twitter
    For Quick Alerts
    ALLOW NOTIFICATIONS  
    For Daily Alerts

    ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವಿವಾದದ ಸರಮಾಲೆಗೆ ಮತ್ತೊಂದು ಸೇರ್ಪಡೆ

    |

    ಬಾಲಿವುಡ್ ಚಿತ್ರೋದ್ಯಮದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಆಮೀರ್ ಖಾನ್, ತುಂಬಾ ಚ್ಯೂಸಿಯಾಗಿ ಸಿನಿಮಾ ಮಾಡುವವರು.

    ವರ್ಷಕ್ಕೆ ಒಂದೋ, ಎರಡೋ ಸಿನಿಮಾ ಮಾಡುವ ಆಮೀರ್ ಖಾನ್, ತಮ್ಮ ಸಿನಿಮಾದಲ್ಲಿ ಸಮಾಜಕ್ಕೆ ಏನಾದರೂ ಸಂದೇಶ ಇರಬೇಕೆಂದು ಬಯಸುವವರು.

    ಶ್ರೀರಾಮ, ಸೀತೆ, ಪೋರ್ನ್: ಸುಖಾಸುಮ್ಮನೆ ಹೊಸ ವಿವಾದ ಮೈಗೆಳೆದುಕೊಂಡ ಪ್ರಕಾಶ್ ರೈಶ್ರೀರಾಮ, ಸೀತೆ, ಪೋರ್ನ್: ಸುಖಾಸುಮ್ಮನೆ ಹೊಸ ವಿವಾದ ಮೈಗೆಳೆದುಕೊಂಡ ಪ್ರಕಾಶ್ ರೈ

    ಅವರ ಕೆಲವೊಂದು ಸಿನಿಮಾಗಳು ಅನಾವಶ್ಯಕವಾಗಿ ದೊಡ್ದ ವಿವಾದವನ್ನು ಹುಟ್ಟುಹಾಕಿದ್ದುಂಟು. 2010ರಿಂದ ಈಚೆಗೆ, ಆಮೀರ್ ಮಾಡಿರುವ ಸಿನಿಮಾ ಕೇವಲ ಹನ್ನೊಂದು.

    Flashback, 'ಕಸ್ತೂರಿ ನಿವಾಸ' ಕ್ಲೈಮ್ಯಾಕ್ಸ್: ಇಕ್ಕಟ್ಟಿನಲ್ಲಿ ಸಿಲುಕಿದ್ದ ರಾಜಕುಮಾರ್Flashback, 'ಕಸ್ತೂರಿ ನಿವಾಸ' ಕ್ಲೈಮ್ಯಾಕ್ಸ್: ಇಕ್ಕಟ್ಟಿನಲ್ಲಿ ಸಿಲುಕಿದ್ದ ರಾಜಕುಮಾರ್

    ಆಮೀರ್ ಖಾನ್ ಅವರ ಇದುವರೆಗಿನ ವೃತ್ತಿ ಬದುಕಿನಲ್ಲಿನ ಕೆಲವೊಂದು ನಿರ್ಧಾರಗಳು, ಸಿನಿಮಾಗಳು ದೊಡ್ದ ವಿವಾದಕ್ಕೆ ಕಾರಣವಾಗಿದ್ದವು. ಅಂತಹ ವಿವಾದದ ಸಾಲಿಗೆ, ಅವರ ಇನ್ನೊಂದು ಸಿನಿಮಾ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ:

