ಬಿಸಿಲು, ಮಳೆ, ಧೂಳು ಬರಲಿ.. ರಾಕಿಂಗ್ ಸ್ಟಾರ್ ಯಶ್ ಇದ್ರೆ ಸಾಕು.. ಏನಂತೀರಾ?

ನಟ ಯಶ್ ಸದ್ಯ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಮುಳುಗಿದ್ದಾರೆ. ಇತ್ತೀಚೆಗೆ ಗೋವಾದ ರೆಸಾರ್ಟ್‌ವೊಂದರಲ್ಲಿ ಯಶ್ ಚಿತ್ರತಂಡದ ಜೊತೆ ಕಾಣಿಸಿಕೊಂಡಿದ್ದ ಫೋಟೊ, ವಿಡಿಯೋ ವೈರಲ್ ಆಗಿತ್ತು. ಚಿತ್ರದ ಚಿತ್ರೀಕರಣ ಆರಂಭವಾಗಿ ಎಂದೇ ಕೆಲವರು ಭಾವಿಸಿದ್ದರು. ಆದರೆ ಇನ್ನು ಚಿತ್ರೀಕರಣ ಆರಂಭವಾಗಿಲ್ಲ ಎನ್ನಲಾಗ್ತಿದೆ.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರ್ತಿದೆ. ಮಲಯಾಳಂ ನಿರ್ದೇಶಕ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಟೈಟಲ್‌ನಿಂದಲೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಕಥೆ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಚಿತ್ರದಲ್ಲಿ ಯಶ್ ಲುಕ್, ಪಾತ್ರ ಎಲ್ಲವೂ ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.

Toxic actor rocking star Yash s new Ad goes viral

'KGF' ಸರಣಿ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶ್ ಕ್ರೇಜ್ ಶುರುವಾಗಿದೆ. ದೊಡ್ಡ ದೊಡ್ಡ ಕಂಪೆನಿಗಳು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಳ್ಳುತ್ತಿವೆ. ಈಗಾಗಲೇ ಗೋಲ್ಡ್‌ವಿನ್ನರ್, ಪೆಪ್ಸಿ, ಬಿಯರ್ಡೋ ಕಂಪನಿಗಳ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ. ರಾಮ್‌ರಾಜ್‌ ಜಾಹೀರಾತಿನಲ್ಲೂ ಮಿಂಚಿದ್ದರು. ಇದೂ ಮತ್ತೊಂದು ಹೊಸ ಉತ್ಪನ್ನದ ಜಾಹೀರಾತಿನಲ್ಲಿ ಮಿಂಚುತ್ತಿದ್ದಾರೆ.

ಅಂದಹಾಗೆ ಯಶ್ ಡ್ಯುಲಕ್ಸ್ ಪೇಂಟ್ ಕಂಪೆನಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ. ರಾಕಿಭಾಯ್ ಗೆಟಪ್‌ನಲ್ಲಿ ಹೊಸ ಜಾಹೀರಾತಿನಲ್ಲಿ ಮಿಂಚಿದ್ದರು. ಇತ್ತೀಚೆಗೆ ಅದರ ಸಣ್ಣ ಟೀಸರ್ ಬಂದಿತ್ತು. ಇದೀಗ ಕಂಪ್ಲೀಟ್ ಜಾಹೀರಾತು ರಿವೀಲ್ ಆಗಿದೆ. ರಾಕಿ ಭಾಯ್ ಸ್ಟೈಲ್, ಆಟಿಟ್ಯೂಡ್‌ನಲ್ಲಿ ಮತ್ತೊಂದು ದರ್ಶನ ಕೊಟ್ಟಿದ್ದಾರೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಜಾಹೀರಾತು ಸೆರೆ ಹಿಡಿಯಲಾಗಿದೆ.

ಚಿತ್ರವೊಂದಕ್ಕೆ ಹತ್ತಾರು ಕೋಟಿ ಸಂಭಾವನೆ ಪಡೆಯುವ ಯಶ್, ಜಾಹೀರಾತುಗಳಿಗೆ ಕೂಡ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ. ಇನ್ನು 'ಟಾಕ್ಸಿಕ್‌' ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್ 10ರಂದು ತೆರೆಗೆ ತರುವ ಪ್ರಯತ್ನದಲ್ಲಿ ರಾಕಿಂಗ್ ಸ್ಟಾರ್ ಕಾರ್ಯ ನಿರತರಾಗಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕೆ ಯಶ್ ಸಹ ನಿರ್ಮಾಪಕರು ಕೂಡ ಆಗಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಕೆಲಸಗಳು ನಡೀತಿದೆ.

ಅಭಿಮಾನಿಗಳಿಗಂತೂ ಮತ್ತೆ ರಾಕಿಂಗ್‌ ಸ್ಟಾರ್‌ನ ಯಾವಾಗ ತೆರೆಮೇಲೆ ನೋಡ್ತೀವೋ ಎನ್ನುವ ಹಂಬಲ. ಕಳೆದ ಏಳುವರೆ ವರ್ಷದಲ್ಲಿ 'KGF' ಸರಣಿಯ 2 ಸಿನಿಮಾ ಮಾತ್ರ ಬಿಡುಗಡೆಯಾಗಿದೆ. ಕೊರೋನಾ ಹಾವಳಿಯಿಂದ 'KGF'-2 ಬರೋದು ತಡವಾಯಿತು. ಆ ಬಳಿಕ ಒಂದು ವರ್ಷ ಯಾವುದೇ ಸಿನಿಮಾ ಘೋಷಿಸಿರಲಿಲ್ಲ. ಅಭಿಮಾನಿಗಳು ಯಶ್‌19 ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದರು. ಅಂತೂ ಇಂತೂ 4 ತಿಂಗಳ ಹಿಂದೆ 'ಟಾಕ್ಸಿಕ್' ಸಿನಿಮಾ ಘೋಷಣೆ ಆಗಿತ್ತು. ಆದರೂ 2025ರ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಎಂದು ಹೇಳಿ ಕೊಂಚ ನಿರಾಸೆ ಮೂಡಿಸಿದ್ದರು.

ಕರೀನಾ ಕಪೂರ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಯಶ್ ಸಹೋದರಿ ಪಾತ್ರಕ್ಕೆ ಬಾಲಿವುಡ್ ಬೇಬೊ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಶ್ರುತಿ ಹಾಸನ್ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದ್ದು ನಾಯಕಿಯಾಗಿ ನಟಿಸುವುದು ಯಾರು? ಎನ್ನುವ ಕುತೂಹಲವೂ ಇದೆ.

'ಟಾಕ್ಸಿಕ್' ಬಿಟ್ಟರೆ ಅಧಿಕೃತವಾಗಿ ಯಶ್ ನಟನೆಯ ಯಾವುದೇ ಸಿನಿಮಾ ಘೋಷಣೆ ಆಗಿಲ್ಲ. ಬಾಲಿವುಡ್ ಮಂದಿ ಕೂಡ ರಾಕಿಂಗ್ ಸ್ಟಾರ್ ಕಾಲ್‌ಶೀಟ್ ಕೇಳುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಬಾಲಿವುಡ್‌ನಲ್ಲಿ 'ರಾಮಾಯಣ' ಸಿನಿಮಾ ಪ್ಲ್ಯಾನ್ ನಡೀತಿದೆ. ಈ ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬರುತ್ತಲೇ ಇದೆ. ಆದರೆ ಅದು ಇನ್ನು ಖಚಿತವಾಗಿಲ್ಲ.

More from Filmibeat

English summary
Yash's latest ad takes the internet by storm;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X