ಲಂಡನ್‌ನಲ್ಲಿ ರಾಕಿಂಗ್ ಜೋಡಿ ಕ್ರಿಸ್‌ಮಸ್ ಸೆಲೆಬ್ರೇಷನ್: ಸುಮಲತಾ ಅಂಬರೀಶ್ ಏನಂದ್ರು?

'ಟಾಕ್ಸಿಕ್' ಸಿನಿಮಾ ಅನೌನ್ಸ್ ಮಾಡಿ ಸೈಲೆಂಟ್ ಆಗಿರುವು ಯಶ್ ಸದ್ಯ ಲಂಡನ್‌ನಲ್ಲಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಕ್ರಿಸ್‌ಮಸ್ ಸೆಲೆಬ್ರೇಷನ್‌ಗಾಗಿ ಯೂರೋಪ್‌ನಲ್ಲಿ ಬೀಡುಬಿಟ್ಟಿರುವ ಸುಳಿವು ಸಿಗುತ್ತಿದೆ. ಸದ್ಯ ರಾಧಿಕಾ ಪಂಡಿತ್ ಸ್ಪೆಷಲ್ ಪೋಸ್ಟ್ ಮೂಲಕ ಗಮನ ಸೆಳೆದಿದ್ದಾರೆ.

ರಾಕಿಂಗ್ ಜೋಡಿಯ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಟಿ ರಾಧಿಕಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಈ ಬಗ್ಗೆ ಮಾಹಿತಿ ಕೊಡುತ್ತಿರುತ್ತಾರೆ. ಸದ್ಯ ದಂಪತಿ ಲಂಡನ್‌ನಲ್ಲಿದ್ದಾರೆ. ಕ್ರಿಸ್‌ಮಸ್‌ ಹಿನ್ನೆಲೆ ವಕೇಷನ್‌ಗೆ ಹೋಗಿದ್ದಾರಾ? ಅಥವಾ 'ಟಾಕ್ಸಿಕ್' ಸಿನಿಮಾ ಕೆಲಸದ ವಿಚಾರವಾಗಿ ಭೇಟಿ ನೀಡಿದ್ದಾರಾ? ಅನ್ನೋದು ಗೊತ್ತಿಲ್ಲ. ರಾಧಿಕಾ ಪೋಸ್ಟ್ ಮಾತ್ರ ಸಖತ್ ವೈರಲ್ ಆಗುತ್ತಿದೆ.

Toxic actor Yash and Radhika pandit celebrate Christmas in London

ಲಂಡನ್ ರೀಜೆಂಟ್ ಸ್ಟ್ರೀಟ್‌ನಲ್ಲಿ ನಿಂತು ಯಶ್‌- ರಾಧಿಕಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಕ್ರಿಸ್‌ಮಸ್‌ ಆಚರಣೆಗಾಗಿ ಜಗಮಗ ದೀಪಾಲಂಕಾರದಿಂದ ರೀಜೆಂಟ್ ಸ್ಟ್ರೀಟ್‌ ಸಿಂಗಾರಗೊಂಡಿದೆ. ಬೀನಿ ಕ್ಯಾಪ್ ತೊಟ್ಟು ಸ್ಟೈಲಿಶ್ ಲುಕ್‌ನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಅದು ಯಾವ ರಸ್ತೆ, ಯಾವ ಊರು ಎನ್ನುವ ಬಗ್ಗೆ ರಾಧಿಕಾ ಪಂಡಿತ್ ಪೋಸ್ಟ್‌ನಲ್ಲಿ ತಿಳಿಸಿಲ್ಲ. ಆದರೆ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಫೋಟೊ ನೋಡುತ್ತಿದ್ದಂತೆ ಅದು ಲಂಡನ್‌ನ ರೀಜೆಂಟ್ ಸ್ಟ್ರೀಟ್ ಎಂದು ಹೇಳಿದ್ದಾರೆ.