    ಯಾವುದೇ ಪ್ರಶಸ್ತಿ ಸಮಾರಂಭದಲ್ಲಿ ಆಮೀರ್ ಖಾನ್ ಭಾಗವಹಿಸುವುದು ಕಮ್ಮಿ

    ಯಾವುದೇ ಪ್ರಶಸ್ತಿ ಸಮಾರಂಭದಲ್ಲಿ ಆಮೀರ್ ಖಾನ್ ಭಾಗವಹಿಸುವುದು ಕಮ್ಮಿ

    ಯಾವುದೇ ಪ್ರಶಸ್ತಿ ಸಮಾರಂಭದಲ್ಲಿ ಆಮೀರ್ ಖಾನ್ ಭಾಗವಹಿಸುವುದು ಕಮ್ಮಿ. ಪ್ರತೀ ಬಾರಿಯೂ, ಯಾಕೆ ಸಮಾರಂಭದಲ್ಲಿ ಭಾಗವಹಿಸಿಲ್ಲ ಎನ್ನುವ ಪ್ರಶ್ನೆಗೆ, "ಬಾಲಿವುಡ್ ಪ್ರಶಸ್ತಿಗಳನ್ನು ನಾನು ಗೌರವಿಸುವುದಿಲ್ಲ. ಹಾಗಾಗಿ, ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ನಾನು ಅರ್ಹನಲ್ಲ" ಎನ್ನುವ ಉತ್ತರ ಆಮೀರ್ ಖಾನ್ ಅವರಿಂದ ಬರುತ್ತಿತ್ತು. ಇದು, ಬಾಲಿವುಡ್ ಚಿತ್ರೋದ್ಯಮದಲ್ಲಿ ವಿವಾದಕ್ಕೆ ಕಾರಣವಾಗಿತ್ತು,

    ಪ್ರತಿಷ್ಠಿತ Madame Tussauds

    ಪ್ರತಿಷ್ಠಿತ Madame Tussauds

    ಪ್ರತಿಷ್ಠಿತ Madame Tussaudsನಲ್ಲಿ ಮೇಣದ ಪ್ರತಿಮೆಯ ಅವಕಾಶವನ್ನೂ ಆಮೀರ್ ಖಾನ್ ನಿರಾಕರಿಸಿದ್ದರು. ಅದಕ್ಕೆ ಅವರು ಕೊಟ್ಟ ಸಮರ್ಥನೆ ಹೀಗಿತ್ತು, " ಇದು ನನಗೆ ಮುಖ್ಯ ಎಂದು ಅನಿಸುವುದಿಲ್ಲ. ಜನರು ಬಯಸಿದರೆ ನನ್ನ ಸಿನಿಮಾಗಳನ್ನು ನೋಡುತ್ತಾರೆ. ಎಷ್ಟೊಂದು ವಿಚಾರಗಳನ್ನು ನನ್ನಿಂದ ನಿಭಾಯಿಸಲೂ ಸಾಧ್ಯವಿಲ್ಲ".

    ನರ್ಮದಾ ಬಚಾವ್ ಆಂದೋಲನ್

    ನರ್ಮದಾ ಬಚಾವ್ ಆಂದೋಲನ್

    ಏಪ್ರಿಲ್ 2006ರಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ನರ್ಮದಾ ಬಚಾವ್ ಆಂದೋಲನ್ ನಲ್ಲಿ ಆಮೀರ್ ಖಾನ್ ಭಾಗವಹಿಸಿದ್ದರು. ಈ ವೇಳೆ ಆಮೀರ್ ಖಾನ್ ಆಡಿದ ಹೇಳಿಕೆ, ತೀವ್ರ ಚರ್ಚೆಗೆ ಗುರಿಯಾಗಿತ್ತು. ಆ ವೇಳೆ ಬಿಡುಗಡೆಯಾದ ಅವರ ಸಿನಿಮಾ 'ಫನಾ' ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಯಿತು.

