Most Watched Kannada Movies: ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಕನ್ನಡ ಚಿತ್ರಗಳು; ಯಶ್‌ದೇ ಹವಾ!

ಯುಟ್ಯೂಬ್.. ಮಾಡರ್ನ್ ಯುಗದಲ್ಲಿ ಪ್ರತಿಯೊಬ್ಬ ಮೊಬೈಲ್ ಬಳಕೆದಾರನೂ ಪ್ರತಿನಿತ್ಯವೂ ತಪ್ಪದೇ ಬಳಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಮೊಬೈಲ್ ಬಳಕೆದಾರರಿಗೆ ಎಲ್ಲಾ ರೀತಿಯ ವಿಡಿಯೊಗಳನ್ನು ಒದಗಿಸುವ ಯುಟ್ಯೂಬ್‌ನಲ್ಲಿ ಹೆಚ್ಚಾಗಿ ವೀಕ್ಷಣೆ ಪಡೆದುಕೊಳ್ಳುವುದು ಹಾಗೂ ಬೇಡಿಕೆ ಇರುವುದು ಮನರಂಜನಾ ಕ್ಷೇತ್ರದ ವಿಡಿಯೊಗಳಿಗೆ. ಹೌದು, ಎಂಟರ್‌ಟೈನ್‌ಮೆಂಟ್ ಯುಟ್ಯೂಬ್‌ನ ಅತ್ಯಮೂಲ್ಯ ಕೆಟಗರಿಯಾಗಿದೆ.

ಇನ್ನು ಈ ಮನರಂಜನಾ ಕೆಟಗರಿ ಅಡಿಯಲ್ಲಿ ಯುಟ್ಯೂಬ್‌ಗೆ ಹೆಚ್ಚಾಗಿ ಅಪ್‌ಲೋಡ್ ಆಗುವುದು ಸಿನಿಮಾ ಕುರಿತಾದ ವಿಡಿಯೊಗಳು. ವಿಶ್ವದಾದ್ಯಂತ ಇರುವ ಯಾವುದೇ ಭಾಷೆಯ ಚಿತ್ರರಂಗಗಳಾದರೂ ಅವು ಈ ಯುಟ್ಯೂಬ್ ಅನ್ನೇ ಅವಲಂಬಿಸಿವೆ. ಹೌದು, ಯಾವುದೇ ಭಾಷೆಯ ಚಿತ್ರಗಳನ್ನೇ ತೆಗೆದುಕೊಂಡರೂ ಅವುಗಳಿಗೆ ಸಂಬಂಧಿಸಿದ ಟೀಸರ್, ಟ್ರೈಲರ್ ಹಾಗೂ ಹಾಡುಗಳನ್ನು ಚಿತ್ರತಂಡಗಳು ಈ ಯುಟ್ಯೂಬ್‌ನಲ್ಲಿಯೇ ಬಿಡುಗಡೆ ಮಾಡಲಿವೆ.

top-5-most-viewed-kannada-films

ಇನ್ನು ಭಾರತ ಚಿತ್ರರಂಗದಲ್ಲಿಯೂ ಸಹ ಸಿನಿಮಾಗಳು ಯುಟ್ಯೂಬ್ ಮೇಲೆ ದೊಡ್ಡ ಮಟ್ಟದಲ್ಲಿಯೇ ಅವಲಂಬಿಸಿವೆ. ಹೊಸ ಚಿತ್ರಗಳ ವಿಡಿಯೊಗಳು ಯುಟ್ಯೂಬ್‌ನಲ್ಲಿ ಬಿಡುಗಡೆಗೊಳ್ಳಲಿದ್ದು, ಇವುಗಳ ಒಟ್ಟು ವೀಕ್ಷಣೆಗಳ ಸಂಖ್ಯೆಯ ಲೆಕ್ಕಾಚಾರ ಸಹ ದಾಖಲೆಗಳಲ್ಲಿ ಒಂದಾಗಿದೆ. ಇನ್ನು ಭಾರತ ಸಿನಿಮಾ ನಟರುಗಳ ಅಭಿಮಾನಿಗಳು ತಮ್ಮ ನಟನ ಚಿತ್ರಗಳ ವಿಡಿಯೊಗಳ ವೀಕ್ಷಣೆಗಳ ಸಂಖ್ಯೆಯನ್ನು ಇತರೆ ನಟರುಗಳ ಸಿನಿಮಾಗಳ ವಿಡಿಯೊಗಳ ವೀಕ್ಷಣೆಗಳ ಸಂಖ್ಯೆಗಳ ಜತೆ ಹೋಲಿಕೆ ಮಾಡುವ ಹವ್ಯಾಸ ಸಹ ಇದೆ. ಈ ಹವ್ಯಾಸ ಫ್ಯಾನ್ ವಾರ್‌ಗೂ ಸಹ ಎಡೆ ಮಾಡಿಕೊಟ್ಟಿದ್ದು, ತಮ್ಮ ನಟನ ಸಿನಿಮಾಗಳೇ ನಂಬರ್ ಒನ್ ಆಗಬೇಕೆಂಬ ಗುರಿಯನ್ನು ಅಭಿಮಾನಿಗಳು ಇಟ್ಟುಕೊಂಡಿರುತ್ತಾರೆ.

