ಪದೇ ಪದೆ ಯಶ್ ಮುಂಬೈಗೆ ಹೋಗೋದ್ಯಾಕೆ? ರಾಕಿ ಭಾಯ್ ನೋಡಲು ಮುಗಿಬಿದ್ದ ಫ್ಯಾನ್ಸ್
ರಾಕಿಂಗ್ ಸ್ಟಾರ್ 'ಟಾಕ್ಸಿಕ್' ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಕೂಡ ಮುಗಿದಿದೆ. ಯಶ್ ಜೊತೆ ನಯನತಾರಾ, ತನಿಕೇಲ ಭರಣಿ, ತಾರಾ ಸುತಾರ ಸೇರಿದಂತೆ ಸಾಕಷ್ಟು ಜನ ಕಲಾವಿದರು ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.
'ಟಾಕ್ಸಿಕ್' ಸಿನಿಮಾ ಚಿತ್ರೀಕರಣದಿಂದ ಕೊಂಚ ಯಶ್ ಬಿಡುವು ಮಾಡಿಕೊಂಡಿದ್ದಾರೆ. ಸದ್ಯ ಪತ್ನಿ ಜೊತೆ ವಾಣಿಜ್ಯ ನಗರಿ ಮುಂಬೈಗೆ ಭೇಟಿ ನೀಡಿದ್ದಾರೆ. 'KGF' ಚಾಪ್ಟರ್-1 ಸಕ್ಸಸ್ ಬಳಿಕ ಯಶ್ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ. ಚಿತ್ರದ ಪ್ರಮೋಷನ್‌ಗೆ ಕೂಡ ಹೋಗಿದ್ದರು. ಬಳಿಕ ಕೆಲ ಕಾರ್ಯಕ್ರಮಗಳಲ್ಲಿ ಭಾಗಿ ಆಗಲು ತೆರಳಿಸಿದ್ದರು.

'KGF'-1 ಗೆದ್ದ ಬಳಿಕ ದೇಶ ವಿದೇಶಗಳಲ್ಲಿ ಯಶ್ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿಗೆ ಹೋದರೆ ದೊಡ್ಡಮಟ್ಟದಲ್ಲಿ ಅಭಿಮಾನಿಳು ಮುತ್ತಿಕೊಳ್ಳುತ್ತಾರೆ. ಪಾಪರಾಜಿಗಳ ಕ್ಯಾಮರಾಗಳು ಫಲಗುಟ್ಟುತ್ತವೆ. ಇನ್ನು ಫೋಟೊಗಾಗಿ ಮುಗಿಬೀಳುವವರಿಗೆ ಲೆಕ್ಕವಿಲ್ಲ. ನಿನ್ನೆಯಷ್ಟೆ(ಸೆಪ್ಟೆಂಬರ್ 26) ಪತ್ನಿ ಜೊತೆ ಮುಂಬೈನ ಲಾ ಲೊಕ ಮರಿಯಾ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಸವಿದಿದ್ದಾರೆ.
ಊಟ ಮುಗಿಸಿ ಹೊರ ಬಂದಾಗ ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಇನ್ನು ರಾಕಿಂಗ್ ಜೋಡಿ ಮುಂಬೈನಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಿರುವ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಬಾಂದ್ರಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ವೀಡಿಯೋವನ್ನು ನೋಡಬಹುದು. ರಾಧಿಕಾ ಪಂಡಿತ್ ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು ಆಗಾಗ್ಗೆ ಪೋಸ್ಟ್ ಮಾಡಿ ಗಮನ ಸೆಳೆಯುತ್ತಾರೆ.
ಯಶ್-ರಾಧಿಕಾ ಮುಂಬೈ ಭೇಟಿ ಬಗ್ಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಪದೇ ಪದೆ ಯಾಕೆ ಬಾಸ್ ಮುಂಬೈಗೆ ಹೋಗ್ತಾರೆ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸಣ್ಣ ಪ್ರವಾಸದ ರೀತಿ ಹೋಗಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. 'ರಾಮಾಯಣ' ಚಿತ್ರದ ಬಗ್ಗೆ ಚರ್ಚೆಗೂ ಹೋಗಿರಬಹುದು ಎನ್ನುವ ಅಂದಾಜು ಕೆಲವರದ್ದು.
'KGF-2' ಬಳಿಕ ಮತ್ತೊಂದು ಹಿಟ್ ಸಿನಿಮಾ ಮೇಲೆ ಯಶ್ ಕಣ್ಣಿಟ್ಟಿದ್ದಾರೆ. ಅದೇ ಕಾರಣಕ್ಕೆ 'ಟಾಕ್ಸಿಕ್' ಚಿತ್ರದ ಪ್ರತಿ ವಿಚಾರದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಸ್ವತಃ ತಾವೇ ಚಿತ್ರವನ್ನು ನಿರ್ಮಿಸಿ ನಟಿಸುತ್ತಿದ್ದಾರೆ. ಯಾವುದೇ ಸುಳಿವು ಬಿಟ್ಟುಕೊಡದೇ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಘೋಷಣೆ ಆಗಿತ್ತು. ಆಗಸ್ಟ್ 8ಕ್ಕೆ ಅದ್ಧೂರಿಯಾಗಿ ಸಿನಿಮಾ ಸೆಟ್ಟೇರಿತ್ತು. ಚಿತ್ರದಲ್ಲಿ ಬಾಲಿವುಡ್, ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ದೇಶವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಕೂಡ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರಕ್ಕೆ ಬಂಡವಾಳ ಹೂಡುವುದರ ಜೊತೆಗೆ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನಲಾಗ್ತಿದೆ. ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಚಿತ್ರದಲ್ಲಿ ರಾಮ-ಸೀತಾ ಆಗಿ ಬಣ್ಣ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಈ ಪೌರಾಣಿಕ ಸಿನಿಮಾ ಮೂಡಿ ಬರಲಿದೆ.
ಈವರೆಗೆ 'ರಾಮಾಯಣ' ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ಚಿತ್ರದ ಬಗ್ಗೆ ಚರ್ಚೆ ನಡೆಸಲು ಅವರು ಮುಂಬೈಗೆ ಹೋಗಿರಬಹುದು. ಅದೇ ನಿಜವಾದರೆ ದೀಪಾವಳಿ ವೇಳೆಗೆ ಸಿನಿಮಾ ಅಧಿಕೃತವಾಗಿ ಘೋಷಣೆ ಆಗುತ್ತದೆ ಎಂದು ಕೆಲವರು ಊಹಿಸುತ್ತಿದ್ದಾರೆ. ಈ ಎಲ್ಲಾ ಉಹಾಪೋಹಕ್ಕೆ ಶೀಘ್ರದಲ್ಲೇ ಸ್ಪಷ್ಟನೆ ಸಿಗಲಿದೆ.


Click it and Unblock the Notifications











