ಸುಬ್ಬಿ ಕನಸು ಭಗ್ನ ; ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಪವಿತ್ರಾ ಗೌಡಗೆ ಬಿಗ್ ಶಾಕ್
ಬದುಕಿನಲ್ಲಿ ಯಾವತ್ತು ಅತಿಯಾದ ನಂಬಿಕೆ.. ಪ್ರೀತಿ.. ವಿಶ್ವಾಸ ಒಳ್ಳೆಯದಲ್ಲ. ಯಾಕೆಂದರೆ ಅತಿಯಾದ ನಂಬಿಕೆ ಮತ್ತು ಪ್ರೀತಿ ಕೆಲ ಒಮ್ಮೆ ಅಪಾರವಾದ ನೋವು ಕೊಡುತ್ತೆ. ಅತಿ ಎನ್ನುವುದೇ ಕೆಲ ಒಮ್ಮೆ ಅತಿಯಾಗಿ ನೋಯಿಸುತ್ತೆ. ಇದಕ್ಕೆ ಸದ್ಯದ ಉದಾಹರಣೆ ಪವಿತ್ರಾ ಗೌಡ. ಹೌದು.. ದರ್ಶನ್ ಸಖ್ಯದಿಂದ ಅಖಂಡ ಹತ್ತು ವರ್ಷ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದವರು ಪವಿತ್ರಾ ಗೌಡ.
ಆದರೆ.. ಈಗ ಇದೇ ಪವಿತ್ರಾ ಗೌಡ ಸಹವಾಸ ಮಾಡಿದ್ದಕ್ಕೆ ದರ್ಶನ್ ಮತ್ತೊಮ್ಮೆ ವನವಾಸಕ್ಕೆ ತೆರಳಿದ್ದಾರೆ. ಇಲ್ಲಿಯೂ ಕೂಡ ಪವಿತ್ರಾ ಗೌಡ ಕೂಡ ದರ್ಶನ್ ಅವರನ್ನು ಹಿಂಬಾಲಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ. ಇಂತಹದ್ದೊಂದು ದಿನ ಮತ್ತೆ ತಮ್ಮ ಬದುಕಿನಲ್ಲಿ ಬರುತ್ತೆ ಎಂದು ಪವಿತ್ರಾ ಗೌಡ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ಬದಲಿಗೆ ಇನ್ನೂ ತಮ್ಮನ್ನು ''ಕತ್ತಲ ಕೋಣೆ''ಯೊಳಗೆ ಯಾರು ತಳ್ಳಲಾರರು ಎಂದೇ ನಂಬಿದ್ದರು. ಈ ನಂಬಿಕೆಯಲ್ಲಿಯೇ ಮುಖದ ತುಂಬಾ ನಗು ತುಂಬಿಕೊಂಡು ಓಡಾಡುತ್ತಿದ್ದರು. ಸಾರ್ವತ್ರಿಕವಾಗಿ ಹಿಂದೆ ಎಂದೂ ತೋರಿಸದ ದೇವರ ಮೇಲಿನ ತಮ್ಮ ಭಕ್ತಿಯನ್ನು ತೋರಿಸಲು ಶುರು ಮಾಡಿದ್ದರು. ಜಾಮೀನು ರದ್ದಾಗುವ ತೀರ್ಪು ಬರುವ ಕೆಲ ಗಂಟೆಯ ಮೊದಲು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ''ಸತ್ಯ ಎಲ್ಲಕ್ಕಿಂತ ಶಕ್ತಿಯುತವಾದುದ್ದು. ನ್ಯಾಯ ಸಿಕ್ಕೇ ಸಿಗುತ್ತದೆ'' ಎಂದು ಬರೆದುಕೊಂಡಿದ್ದರು.
ಇಷ್ಟೇ ಅಲ್ಲ ಜಾಮೀನು ರದ್ದು ಮಾಡಬಾರದು, ನಿಮ್ಮ ಲಿಖಿತ ವಾದ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ ಕೂಡ ಪವಿತ್ರಾ ಗೌಡ, ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಳೆ. ವಯಸ್ಸಾದ ಪೋಷಕರಿದ್ದಾರೆ. ಅವರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದೇ. ಹೀಗಾಗಿ, ಜಾಮೀನು ರದ್ದುಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು.