ಕನ್ನಡದಲ್ಲಿಯೂ ಸಹ ಇದೇ ರೀತಿಯ ರೂಢಿ ಇದ್ದು, ಸ್ಟಾರ್ ನಟರ ಅಭಿಮಾನಿಗಳು ತಮ್ಮ ನಟರ ನಟನೆಯ ಚಿತ್ರಗಳ ಹಾಡುಗಳು, ಟ್ರೈಲರ್ ಹಾಗೂ ಟೀಸರ್‌ಗಳು ದಾಖಲೆಯ ವೀಕ್ಷಣೆಗಳನ್ನು ಪಡೆದುಕೊಳ್ಳುವತ್ತ ಚಿತ್ತ ನೆಟ್ಟು ಈ ವಿಷಯದಲ್ಲಿಯೂ ಸಹ ಇತರೆ ನಟರ ಅಭಿಮಾನಿಗಳ ಜತೆ ಪೈಪೋಟಿಗೆ ಬಿದ್ದ ಉದಾಹರಣೆಗಳಿವೆ. ಇನ್ನು ಸದ್ಯ ಇದೇ ರೀತಿಯ ಅಂಕಿ ಅಂಶವೊಂದು ಹೊರಬಿದ್ದಿದ್ದು, ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಕನ್ನಡ ಚಿತ್ರಗಳ ಪಟ್ಟಿ ರಿವೀಲ್ ಆಗಿದೆ. ಈಗಿನ ಓಟಿಟಿ ಯುಗದಲ್ಲಿ ಸಿನಿಮಾಗಳನ್ನು ವಿವಿಧ ಅಪ್ಲಿಕೇಶನ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿಂದೆ ಓಟಿಟಿ ಜನಪ್ರಿಯತೆ ಗಳಿಸುವುದಕ್ಕೂ ಮುನ್ನ ಯುಟ್ಯೂಬ್‌ನಲ್ಲಿಯೇ ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತಾ ಇತ್ತು. ಈ ಚಿತ್ರಗಳ ಪೈಕಿ ಯಾವ ಚಿತ್ರಗಳು ಹೆಚ್ಚು ವ್ಯೂಸ್ ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಟನೆಯ, ಸಂತೋಷ್ ಆನಂದ್‌ರಾಮ್ ನಿರ್ದೇಶನದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ 77 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಳ್ಳುವುದರ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

2. ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತಿ ಕರಬಂಧ ನಟನೆಯ, ಪವನ್ ಒಡೆಯರ್ ನಿರ್ದೇಶನದ ಗೂಗ್ಲಿ ಚಿತ್ರ 57 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

3. ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಹರಿಪ್ರಿಯ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಚಿತ್ರ 47 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

4. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮಿಸ್ಟರ್ ಐರಾವತ ಸಿನಿಮಾ 44 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

5. ವಿಷ್ಣುವರ್ಧನ್ ನಟನೆಯ ಯಜಮಾನ ಚಿತ್ರ 43 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

More from Filmibeat

English summary
op 5 Most viewed Kannada films on YouTube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X