ಅಂಬಾನಿ ಮಗನ ಮದುವೆಗೆ ಯಶ್ ಹಾಜರ್; 'ಟಾಕ್ಸಿಕ್' ಹೇರ್‌ಸ್ಟೈಲ್ ರಿವೀಲ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾ ಟೈಟಲ್ ಟೀಸರ್ ಬಳಿಕ ಯಾವುದೇ ಅಪ್‌ಡೇಟ್ ಸಿಗಲಿಲ್ಲ. ಸದ್ದಿಲ್ಲದೇ ಸಿನಿಮಾ ಕೆಲಸಗಳು ನಡೀತಿದೆ. ಇನ್ನು ಸಿನಿಮಾ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬರ್ತಿದೆ. ಆದರೆ ಅದನ್ನು ಚಿತ್ರತಂಡ ಮಾತ್ರ ಖಚಿತ ಪಡಿಸಲಿಲ್ಲ. ಹೊಸ ಅಪ್‌ಡೇಟ್ ಸಿಗದೇ ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಪಾತ್ರ ಏನು? ಲುಕ್ ಹೇಗಿರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುವ ಕಥೆ ಇದು ಎಂದು ಹೇಳಲಾಗುತ್ತಿದೆ. 60, 70ರ ದಶಕದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡುತ್ತಿದ್ದಾರೆ ಎನ್ನಲಾಗ್ತಿದೆ. ಯಶ್ ಡಾನ್ ಅವತಾರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ನಯನತಾರಾ, ಕೈರಾ ಅದ್ವಾನಿ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

Toxic actor yash s New Hairstyle revealed in Ambani Family Wedding

ಬೆಂಗಳೂರಿನಲ್ಲೇ ಸೆಟ್ ಹಾಕಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿದೆ. ಇನ್ನು ಕಳೆದ ಕೆಲ ದಿನಗಳಿಂದ ಯಶ್ ತಮ್ಮ ಹೇರ್‌ಸ್ಟೈಲ್ ರಿವೀಲ್ ಮಾಡುತ್ತಿಲ್ಲ. ತಲೆಗೆ ಕ್ಯಾಪ್ ಅಥವಾ ಸ್ಕ್ರಾಪ್ ಕಟ್ಟಿಕೊಂಡು ಓಡಾಡುತ್ತಿದ್ದರು. 'ಟಾಕ್ಸಿಕ್' ಚಿತ್ರಕ್ಕಾಗಿ ಮಾಡಿರುವ ಹೇರ್‌ಸ್ಟೈಲ್ ಗೊತ್ತಾಗಬಾರದು ಎಂದು ಯಶ್ ಹಾಗೆ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಬಹಳ ದಿನಗಳ ಬಳಿಕ ತಲೆಗೆ ಯಾವುದೇ ಕ್ಯಾಪ್ ಇಲ್ಲದೇ ಸ್ಟೈಲಿಶ್ ಹೇರ್‌ಸ್ಟೈಲ್‌ನಲ್ಲಿ ಯಶ್ ದರ್ಶನ ಕೊಟ್ಟಿದ್ದಾರೆ. ಅದು ಕೂಡ ಅಂಬಾನಿ ಮಗನ ಮದುವೆ ಸಮಾರಂಭದಲ್ಲಿ ಅನ್ನೋದು ವಿಶೇಷ.