ಆದರೆ ಮಾಡಿದ ಪಾಪ ಸುಮ್ಮನೆ ಬಿಡುತ್ತಾ ? ಪವಿತ್ರಾ ಗೌಡ ನಂಬಿಕೆ ಹುಸಿಯಾಯ್ತು. ಪವಿತ್ರಾ ಗೌಡ ಮತ್ತೆ ಸೆರೆವಾಸ ಅನುಭವಿಸುವಂತಾಯ್ತು. ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿಯಾದ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾದ ದರ್ಶನ್ ಸೇರಿ ಉಳಿದ ಎಲ್ಲ ಆರೋಪಿಗಳ ದೋಷಾರೋಪ ಪಟ್ಟಿಯನ್ನು ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಮುಂದೇನಾಗುತ್ತೆ..? ಎನ್ನುವುದನ್ನು ಕಾದು ನೋಡಬೇಕಿದೆಯಾದರೂ ನವೆಂಬರ್ ಹತ್ತರಂದು ಮತ್ತೆ ವಿಚಾರಣೆ ನಡೆಸಲಿರುವ ಜಡ್ಜ್ ಆರೋಪಿಗಳ ಟ್ರಯಲ್‌ಗೆ ದಿನಾಂಕವನ್ನು ನಿಗದಿ ಮಾಡಲಿದ್ದಾರೆ. ಇದರ ನಡುವೆ ಪವಿತ್ರಾ ಗೌಡಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಶಾಕ್ ನೀಡಿದೆ.
ಹೌದು, ಅಸಲಿಗೆ ಎಲ್ಲರಿಗೆ ಗೊತ್ತಿರುವಂತೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ವಜಾ ಮಾಡಿತ್ತು. ಇದನ್ನು ಪುನರ್ ಪರಿಶೀಲನೆ ಮಾಡುವಂತೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠಕ್ಕೆ ಪವಿತ್ರಾ ಗೌಡ ಮನವಿ ಮಾಡಿದ್ದರು.

ಆದರೆ, ಇವರ ಮನವಿಗೆ ಸುಪ್ರೀಂ ಕೋರ್ಟ್ ಮಣೆ ಹಾಕಿಲ್ಲ. ಬದಲಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲ್ ಮತ್ತು ಆರ್. ಮಹಾದೇವನ್ ಅವರ ಪೀಠ ಪವಿತ್ರಾ ಗೌಡ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿಯನ್ನು ವಜಾ ಮಾಡಿದೆ.ನಾವು ತೀರ್ಪು ಮತ್ತು ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ ಎಂದು ಹೇಳಿರುವ ದ್ವಿಸದಸ್ಯ ಪೀಠ ಎಲ್ಲವನ್ನೂ ಗಮನಿಸಿಯೇ ನಾವು ಆದೇಶ ನೀಡಿದ್ದೆವೆ ಎಂದು ಹೇಳಿದೆ. ಮತ್ತೊಮ್ಮೆ ಪರಿಶೀಲನೆ ನಡೆಸಿ ಆದೇಶ ಮಾಡುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಒಟ್ನಲ್ಲಿ ಸದ್ಯ ಪವಿತ್ರಾ ಗೌಡ ಹೇಗಾದರೂ ಮಾಡಿ ಹೊರ ಬರಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಈಗ ಸುಪ್ರೀಂ ಕೋರ್ಟ್ ಇವರ ಅರ್ಜಿ ವಜಾ ಮಾಡಿದೆ. ಈ ಮೂಲಕ ಪವಿತ್ರಾ ಗೌಡ ಅವರ ಕನಸು ಭಗ್ನ ಆಗಿದೆ.


Click it and Unblock the Notifications











