ರಾಕಿಂಗ್ ಜೋಡಿ ವರಲಕ್ಷ್ಮಿ ಹಬ್ಬ; ಅಭಿಮಾನಿಗಳಿಗೆ ಯಶ್ ಕೊರಳಿನ ಲಾಕೆಟ್ ಮೇಲೆ ಕಣ್ಣು!

ವಾರದ ಹಿಂದೆಯಷ್ಟೆ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. 'ಟಾಕ್ಸಿಕ್' ಪಯಣ ಆರಂಭ ಎಂದು ಹೇಳಿ ಸಿನಿಮಾ ಶುರುವಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಸಹ ಶುರುವಾಗಿದೆ. ಅದರ ಫೋಟೊ, ವೀಡಿಯೋ ಸಹ ಲೀಕ್ ಆಗಿತ್ತು.

ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯಶ್ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಜೋರಾಗಿ ಆಚರಿಸುತ್ತಾರೆ. ರಾಧಿಕಾ ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಈ ವರ್ಷ ತಮ್ಮ ಮನೆಯಲ್ಲಿ ವರಲಕ್ಷ್ಮಿ ಹಬ್ಬದ ಪೂಜೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಫ್ಯಾನ್ಸ್ ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Toxic actor Yash wears a tiger locket during varamahalakshmi puja

ಫೋಟೊಗಳಲ್ಲಿ ರಾಕಿಂಗ್ ಜೋಡಿಯನ್ನು ಜೋಡಿ ನೆಟ್ಟಿಗರು ಮೆಚ್ಚುಗೆ ಸುರಿಮಳೆ ಸುರಿಸಿದ್ದಾರೆ. ರಾಧಿಕಾ ಸೀರೆಯಲ್ಲಿ ಕಂಗೊಳಿಸಿದರೆ ಯಶ್ ಶರ್ಟ್, ಪಂಚೆ-ಶಲ್ಯ ತೊಟ್ಟು ಮಿಂಚಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕಾಗಿ ಯಶ್ ಕಾಣಿಸಿಕೊಂಡಿರುವ ಹೊಸ ಹೇರ್‌ಸ್ಟೈಲ್ ಹೈಲೆಟ್ ಎನಿಸಿಕೊಂಡಿದೆ. ಇನ್ನು ಐರಾ, ಯಥರ್ವ್ ಕೂಡ ಸಾಥ್ ಕೊಟ್ಟಿದ್ದಾರೆ. ಸೂಪರ್ ಜೋಡಿ, ರಾಜಾ ರಾಣಿ ಅಂತೆಲ್ಲಾ ಅಭಿಮಾನಿಗಳು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.

ಕೆಲವರ ಕಣ್ಣು ಯಶ್ ಕುತ್ತಿಗೆಯಲ್ಲಿ ಧರಿಸಿರುವ ಚಿನ್ನದ ಸರ ಹಾಗೂ ಲಾಕೆಟ್ ಮೇಲೆ ನೆಟ್ಟಿದೆ. ಹುಲಿ ತಲೆಯ ಲಾಕೆಟ್ ಅನ್ನು ಯಶ್ ಹಾಕಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹುಲಿ ಉಗುರಿನ ಪ್ರಕರಣ ಭಾರೀ ಸದ್ದು ಮಾಡಿತ್ತು. ಕೇಸ್ ಸ್ಟಾರ್ ನಟರ ಮನೆಯಲ್ಲಿ ಶೋಧ ಅಂತೆಲ್ಲಾ ಭಾರೀ ಸುದ್ದಿ ಆಗಿತ್ತು. ಪ್ರಕರಣದಲ್ಲಿ ಬಿಗ್‌ಬಾಸ್ ಮನೆಯೊಳಗೆ ಇದ್ದ ವರ್ತೂರು ಸಂತೋಷ್ ಜೈಲಿಗೂ ಹೋಗಿ ಬಂದಿದ್ದರು.

ಅದೇ ಘಟನೆಯನ್ನು ಪ್ರಸ್ತಾಪಿಸಿರುವ ಕೆಲವರು ಹುಲಿ ಉಗುರು ಇದ್ರೆ ಕೇಸ್, ಹುಲಿಯನ್ನೇ ಹಾಕಿಕೊಂಡರೆ ಹೇಗೆ? ರಾಜಾಹುಲಿ, ರಾಜಾಹುಲಿ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಯಶ್ ಕುತ್ತಿಗೆಯಲ್ಲಿರುವ ಚಿನ್ನದ ಸರ ಹಾಗೂ ಲಾಕೆಟ್ ಬೆಲೆ ಎಷ್ಟಿರಬಹುದು ಅಂತೆಲ್ಲಾ ಕಾಮೆಂಟ್ ಹಾಕ್ತಿದ್ದಾರೆ. ಇನ್ನು ರಾಮಾಯಣ ಚಿತ್ರದ ರಾಮ-ಸೀತಾ ಪಾತ್ರಕ್ಕೆ ಇದಕ್ಕಿಂತ ಜೋಡಿ ಬೇಕಿತ್ತಾ? ಕೊನೆ ಪಕ್ಷ 'ಟಾಕ್ಸಿಕ್' ಚಿತ್ರಕ್ಕೆ ರಾಧಿಕಾ ಮೇಡಂ ನಾಯಕಿ ಆದ್ರೆ ಚೆನ್ನಾಗಿರುತ್ತದೆ ಎಂದು ಬರೆದಿದ್ದಾರೆ.

Toxic actor Yash wears a tiger locket during varamahalakshmi puja

ಇನ್ನು ಯಶ್ ನಟನೆಯ 'ಕೆಜಿಎಫ್-2' ಚಿತ್ರಕ್ಕೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 2 ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಸಾಹಸ ಸಂಯೋಜನೆಗಾಗಿ ಅನ್ಬುರಿವ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು 'ಕಾಂತಾರ' ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆಯಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಯಶ್ ಎಲ್ಲರನ್ನು ಅಭಿನಂದಿಸಿದ್ದರು.

'ಟಾಕ್ಸಿಕ್' ಸಿನಿಮಾ ವಿಚಾರಕ್ಕೆ ಬಂದರೆ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಭಾರೀ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಯಶ್ ಜೊತೆಗೆ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ನಟಿಸುವುದು ಪಕ್ಕಾ ಆಗಿದೆ. ಇನ್ನುಳಿದಂತೆ ಯಾರೆಲ್ಲಾ ಇರ್ತಾರೆ? ಎನ್ನುವುದು ಕುತೂಹಲ ಮೂಡಿಸಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ತಂಡದ ಭಾಗವಾಗಲಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರುತ್ತಾ ಕಾದು ನೋಡಬೇಕಿದೆ.

More from Filmibeat

English summary
PICS: Yash's pendant grabs attention in varamahalakshmi puja photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X