'KGF' ಚಿತ್ರಕ್ಕಾಗಿ ಯಶ್ ಉದ್ದ ಕೂದಲು ಹಾಗೂ ಗಟ್ಟವಾಗಿ ಗಡ್ಡ, ಮೀಸೆಯಲ್ಲಿ ಕಾಣಿಸಿಕೊಂಡಿದ್ದರು. ಅದೇ ಲುಕ್‌ ಅನ್ನು ಮುಂದುವರೆಸಿಕೊಂಡು ಬಂದಿದ್ದರು. 'KGF' ಚಾಪ್ಟರ್‌-1 ರಿಲೀಸ್‌ಗೂ ಮುನ್ನ 'ಮೈ ನೇಮ್ ಕಿರಾತಕ' ಚಿತ್ರಕ್ಕಾಗಿ ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ್ದರು. 'KGF'-1 ಹಿಟ್ ಬಳಿಕ ಯಶ್ ಉದ್ದ ಗಡ್ಡ, ಹೇರ್‌ಸ್ಟೈಲ್ ಮುಂದುವರೆಸಿದ್ದರು. ಅಂಬರೀಶ್ ಸೇರಿದಂತೆ ಹಲವರು ಅದಕ್ಕೆ ಕತ್ತರಿ ಹಾಕಲು ಹೇಳಿದ್ದರೂ ಕೇಳಿರಲಿಲ್ಲ. ಕೊನೆಗೂ ಕೂದಲು, ಗಡ್ಡ ಟ್ರಿಮ್ ಮಾಡಿಕೊಂಡು ಯಶ್ ಹೊಸ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.

ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಮದುವೆ 3 ದಿನಗಳ ಕಾಲ ಮುಂಬೈನಲ್ಲಿ ನಡೀತಿದೆ. ಈಗಾಗಲೇ ಭಾರತೀಯ ಚಿತ್ರರಂಗದ ಹಲವು ತಾರೆಯರು ಸೇರಿದಂತೆ ಸಾಕಷ್ಟು ಉದ್ಯಮಿಗಳು, ರಾಜಕಾರಣಿಗಳು ಈ ಸಮಾರಂಭಕ್ಕೆ ಸಾಕ್ಷಿ ಆಗುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ನಟ ಯಶ್‌ಗೆ ಆಹ್ವಾನ ಬಂದಿದೆ. ಈಗಾಗಲೇ ಯಶ್ ಮದುವೆ ನಡೆಯುತ್ತಿರುವ ಹೋಟೆಲ್ ಸೇರಿಕೊಂಡಿದ್ದಾರೆ. ಯಶ್ ಕಾರ್ ಇಳಿದು ಒಳಗೆ ಹೋಗುವಾಗ ಪಾಪರಾಜಿಗಳ(ಛಾಯಾಗ್ರಾಹಕ) ಕಡೆ ಕೈ ಬೀಸಿದ್ದಾರೆ. ಈ ವೇಳೆ ಯಶ್ ಹೊಸ ಲುಕ್ ರಿವೀಲ್ ಆಗಿದೆ.

ಹಾಗಂತ ಯಶ್ ಜಾಸ್ತಿ ಕೂದಲಿಗೆ ಸಂಪೂರ್ಣವಾಗಿ ಕತ್ತರಿ ಹಾಕಿಲ್ಲ. ಆದರೆ ಶಾರ್ಟ್ ಮಾಡಿಸಿದ್ದಾರೆ. ವಿ - ಹಾಕ್(V - Hawk) ಹೇರ್‌ಸ್ಟೈಲ್‌ ಮಾಡಿಸಿದ್ದಾರೆ. ಇನ್ನು ಗಿರಿಜಾ ಮೀಸೆ ಹಾಗೇ ಇದ್ದು, ಗಡ್ಡ ಕೂಡ ಕೊಂಚ ಟ್ರಿಮ್ ಮಾಡಿಕೊಂಡಿರೋದು ಗೊತ್ತಾಗ್ತಿದೆ. ಇದೇ ಲುಕ್‌ನಲ್ಲಿ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ರಾಧಿಕಾ ಪಂಡಿತ್ ಕೂಡ ಯಶ್ ಜೊತೆ ಅಂಬಾನಿ ಮನೆ ಮದುವೆ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.

More from Filmibeat

English summary
KGF actor yash V - Hawk hairstyle for toxic film goes viral;
Read more about: yash toxic kgf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X