For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ವೀಕ್ಷಣೆ ಕಂಡ ಭಾರತದ ಟೀಸರ್/ಟ್ರೈಲರ್ ಯಾವುದು?

  |

  ಟೀಸರ್ ಮತ್ತು ಟ್ರೈಲರ್ ಬಿಡುಗಡೆಯಾದಾಗ ಯ್ಯೂಟ್ಯೂಬ್ ವೀಕ್ಷಣೆ ಎನ್ನುವುದು ಈಗ ಪ್ರತಿಷ್ಠೆಯಾಗಿದೆ. ಎಷ್ಟು ಗಂಟೆಯಲ್ಲಿ ಎಷ್ಟು ವೀಕ್ಷಣೆ ಕಂಡಿದೆ, ಯಾವ ಟೀಸರ್ ಅಥವಾ ಟ್ರೈಲರ್ ಹೆಚ್ಚು ವೀಕ್ಷಣೆ ಕಂಡಿದೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುವುದು ಟ್ರೆಂಡ್ ಆಗಿದೆ.

  ಇತ್ತೀಚಿಗಷ್ಟೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವ ಟೀಸರ್ ಮಾಡದ ರೆಕಾರ್ಡ್ ಬರೆದಿದೆ. ಹಾಗಾದ್ರೆ, ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಭಾರತೀಯ ಟೀಸರ್ ಅಥವಾ ಟ್ರೈಲರ್ ಯಾವುದು? ಮುಂದೆ ಓದಿ....

  ಕೆಜಿಎಫ್ 2 ಟೀಸರ್ ಸಕ್ಸಸ್ ಹಿಂದಿದೆ ಮಾಸ್ಟರ್ ಪ್ಲಾನ್, ಆ ಕಾರಣದಿಂದಲೇ ಈ ದಾಖಲೆ ಆಗಿದ್ದು!ಕೆಜಿಎಫ್ 2 ಟೀಸರ್ ಸಕ್ಸಸ್ ಹಿಂದಿದೆ ಮಾಸ್ಟರ್ ಪ್ಲಾನ್, ಆ ಕಾರಣದಿಂದಲೇ ಈ ದಾಖಲೆ ಆಗಿದ್ದು!

  ಅಂದು KGF 2 ಟೀಸರ್ ಲೀಕ್, ಇಂದು ಮಾಸ್ಟರ್ ಸಿನಿಮಾನೇ ಲೀಕ್ | Filmibeat Kannada
  ಐದನೇ ಸ್ಥಾನದಲ್ಲಿ ಭಾಗಿ 3

  ಐದನೇ ಸ್ಥಾನದಲ್ಲಿ ಭಾಗಿ 3

  2020ರ ಫೆಬ್ರವರಿ ತಿಂಗಳಲ್ಲಿ ತೆರೆಕಂಡಿದ್ದ ಭಾಗಿ 3 ಸಿನಿಮಾದ ಟ್ರೈಲರ್ 118 ಮಿಲಿಯನ್‌ಗೂ (118,052,468) ಹೆಚ್ಚು ವೀಕ್ಷಣೆ ಕಂಡಿದೆ. ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಟ್ರೈಲರ್‌ಗಳ ಪಟ್ಟಿಯಲ್ಲಿ ಟೈಗರ್ ಶ್ರಾಫ್ ನಟನೆಯ ಭಾಗಿ 3 ಐದನೇ ಸ್ಥಾನದಲ್ಲಿದೆ.

  ನಾಲ್ಕನೇ ಸ್ಥಾನದಲ್ಲಿ ಬಾಹುಬಲಿ 2

  ನಾಲ್ಕನೇ ಸ್ಥಾನದಲ್ಲಿ ಬಾಹುಬಲಿ 2

  2017ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿದ್ದ 'ಬಾಹುಬಲಿ ದಿ ಕನ್‌ಕ್ಯೂಷನ್' ಟ್ರೈಲರ್ 118 ಮಿಲಿಯನ್ (118,230,516) ವೀಕ್ಷಣೆ ಕಂಡಿದೆ. ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಪಟ್ಟಿಯಲ್ಲಿ ಬಾಹುಬಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ರಾಜಮೌಳಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ ನಟಿಸಿದ್ದರು.

  ಕೆಜಿಎಫ್ 2 ಟೀಸರ್‌ನಲ್ಲಿ ಬಯಲಾದ ಈ ಹೊಸ ಪಾತ್ರ ಯಾವುದು, ಯಾರು ಈ ನಟಿ?ಕೆಜಿಎಫ್ 2 ಟೀಸರ್‌ನಲ್ಲಿ ಬಯಲಾದ ಈ ಹೊಸ ಪಾತ್ರ ಯಾವುದು, ಯಾರು ಈ ನಟಿ?

  ಮೂರನೇ ಸ್ಥಾನದಲ್ಲಿ ಜೀರೋ

  ಮೂರನೇ ಸ್ಥಾನದಲ್ಲಿ ಜೀರೋ

  ಶಾರೂಖ್ ಖಾನ್, ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ನಟಿಸಿದ್ದ ಜೀರೋ ಚಿತ್ರದ ಟ್ರೈಲರ್ 122 ಮಿಲಿಯನ್ (122,454,645) ವೀಕ್ಷಣೆ ಕಂಡಿದೆ. ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಪಟ್ಟಿಯಲ್ಲಿ ಜೀರೋ ಮೂರನೇ ಸ್ಥಾನ ಪಡೆದುಕೊಂಡಿದೆ.

  ಎರಡನೇ ಸ್ಥಾನದಲ್ಲಿ ವಾರ್

  ಎರಡನೇ ಸ್ಥಾನದಲ್ಲಿ ವಾರ್

  ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸಿದ್ದ ವಾರ್ ಸಿನಿಮಾದ ಟ್ರೈಲರ್ 2019ರ ಆಗಸ್ಟ್ ತಿಂಗಳಲ್ಲಿ ತೆರೆಕಂಡಿತ್ತು. ಇದುವರೆಗೂ ಈ ಟ್ರೈಲರ್ 126 ಮಿಲಿಯನ್ (126,188,123) ವೀಕ್ಷಣೆ ಕಂಡಿದೆ. ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಪಟ್ಟಿಯಲ್ಲಿ ವಾರ್ ಎರಡನೇ ಸ್ಥಾನ ಪಡೆದುಕೊಂಡಿದೆ

  ಮೊದಲ ಸ್ಥಾನದಲ್ಲಿ ಕೆಜಿಎಫ್ 2

  ಮೊದಲ ಸ್ಥಾನದಲ್ಲಿ ಕೆಜಿಎಫ್ 2

  ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಜನವರಿ 7, 2021ರಂದು ರಂದು ಬಿಡುಗಡೆಯಾಗಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ನೂರು ಮಿಲಿಯನ್ ವೀಕ್ಷಣೆ ಕಂಡಿದೆ. ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಭಾರತದ ಟೀಸರ್ ಅಥವಾ ಟ್ರೈಲರ್‌ಗಳ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಟೀಸರ್ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ಕೆಜಿಎಫ್ 2 ಟೀಸರ್ ವೀಕ್ಷಣೆ 144 ಮಿಲಿಯನ್ (144,383,594) ದಾಟಿದೆ.

  English summary
  Kgf Chapter 2 Teaser breaks all previous record on youtube. here is the most Viewed indian Teaser or trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X