'ಟಾಕ್ಸಿಕ್' ಹೀರೋ ಯಶ್ ಬಳಿ ಇರುವ ಒಟ್ಟು ಆಸ್ತಿ ಎಷ್ಟು? 'ಕೆಜಿಎಫ್' ಬಳಿಕ ಹೇಗಿದೆ ಲೈಫ್ ಸ್ಟೈಲ್?
ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ 'ಟಾಕ್ಸಿಕ್' ಜಪ ಮಾಡುತ್ತಿದ್ದಾರೆ. ತಮ್ಮ ನಟ ಬರ್ತ್‌ಡೇಗೆ ಏನು ಸರ್ಪ್ರೈಸ್ ಕೊಡುತ್ತಾರೋ ಅಂತ ಎದುರು ನೋಡುತ್ತಿದ್ದಾರೆ. 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೆಗಾ ಸಕ್ಸಸ್ ಆದ ಬಳಿಕ ರಾಕಿಂಗ್ ಸ್ಟಾರ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಈ ಬಾರಿ ಬರ್ತ್‌ಡೇ ರಾಕಿ ಭಾಯ್‌ಗೆ ಸ್ಪೆಷಲ್.
'ಕೆಜಿಎಫ್ 2' ಬಳಿಕ ಯಶ್ ಸಿನಿಮಾವನ್ನು ನೋಡುವ ಪರಿ ಬದಲಾಗಿದೆ. ಲೆಕ್ಕಾಚಾರಗಳು ಬದಲಾಗಿದ್ದಾವೆ. ಈಗ ಕೇವಲ ಕನ್ನಡ ಸಿನಿಮಾ ಅಂತಷ್ಟೇ ನೋಡುತ್ತಿಲ್ಲ. ಕನ್ನಡ ಸಿನಿಮಾವನ್ನೇ ಗ್ಲೋಬಲ್ ಲೆವೆಲ್‌ಗೆ ತಲುಪುವಂತೆ ಮಾಡುವ ಗುರಿ ಇವರದ್ದು. ಹಾಗಂತ ಇದು ಇಂದು ನಿನ್ನೆಯ ಲೆಕ್ಕಾಚಾರ ಅಲ್ಲ. 'ಕೆಜಿಎಫ್'ಗೂ ಮುನ್ನವೇ ತನ್ನ ಭವಿಷ್ಯದ ಬಗ್ಗೆ ಸ್ಕೆಚ್ ಹಾಕಿದ್ದರು.

ತಾವು ಅಂದುಕೊಂಡಂತೆ ಯಶ್ ಮುನ್ನಡೆಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಯಶಸ್ಸು ಕೂಡ ಸಿಕ್ಕಿದೆ. ರಾಕಿ ಭಾಯ್ ಅಂದುಕೊಂಡಂತೆ ನಡೆಯುತ್ತಿದೆ. ಯಶ್‌ಗೀಗ ಸಕ್ಸಸ್ ಸಿಕ್ಕಿದೆ. ಹೆಸರೂ ಬಂದಿದೆ. ಹಣ, ಆಸ್ತಿ ಎಲ್ಲವೂ ಇದೆ. ನ್ಯಾಷನಲ್ ಸ್ಟಾರ್ ಆದ್ಮೇಲೆ ಯಶ್ ಆಸ್ತಿಯ ಮೌಲ್ಯ ಎಷ್ಟು? ಈಗ ಸಿನಿಮಾಗೆ ಪಡೆಯುವ ಸಂಭಾವನೆ ಏನು? ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಯಶ್ 2007ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಪ್ರಿಯಾ ಹಾಸನ್ ನಟಿಸಿದ 'ಜಂಬದ ಹುಡುಗಿ' ಸಿನಿಮಾದಲ್ಲಿ ನಟಿಸಿದ್ದರು. ಆ ವೇಳೆ ಯಶ್ ಮುಂದೊಂದು ದಿನ ನ್ಯಾಷನಲ್ ಸ್ಟಾರ್ ಆಗಬಹುದು ಅಂತ ಯಾರೂ ಊಹಿಸಿರಲಿಲ್ಲ. ಆದರೆ, ಯಶ್ ಅಲ್ಲಿಂದ ಬೆಳೆದು ಬಂದಿದ್ದು ನಿಜಕ್ಕೂ ಇಂಟ್ರೆಸ್ಟಿಂಗ್. 'ಮೊಗ್ಗಿನ ಮನಸ್ಸು' ಬಳಿಕ ಯಶ್ ವೃತ್ತಿ ಬದುಕೇ ಬದಲಾಗುತ್ತಾ ಹೋಯ್ತು.

