Don't Miss!
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ 5 ಚಿತ್ರಗಳಿವು; ಸೌತ್ ಸಿನಿಮಾ ಅಬ್ಬರ, ಬಾಲಿವುಡ್ ತತ್ತರ!
2022 ಭಾರತ ಚಲನಚಿತ್ರರಂಗದ ಪಾಲಿಗೆ ಸುವರ್ಣ ವರ್ಷ ಎಂದೇ ಹೇಳಬಹುದು. ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದಾಗಿ ಉಂಟಾಗಿದ್ದ ಲಾಕ್‌ಡೌನ್ ಸಮಸ್ಯೆಯಿಂದ ಬಳಲಿದ್ದ ಸಿನಿಮಾ ಕ್ಷೇತ್ರ ಈ ವರ್ಷ ದೊಡ್ಡ ಮಟ್ಟದಲ್ಲಿ ಸುಧಾರಿಸಿಕೊಂಡಿತು. ಇನ್ನು ಈ ವರ್ಷ ಭಾರತದ ಬರೋಬ್ಬರಿ ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿ ಅಬ್ಬರಿಸಿದವು.
ಅದರಲ್ಲಿಯೂ ದಕ್ಷಿಣ ಭಾರತ ಚಿತ್ರರಂಗಗಳ ಚಿತ್ರಗಳು ಈ ವರ್ಷ ಎಷ್ಟರ ಮಟ್ಟಿಗೆ ಅಬ್ಬರಿಸಿವೆ ಎಂದರೆ ಬಾಲಿವುಡ್ ಚಿತ್ರಗಳೂ ಸಹ ದಕ್ಷಿಣ ಭಾರತ ಚಿತ್ರರಂಗದ ಮುಂದೆ ಮಕಾಡೆ ಮಲಗಿವೆ ಎಂದರೆ ತಪ್ಪಾಗಲಾರದು. ಗಳಿಕೆಯಲ್ಲಿ ಬಿಗಿ ಹಿಡಿತ ಸಾಧಿಸಿ ಸೌತ್ ಸಿನಿಮಾಗಳನ್ನು ಹಿಂದಿಕ್ಕುತ್ತಿದ್ದ ಬಾಲಿವುಡ್‌ನ ಯಾವ ಸಿನಿಮಾವೂ ಸಹ ಈ ವರ್ಷ ಬೆಸ್ಟ್ ಸಿನಿಮಾಗಳ ಟಾಪ್ ಐದರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.
ಕರ್ನಾಟಕ
ಚಲನಚಿತ್ರ
ಅಕಾಡೆಮಿ
ಅಧ್ಯಕ್ಷರಾಗಿ
ಅಶೋಕ್
ಕಶ್ಯಪ್
ಅಧಿಕಾರ
ಸ್ವೀಕಾರ!
ಇನ್ನು ಈ ವರ್ಷ ಅತಿಹೆಚ್ಚು ಜನರಿಂದ ವೀಕ್ಷಿಸಿದ ಚಿತ್ರಗಳ ಪಟ್ಟಿಯಲ್ಲೂ ಅಗ್ರ ಐದು ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಬಾಲಿವುಡ್ ಚಿತ್ರಗಳು ವಿಫಲವಾಗಿವೆ. ಹೌದು, ಈ ವರ್ಷ ಭಾರತದಲ್ಲಿ ಅತಿಹೆಚ್ಚು ಜನ ವೀಕ್ಷಿಸಿದ ಚಿತ್ರಗಳ ಟಾಪ್ 5 ಪಟ್ಟಿ ಬಿಡುಗಡೆಗೊಂಡಿದ್ದು, ಈ ಪೈಕಿ ಎಲ್ಲಾ ಚಿತ್ರಗಳೂ ಸಹ ದಕ್ಷಿಣ ಭಾರತದ ಚಿತ್ರಗಳೇ ಆಗಿವೆ. ಈ ಕುರಿತ ವಿವರ ಈ ಕೆಳಕಂಡಂತಿದೆ..

ಅತಿಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರ ಕೆಜಿಎಫ್ ಚಾಪ್ಟರ್ 2
ವಿಶ್ವದಾದ್ಯಂತ 1250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಗಳಿಸಿದ ಭಾರತದ ಚಿತ್ರ ಎಂಬ ದಾಖಲೆಯನ್ನು ಬರೆದಿರುವ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಚಿತ್ರ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಚಿತ್ರ ಎಂಬ ದಾಖಲೆಯನ್ನೂ ಸಹ ಬರೆದಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಭಾರತದಲ್ಲಿ 5.1 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಕೆಜಿಎಫ್ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿ ದಾಖಲೆ ಬರೆದಿದೆ. ಕನ್ನಡಿಗರು ನಿರ್ಮಿಸಿದ ಚಿತ್ರವೊಂದು ಇಷ್ಟರ ಮಟ್ಟಿಗೆ ಅಬ್ಬರಿಸಿದೆ ಎನ್ನುವುದು ಹೆಮ್ಮೆಯೇ ಸರಿ.

ಟಾಪ್ 5 ಪಟ್ಟಿ
ಈ ವರ್ಷ ಭಾರತದಲ್ಲಿ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ( ಟಿಕೆಟ್ ಮಾರಾಟ ) ಚಿತ್ರಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..
1. ಕೆಜಿಎಫ್ ಚಾಪ್ಟರ್ 2 - 5.15 ಕೋಟಿ ಜನರಿಂದ ವೀಕ್ಷಣೆ ( ಟಿಕೆಟ್ ಮಾರಾಟ )
2. ಆರ್ ಆರ್ ಆರ್ - 4.43 ಕೋಟಿ ಜನರಿಂದ ವೀಕ್ಷಣೆ ( ಟಿಕೆಟ್ ಮಾರಾಟ )
3. ಪೊನ್ನಿಯಿನ್ ಸೆಲ್ವನ್ 1 - 2.17 ಕೋಟಿ ಜನರಿಂದ ವೀಕ್ಷಣೆ ( ಟಿಕೆಟ್ ಮಾರಾಟ )
4. ಕಾಂತಾರ - 2.08 ಕೋಟಿ ಜನರಿಂದ ವೀಕ್ಷಣೆ ( ಟಿಕೆಟ್ ಮಾರಾಟ )
5. ವಿಕ್ರಮ್ - 2.02 ಕೋಟಿ ಜನರಿಂದ ವೀಕ್ಷಣೆ ( ಟಿಕೆಟ್ ಮಾರಾಟ )

ಈ ಚಿತ್ರಗಳು ಭಾರತದಲ್ಲಿ ಗಳಿಸಿದ್ದೆಷ್ಟು?
ಭಾರತದಲ್ಲಿ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಚಿತ್ರಗಳ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮೇಲ್ಕಂಡ ಐದು ಚಿತ್ರಗಳು ಭಾರತದಲ್ಲಿ ಎಷ್ಟು ಗಳಿಕೆ ಮಾಡಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂಗತಿದೆ.
1. ಕೆಜಿಎಫ್ ಚಾಪ್ಟರ್ 2 - 1026 ಕೋಟಿ
2. ಆರ್ ಆರ್ ಆರ್ - 922 ಕೋಟಿ
3. ಕಾಂತಾರ - 359 ಕೋಟಿ
4. ಪೊನ್ನಿಯಿನ್ ಸೆಲ್ವನ್ 1 - 328 ಕೋಟಿ
5. ವಿಕ್ರಮ್ - 300 ಕೋಟಿ