    ವೃತ್ತಿ ಬದುಕಿನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದದ್ದು ಅವರ ಸಿನಿಮಾ 'ಪಿಕೆ'

    ವೃತ್ತಿ ಬದುಕಿನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದದ್ದು ಅವರ ಸಿನಿಮಾ 'ಪಿಕೆ'

    ಅವರ ವೃತ್ತಿ ಬದುಕಿನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದದ್ದು ಅವರ ಸಿನಿಮಾ 'ಪಿಕೆ'. ಬೆತ್ತಲೆಯಾಗಿ, ರೈಲ್ವೇ ಟ್ರ್ಯಾಕ್ ನಲ್ಲಿ, ಟ್ರಾನ್ಸಿಸ್ಟರ್ ಹಿಡಿದು ನಿಂತ ಅವರ ಸಿನಿಮಾ ಪೋಸ್ಟರ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇನ್ನು, ಈ ಚಿತ್ರ ಬಿಡುಗಡೆಯಾದ ನಂತರ, ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಮತ್ತು ಆಚರಣೆಗಳನ್ನು 'ಗೇಲಿ' ಮಾಡುವ ಮೂಲಕ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಪ್ರತಿಭಟನೆ ವ್ಯಕ್ತವಾದವು.

    ಫೆಬ್ರವರಿ 2015 ರಲ್ಲಿ ನಡೆದ ಕಾರ್ಯಕ್ರಮ

    ಫೆಬ್ರವರಿ 2015 ರಲ್ಲಿ ನಡೆದ ಕಾರ್ಯಕ್ರಮ

    ಫೆಬ್ರವರಿ 2015 ರಲ್ಲಿ ನಡೆದ ಕಾರ್ಯಕ್ರಮವೊಂದನ್ನು (ಎಐಬಿ ನಾಕೌಟ್) 'ಮೌಕಿಕ ಹಿಂಸಾಚಾರ' ಎಂದು ಆಮೀರ್ ಖಾನ್ ಕರೆದಿದ್ದರು. "ವಾಕ್ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಂಬುವವನು ನಾನು. ಆದರೆ, ನಾವೆಲ್ಲಾ ಸಾಮಾಜಿಕ ಬದುಕಿನಲ್ಲಿ ಇರುವವರು, ನಮಗೆ ನಿರ್ದಿಷ್ಟ ಜವಾಬ್ದಾರಿ ಇರುತ್ತದೆ". ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್, ಅರ್ಜುನ್ ಕಪೂರ್, ಸಮ್ಮುಖದಲ್ಲೇ ಆಮೀರ್ ಕಿಡಿಕಾರಿದ್ದರು.

    ‘ಫಾರೆಸ್ಟ್​ ಗಂಪ್​’ ಸಿನಿಮಾದ ರಿಮೇಕ್ ‘ಲಾಲ್​ ಸಿಂಗ್​ ಛಡ್ಡಾ

    ‘ಫಾರೆಸ್ಟ್​ ಗಂಪ್​’ ಸಿನಿಮಾದ ರಿಮೇಕ್ ‘ಲಾಲ್​ ಸಿಂಗ್​ ಛಡ್ಡಾ

    ಈ ವಿವಾದದ ಗೊಂಚಲಿಗೆ ಇನ್ನೊಂದು ಸೇರ್ಪಡೆಯಾಗಿದೆ. ಹಾಲಿವುಡ್​ನ ‘ಫಾರೆಸ್ಟ್​ ಗಂಪ್​' ಸಿನಿಮಾದ ರಿಮೇಕ್ ‘ಲಾಲ್​ ಸಿಂಗ್​ ಛಡ್ಡಾ' , ಆಮೀರ್ ಖಾನ್ ಅವರ ಮುಂಬರುವ ಸಿನಿಮಾ. ಈ ಚಿತ್ರದಲ್ಲಿ ಅಯೋಧ್ಯೆ, ಬಾಬ್ರಿ ಮಸೀದಿ, ಆಪರೇಷನ್ ಬ್ಲೂಸ್ಟಾರ್ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ದೃಶ್ಯಗಳಿವೆ ಎನ್ನುವ ವಿಷಯ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

    English summary
    Top Six Controversy of Bollywood Mr. Perfectionist Aamir Khan from Non Attending In Award Functions to His Latest Movie Lal Singh Chaddha.
    Wednesday, October 23, 2019, 14:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X