'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಅಲ್ಲಿಂದ ಯಶ್ ಸಂಭಾವನೆಯಲ್ಲಿ ಏರಿಕೆ ಆಗಿತ್ತು. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ ರಾಮಾಚಾರಿ ಸಿನಿಮಾ ಬಳಿಕ ಯಶ್ ಸಂಭಾವನೆ ಆರಿಂದ ಏಳು ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಅದು 'ಕೆಜಿಎಫ್ ಚಾಪ್ಟರ್ 1' ಕ್ಕೆ ಯಶ್ 7 ರಿಂದ 8 ಕೋಟಿ ರೂಪಾಯಿ ಸಂಪಾದನೆ ಪಡೆದಿದ್ದರ ಎನ್ನಲಾಗಿದೆ. ಆದರೆ, 'ಕೆಜಿಎಫ್ 2' ಸಿನಿಮಾದಿಂದ ಸಂಭಾವನೆಯ ಪಡೆಯುವ ಪರಿನೇ ಬದಲಾಗಿದೆ ಎನ್ನುತ್ತಿವೆ ಮೂಲಗಳು.
'ಕೆಜಿಎಫ್ 2'ಗೆ ಯಶ್ ಸಂಭಾವನೆಯನ್ನು ಪರ್ಸಂಟೇಜ್ ರೂಪದಲ್ಲಿ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. 'ಕೆಜಿಎಫ್ 2' ಸಿನಿಮಾದಿಂದ ಯಶ್ ಬಾರೀ ಮೊತ್ತದ ಹಣವನ್ನು ಜೇಬಿಗೆ ಇಳಿಸಿದ್ದರು ಎನ್ನಲಾಗಿದೆ. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ ಯಶ್ 300 ಕೋಟಿ ರೂಪಾಯಿ ಹಣವನ್ನು ಜೇಬಿಗೆ ಇಳಿಸಿದ್ದಾರೆ ಅನ್ನೋದು ಸುದ್ದಿ. ಈಗ 'ಟಾಕ್ಸಿಕ್' ಸಿನಿಮಾಗೆ ಅವರೂ ಕೂಡ ನಿರ್ಮಾಪಕರಲ್ಲಿ ಒಬ್ಬರಲ್ಲಾಗಿದ್ದಾರೆ. ಹಾಗೇ ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟಿಸುತ್ತಿರುವ 'ರಾಮಾಯಣ' ಸಿನಿಮಾ ಮೇಲೂ ಹಣ ಹೂಡಿದ್ದಾರೆ. ಇನ್ನು 'ಕೆಜಿಎಫ್ 3' ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಈ ಬಗ್ಗೆ ಇನ್ನೂ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಮೂಲಕಗಳ ಪ್ರಕಾರ, ಯಶ್ ಬಳಿಕ 350 ಕೋಟಿ ರೂಪಾಯಿಯಿಂದ 400 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಏರಿಯಾ ವಿಂಡ್‌ಸರ್ ಮ್ಯಾನರ್ ಬಳಿ ಪ್ರಸ್ಟೀಜ್ ಗಾಲ್ಫ್ ಅಪಾರ್ಟ್‌ಮೆಂಟ್‌ನಲ್ಲಿ ಡ್ಯೂಪ್ಲೆಕ್ಸ್ ಪಾರ್ಟ್‌ಮೆಂಟ್ ಅನ್ನು ಹೊಂದಿದ್ದಾರೆ. ಇದರ ಬೆಲೆ ಆರು ಕೋಟಿ ರೂಪಾಯಿ ಎಂದು ವರಿದಿಯಾಗಿದೆ. ಹಾಗೇ ಹಾಸನದಲ್ಲಿ 70 ರಿಂದ 80 ಎಕರೆ ಫಾರ್ಮ್ ಹೌಸ್ ಅನ್ನು ಹೊಂದಿದ್ದಾರೆ. ಹಾಗೇ 88 ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆನ್ಜ್ ಜಿಎಲ್‌ಎಸ್, 70 ಲಕ್ಷ ರೂ. ಬೆಲೆ ಬಾಳುವ ಮರ್ಸಿಡೀಸ್ ಜಿಎಲ್‌ಸಿ, 80 ಲಕ್ಷ ರೂ. ಬೆಲೆಯ ಔಡಿ ಕ್ಯೂ 7, 70 ಲಕ್ಷದ ಬಿಎಂಡ್ಲ್ಯೂ 520ಡಿ ಕಾರು ಇದೆ ಎನ್ನಲಾಗಿದೆ.
Disclaimer: ಈ ಅಂಕಿ ಅಂಶಗಳನ್ನು ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಫಿಲ್ಮಿಬೀಟ್ ಕನ್ನಡ ಇದನ್ನು ಅಧಿಕೃತವಾಗಿ ಧೃಡೀಕರಿಸುವುದಿಲ್ಲ.


Click it and Unblock the Notifications











