ಪುಲ್ವಾಮಾ ದಾಳಿ: ಪಾಕಿಸ್ತಾನ ಸಿನಿಮಾ ಕಲಾವಿದರಿಗೆ ನಿಷೇಧ

Recommended Video

Pulwama : ಪಾಕಿಸ್ತಾನಿ ಸಿನಿಮಾ ಕಲಾವಿದರಿಗೆ ಸಂಪೂರ್ಣ ನಿಷೇಧ | ಸಾಥ್ ಕೊಟ್ಟ ಬಾಲಿವುಡ್ ಮಂದಿ | Oneindia Kannada

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ನಡೆದ ಉಗ್ರರ ದಾಳಿಯಲ್ಲಿ 44ಕ್ಕೂ ಅಧಿಕ ಭಾರತೀಯ ಯೋಧರ ಹುತಾತ್ಮರಾಗಿದ್ದರು. ಈ ದಾಳಿಯನ್ನ ಖಂಡಿಸಿ ದೇಶಾದ್ಯಂತ ಪ್ರತಿಭಟನೆ, ವಿರೋಧ ವ್ಯಕ್ತವಾಗಿದೆ.

ಪುಲ್ವಾಮಾ ದಾಳಿ ಖಂಡಿಸಿ ಪಾಕಿಸ್ತಾನದ ನಟ, ನಟಿಯರು ಸೇರಿದಂತೆ ಎಲ್ಲ ಕಲಾವಿದರನ್ನು ಬಹಿಷ್ಕರಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಅದರಂತೆ ಭಾರತೀಯ ಸಿನಿಮಾ ನೌಕರರ ಒಕ್ಕೂಟ (ಎಫ್​ಡಬ್ಲ್ಯುಐಸಿಇ) ಪಾಕ್ ಕಲಾವಿದರನ್ನ ನಿಷೇಧ ಹೇರುವುದಾಗಿ ತಿಳಿಸಿತ್ತು.

Total ban on pakistani actors and artists working in the film industry

ಇದೀಗ, ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಅಧಿಕೃತವಾಗಿ ಪಾಕಿಸ್ತಾನ ಕಲಾವಿದರು, ನಟ, ನಟಿಯರು, ತಂತ್ರಜ್ಞರು ಎಲ್ಲರಿಗೂ ನಿಷೇಧ ಹೇರಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಮಾಡಿರುವ ಅಸೋಸಿಯೇಷನ್ ''ಮೊದಲು ದೇಶ, ದೇಶದ ಪರವಾಗಿ ನಿಲ್ಲುವ ಕರ್ತವ್ಯ ನಮ್ಮಲ್ಲಿದೆ. ಹಾಗಾಗಿ, ಪಾಕಿಸ್ತಾನ ಕಲಾವಿದರನ್ನ ಬಹಿಷ್ಕಾರ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.

ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರೊನಾಕ್ ಸುರೇಶ್ ಜೈನ್ ತಿಳಿಸಿದ್ದು, 'ಪಾಕಿಸ್ತಾನ ಕಲಾವಿದರ ಜೊತೆ ಕೆಲಸ ಮಾಡುವಂತವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಜರುಗಿಸಲಾಗುವುದು' ಎಂಬ ಎಚ್ಚರಿಕೆಯನ್ನ ನೀಡಿದ್ದಾರೆ.

ಹಾಗ್ನೋಡಿದ್ರೆ, ಬಾಲಿವುಡ್ ನಲ್ಲಿ ಹೆಚ್ಚು ಪಾಕಿಸ್ತಾನ ಕಲಾವಿದರು ಕೆಲಸ ಮಾಡುತ್ತಿದ್ದು, ಈಗ ಎಲ್ಲರಿಗೂ ಸಂಕಷ್ಟ ಎದುರಾಗಿದೆ.

More from Filmibeat

English summary
All India Cine Workers Association announce a total ban on Pakistani actors and artists working in the film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X