂದು ಭಾರತದಲ್ಲಿ ಅತಿಹೆಚ್ಚುಕಲೆಕ್ಷನ್ ಮಾಡಿದ ಚಿತ್ರಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

1. ಅವತಾರ್ ದ ವೇ ಆಫ್ ವಾಟರ್: 36.25 ಕೋಟಿ ಗ್ರಾಸ್ ಕಲೆಕ್ಷನ್

2. ಸರ್ಕಸ್ : 8.93 ಕೋಟಿ ಗ್ರಾಸ್ ಕಲೆಕ್ಷನ್

3. ಧಮಾಕಾ : 6.89 ಕೋಟಿ ಗ್ರಾಸ್ ಕಲೆಕ್ಷನ್

4. ದೃಶ್ಯಂ : 2.03 ಕೋಟಿ ಗ್ರಾಸ್ ಕಲೆಕ್ಷನ್

5. ವೇದ : 1.90 ಕೋಟಿ ಗ್ರಾಸ್ ಕಲೆಕ್ಷನ್

More from Filmibeat

English summary
Top 5 list of films which grossed more in Christmas festival day in India. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X