For Quick Alerts
  ALLOW NOTIFICATIONS  
  For Daily Alerts

  34 ವಯಸ್ಸು ದಾಟಿದರೂ ಕಂಕಣ ಭಾಗ್ಯ ಬಯಸದ ನಟಿಮಣಿಯರು

  |

  ಸಿನಿಮಾ ಕಲಾವಿದರಿಗೆ ವಯಸ್ಸು ಎನ್ನುವುದು ಕೇವಲ ನಂಬರ್ ಅಷ್ಟೆ. ಯಾವ ಚಿತ್ರಕ್ಕಾಗಲಿ ಅಥವಾ ಯಾವ ಪಾತ್ರಕ್ಕಾಗಲಿ ವಯಸ್ಸು ಸಮಸ್ಯೆಯಾಗಲ್ಲ. ಫಿಟ್ನೆಸ್ ಕಾಪಾಡಿಕೊಂಡರೆ ಸಾಕು, ಅವರ ಬೇಡಿಕೆ ಯಾವುದೇ ಕಾರಣಕ್ಕೂ ಕಮ್ಮಿಯಾಗಲ್ಲ.

  ಸಿನಿಮಾದಿಂದ ಹೊರಗೆ ಆ ಕಲಾವಿದರಿಗೆ ವೈಯಕ್ತಿಕ ಜೀವನ ಇದೆ. ಆ ಬಗ್ಗೆಯೂ ಅವರ ಅಭಿಮಾನಿಗಳು ತಿಳಿದುಕೊಳ್ಳಲು ಆಸಕ್ತಿ ತೋರುತ್ತಾರೆ. ಸೋಶಿಯಲ್ ಮೀಡಿಯಾ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ, ಇಂತಹ ವಿಷಯಗಳು ಆಗಾಗ ಚರ್ಚೆಗೆ ಬರುತ್ತೆ.

  ನಟಿ ಚಾರ್ಮಿಗೆ ಸ್ಟಾರ್ ಹೀರೋಯಿನ್ ಮೇಲೆ ಲವ್ವು: ಮದ್ವೆ ಆಗೋಕೆ ರೆಡಿ ಅಂತೆ.!ನಟಿ ಚಾರ್ಮಿಗೆ ಸ್ಟಾರ್ ಹೀರೋಯಿನ್ ಮೇಲೆ ಲವ್ವು: ಮದ್ವೆ ಆಗೋಕೆ ರೆಡಿ ಅಂತೆ.!

  ಸಿನಿಮಾ ಇಂಡಸ್ಟ್ರಿಯಲ್ಲಿ ಮದುವೆ ಆಗದೆ ಉಳಿದಿರುವ ನಟ ಮತ್ತು ನಟಿಯರು ಹಲವರಿದ್ದಾರೆ. ಆದ್ರೀಗ, ಸೌತ್ ಇಂಡಿಯಾದಲ್ಲಿ ಈ ನಾಲ್ಕೈದು ಜನ ನಟಿಯರ ಮದುವೆ ಮತ್ತು ವಯಸ್ಸಿನ ಬಗ್ಗೆ ಕುತೂಹಲ ಕೆರಳಿಸಿದೆ. 34 ಆಸುಪಾಸಿನಲ್ಲಿರುವ ಈ ನಟಿಯರು ಮದುವೆಯಾಗುವ ಯಾವ ಸೂಚನೆ ಕೂಡ ಕೊಟ್ಟಿಲ್ಲ. ಯಾರದು? ಮುಂದೆ ಓದಿ....

  ತ್ರಿಷಾ ಕೃಷ್ಣನ್ ಮದುವೆ ಆಗ್ತಾರಾ?

  ತ್ರಿಷಾ ಕೃಷ್ಣನ್ ಮದುವೆ ಆಗ್ತಾರಾ?

  ಒಂದು ಸಮಯದಲ್ಲಿ ಬಹುಬೇಡಿಕೆಯಲ್ಲಿದ್ದ ತ್ರಿಷಾ, ದಕ್ಷಿಣ ಭಾರತದ ಬಹುತೇಕ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಕಳದೆ ಕೆಲವು ವರ್ಷದಿಂದ ತ್ರಿಷಾ ಅಷ್ಟಾಗಿ ಸಿನಿಮಾ ಮಾಡುತ್ತಿಲ್ಲ. ಈ ಮಧ್ಯೆ ಮದುವೆಯೂ ಆಗಿಲ್ಲ. ತ್ರಿಷಾಗೆ ಸದ್ಯ ವಯಸ್ಸು 36. ಆದರೂ ಖಾಸಗಿ ಜೀವನದ ಬಗ್ಗೆ ಯಾವ ಮಾಹಿತಿಯೂ ಬಿಟ್ಟುಕೊಟ್ಟಿಲ್ಲ. ವರುಣ್ ಎಂಬುವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ತ್ರಿಷಾ, ನಂತರ ಆ ಮದುವೆಯನ್ನ ನಿಲ್ಲಿಸಿಬಿಟ್ಟರು.