ರಾಧಿಕಾ ಪಂಡಿತ್ ಇನ್‌ಸ್ಟಾ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಸುಮಲತಾ ಅಂಬರೀಶ್ "ರೀಜೆಂಟ್ ಸ್ಟ್ರೀಟ್.. ಅಭಿಗೆ ಅದು 2 ವರ್ಷ ಮನೆಯಾಗಿತ್ತು. ಅಲ್ಲಿನ ಸಾಕಷ್ಟು ಅದ್ಭುತ ನೆನಪುಗಳಿವೆ" ಎಂದು ಬರೆದಿದ್ದಾರೆ. ಅಭಿಷೇಕ್ ಅಂಬರೀಶ್ ಲಂಡನ್‌ನಲ್ಲಿ ಪೊಲಿಟಿಕಲ್ ಸೈನ್ಸ್ ಪದವಿ ಪಡೆದಿದ್ದರು.

'KGF'-2 ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದರೂ ಯಶ್ ಮುಂದಿನ ಸಿನಿಮಾ ಘೋಷಣೆ ಮಾಡಿರಲಿಲ್ಲ. ಯಶ್‌ 19ನೇ ಸಿನಿಮಾ ಯಾವುದು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇತ್ತೀಚೆಗೆ ಉತ್ತರ ಸಿಕ್ಕಿತ್ತು. 'ಟಾಕ್ಸಿಕ್' ಟೈಟಲ್‌ನಲ್ಲಿ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಯಶ್‌ ಕೂಡ ಸಿನಿಮಾ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

ಅಂದಾಜು 170 ಕೋಟಿ ರೂ. ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಕಥೆ ಹೇಳಲಿದ್ದು ಯಶ್ ಗ್ಯಾಂಗ್‌ಸ್ಟರ್ ಆಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಅನೌನ್ಸ್‌ಮೆಂಟ್ ಟೀಸರ್ ಸೂಪರ್ ಹಿಟ್ ಆಗಿದೆ. ಯಶ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ.

ಲಂಡನ್ ಮೂಲದ ಜೆರೆಮಿ ಸ್ಟಾಕ್ 'ಟಾಕ್ಸಿಕ್' ಚಿತ್ರದ ಟೀಸರ್‌ಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಟೀಸರ್‌ ಕೆಲಸಗಳು ನಡೀತಿದ್ದು ಇದೇ ಕಾರಣಕ್ಕೆ ಯಶ್ ಲಂಡನ್‌ಗೆ ಹೋಗಿದ್ದಾರಾ? ಎನ್ನುವ ಊಹಾಪೋಹ ಕೂಡ ಕೆಲವರಲ್ಲಿದೆ.

'ಟಾಕ್ಸಿಕ್' ಚಿತ್ರದ ಕಥೆ, ಯಶ್ ಲುಕ್, ರೋಲ್ ಬಗ್ಗೆ ಬಹಳ ಕುತೂಹಲವಿದೆ. ಮಲಯಾಳಂ ನಟ ಟೊವಿನೊ ಥಾಮಸ್ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಈಗಾಗಲೇ ಚಿತ್ರದ ಸ್ಟಾರ್‌ಕಾಸ್ಟ್ ಹಾಗೂ ತಂತ್ರಜ್ಞರ ತಂಡ ಫೈನಲ್ ಆಗಿದ್ದು ಶೂಟಿಂಗ್ ಶೆಡ್ಯೂಲ್ ಕೂಡ ಪ್ಲ್ಯಾನ್ ಆಗಿದೆ ಎನ್ನುವ ಚರ್ಚೆ ನಡೀತಿದೆ. ಹೊಸ ವರ್ಷದ ಆರಂಭದಲ್ಲೇ 'ಟಾಕ್ಸಿಕ್' ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ. 2025, ಏಪ್ರಿಲ್ 10ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಕಿಕ್ ಏರಿಸುವ ನಿರೀಕ್ಷೆಯಿದೆ.

More from Filmibeat

English summary
Radhika pandit Shares Sweet Selfie With Husband Yash from regent street london;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X