ನಾಳೆ ತೆರೆಗೆ ಬರಲಿವೆ ಕನ್ನಡದ ಬರೋಬ್ಬರಿ 11 ಚಿತ್ರಗಳು! ಇಲ್ಲಿದೆ ಪಟ್ಟಿ

ಶುಕ್ರವಾರ ಬಂತೆಂದರೆ ಸಾಕು ವಿವಿಧ ಚಿತ್ರಗಳ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತವೆ. ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವ ವಾರ ಒಂದೆರಡು ಚಿತ್ರಗಳು ಮಾತ್ರ ತೆರೆ ಕಂಡರೆ ಉಳಿದ ಸಾಮಾನ್ಯ ದಿನಗಳಂದು ಹಲವಾರು ಸಿನಿಮಾಗಳು ತೆರೆಕಾಣುತ್ತವೆ. ಅದೇ ರೀತಿ ಪ್ರಸ್ತುತ ನಡೆಯುತ್ತಿರುವ ಫೆಬ್ರವರಿ ತಿಂಗಳ ಅಂತಿಮ ಶುಕ್ರವಾರದಂದೂ ಸಹ ಹಲವಾರು ಚಿತ್ರಗಳು ತೆರೆಗೆ ಬರಲು ತಯಾರಾಗಿವೆ. ಅದರಲ್ಲಿಯೂ ಕನ್ನಡದ ಬರೋಬ್ಬರಿ 11 ಚಿತ್ರಗಳು ಈ ವಾರ ಬಿಡುಗಡೆಗೊಳ್ಳಲಿವೆ. ಹೀಗೆ ನಾಳೆ ( ಫೆಬ್ರವರಿ 24 ) ಬಿಡುಗಡೆಗೊಳ್ಳಲಿರುವ ಕನ್ನಡ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ.

1. ಚಕ್ರವರ್ತಿ ಚಂದ್ರಚೂಡ್ ನಾಯಕನಾಗಿ ಹಾಗೂ ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸಿರುವ 1975 ಚಿತ್ರ ನಾಳೆ ಬಿಡುಗಡೆಗೊಳ್ಳಲಿದೆ.

2. ಶಶಿಕುಮಾರ್ ಹಾಗೂ ಶೃತಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ವಿಧಿ ( ಆರ್ಟಿಕಲ್ ) 370 ಚಿತ್ರ ಸಹ ನಾಳೆ ರಿಲೀಸ್ ಆಗ್ತಿದೆ.

3. ದಿವಂಗತ ನಟ ಉದಯ್ ಪ್ರಮುಖ ಪಾತ್ರ ನಿರ್ವಹಿಸಿರುವ ಅಂತರಂಗ ಸಹ ಬಿಡುಗಡೆಯಾಗುತ್ತಿದೆ.

Total 11 kannada movies are releasing on February 24th

4. ಯುವ ತಂಡದ ಅಸ್ಥಿರ ಎಂಬ ಚಿತ್ರ ಕೂಡ ನಾಳೆ ಬಿಡುಗಡೆಯಾಗಲಿದೆ.

5. ಮತ್ತೊಂದು ಯುವ ತಂಡದ ಚಿತ್ರವಾದ ಕ್ಯಾಂಪಸ್ ಕ್ರಾಂತಿ ಎಂಬ ಚಿತ್ರ ಸಹ ನಾಳೆ ತೆರೆಗೆ ಬರಲಿದೆ.

6. ಶ್ರೀನಗರ ಕಿಟ್ಟಿ ಅಭಿನಯದ ಗೌಳಿ ಚಿತ್ರ ಸಹ ನಾಳೆ ಬಿಡುಗಡೆಯಾಗಲಿದೆ. ತನ್ನ ಟ್ರೈಲರ್‌ನಿಂದ ಗಮನ ಸೆಳೆದಿರುವ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ.

7. ವಸಂತ್ ಎಂಬ ಯುವ ಕಲಾವಿದರ ತಾನೇ ನಟಿಸಿ, ನಿರ್ದೇಶಿಸಿರುವ ಹೊಟ್ಟೆಪಾಡು ಸಹ ನಾಳೆ ತೆರೆಗೆ ಬರಲಿದೆ.

8. ಬೃಂದಾ ಆಚಾರ್ಯ ಹಾಗೂ ಅನೂಪ್ ಸಾಗರ್ ನಟನೆಯ ಜೂಲಿಯಟ್ 2 ಚಿತ್ರ ಸಹ ನಾಳೆ ಬಿಡುಗಡೆಯಾಗುತ್ತಿದೆ.

9. ಟ್ರೈಲರ್ ಮೂಲಕ ಅಸ್ಪೃಶ್ಯತೆಯ ವಿರುದ್ಧ ಹೋರಾಡುವ ಚಿತ್ರ ಎಂಬುದನ್ನು ಹೇಳಿಕೊಂಡು ಗಮನ ಸೆಳೆದಿದ್ದ ಚಿತ್ರ ಪಾಲಾರ್ ಸಹ ನಾಳೆ ಬಿಡುಗಡೆಯಾಗಲಿದೆ.

10. ಮತ್ತೊಂದು ಯುವ ತಂಡ ತಯಾರಿಸಿರುವ ಚಿತ್ರ ಸಂಭ್ರಮ ಕೂಡ ನಾಳೆ ಬಿಡುಗಡೆಯಾಗಲಿದೆ.

11. ದಕ್ಷಿಣ ಭಾರತದ ಚಿತ್ರಗಳ ನಟರು ಹಾಗೂ ಚಿತ್ರರಂಗ ಹೇಗಿರಲಿದೆ ಎಂಬುದನ್ನು ತೆರೆ ಮೇಲೆ ತೋರಿಸುವ ಸೌತ್ ಇಂಡಿಯನ್ ಹೀರೊ ಚಿತ್ರ ಕೂಡ ನಾಳೆ ತೆರೆಗೆ ಬರಲಿದೆ.

More from Filmibeat

English summary
Total 11 kannada movies are releasing on February 24th. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X