  ಅನುಷ್ಕಾ ಶೆಟ್ಟಿ

  ಅನುಷ್ಕಾ ಶೆಟ್ಟಿ

  ಸೌತ್ ಇಂಡಸ್ಟ್ರಿಯ ಲೇಡಿ ಡಾರ್ಲಿಂಗ್ ಅಂತಾನೆ ಗುರುತಿಸಿಕೊಂಡಿರುವ ಅನುಷ್ಕಾ ಶೆಟ್ಟಿ ಅವರದ್ದು ಅದೇ ಕಥೆ. ವಯಸ್ಸು 37 ಆಗಿದೆ. ಇದುವರೆಗೂ ಮದುವೆ ಆಗಿಲ್ಲ. ಮನೆಯವರು ಅನುಷ್ಕಾ ಶೆಟ್ಟಿಗೆ ಮದುವೆ ಮಾಡುವ ತಯಾರಿಯಲಿದ್ದಾರೆ ಎನ್ನುವುದು ಹಳೆಯ ಸುದ್ದಿ. ಒಂದು ಸಮಯದಲ್ಲಿ ಕೈತುಂಬ ಸಿನಿಮಾಗಳು ಇಟ್ಟುಕೊಂಡಿದ್ದ ಅನುಷ್ಕಾ, ಈಗ ಫಿಟ್ನೆಸ್ ಕಾಪಾಡಿಕೊಳ್ಳಲು ಕಷ್ಟಪಡುವಂತಾಗಿದೆ.

  ಅರೆ.. ನಟಿ ನಯನತಾರಾ ಹೀಗ್ಯಾಕೆ ಹೇಳಿದ್ರು.? ಯಾರು 'ಆ' ಮನ್ಮಥ.?ಅರೆ.. ನಟಿ ನಯನತಾರಾ ಹೀಗ್ಯಾಕೆ ಹೇಳಿದ್ರು.? ಯಾರು 'ಆ' ಮನ್ಮಥ.?

  ನಯನತಾರ

  ನಯನತಾರ

  ಲೇಡಿ ಸೂಪರ್ ಸ್ಟಾರ್ ಅಂತಾನೆ ಕರೆಸಿಕೊಳ್ಳುತ್ತಿರುವ ನಯನತಾರ, ನಿರ್ದೇಶಕ ವಿಘ್ನೇಶ್ ಜೊತೆ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಮದುವೆ ಬಗ್ಗೆ ಎಲ್ಲಿಯೂ ತುಟಿಕ್ ಪಿಟಿಕ್ ಎಂದಿಲ್ಲ. ಈ ಹಿಂದೆಯೂ ನಯನತಾರ ಅವರ ಹೆಸರು ಕೆಲವು ಸ್ಟಾರ್ ನಟರ ಜೊತೆ ಅಂಟಿಕೊಂಡಿತ್ತು. ನಯನತಾರ ವಯಸ್ಸು 34.

  ಕಾಜಲ್ ಅಗರ್ ವಾಲ್

  ಕಾಜಲ್ ಅಗರ್ ವಾಲ್

  ಕಾಜಲ್ ಅಗರ್ ವಾಲ್ ಕೂಡ ಅಷ್ಟೇ. ಸೌತ್ ಹಾಗೂ ಬಾಲಿವುಡ್ ಎರಡರಲ್ಲೂ ಮಿಂಚಿದ್ದಾರೆ. ತುಂಬಾ ಟಾಪ್ ನಲ್ಲಿದ್ದರು. ಈಗ ಮೊದಲಿನಂತೆ ಬೇಡಿಕೆ ಇಲ್ಲವಾದರೂ, ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡ್ತಿದ್ದಾರೆ. ಆದರೆ, ಮದುವೆ ವಿಚಾರ ಬಂದಾಗ ಕಾಜಲ್ ಹೆಸರು ಕೂಡ ಚರ್ಚೆಗೆ ಬರುತ್ತೆ. ಕಾಜಲ್ ವಯಸ್ಸು 34.

  ಶ್ರುತಿ ಹಾಸನ್

  ಶ್ರುತಿ ಹಾಸನ್

  ವಿದೇಶಿ ಹುಡುಗನ ಜೊತೆ ಪ್ರೀತಿಯಲ್ಲಿದ್ದ ಶ್ರುತಿ ಹಾಸನ್, ಅದ್ಯಾಕೋ ಅವರ ಜೊತೆಗಿನ ಸಂಬಂಧವನ್ನ ಮುರಿದುಕೊಂಡಿದ್ದಾರೆ. 33 ವರ್ಷದ ಶ್ರುತಿ ಹಾಸನ್, ಸಿನಿಮಾಗಳಲ್ಲೂ ಅಷ್ಟಾಗಿ ಸದ್ದು ಮಾಡ್ತಿಲ್ಲ. ಈ ಕಡೆ ಮದುವೆ ವಿಚಾರದಲ್ಲಿ ಪದೇ ಪದೇ ಗಮನ ಸೆಳೆಯುತ್ತಾರೆ.

  English summary
  Why these Top 5 actress still remains unmarried? trisha krishnan, nayanatara, kajal aggarwal, shruthi haasan, anushka shetty names in this list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X