ಅಭಿಮಾನಿಗಳಿಗೆ ಸಿಹಿಸುದ್ದಿ: ಇಲ್ಲಿದೆ ಯಶ್ 'ಟಾಕ್ಸಿಕ್' ಶೂಟಿಂಗ್ ಅಪ್‌ಡೇಟ್

'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೂ ಏನೋ ದೊಡ್ಡದಾಗಿ ಯಶ್ ಪ್ರೇಕ್ಷಕರ ಮುಂದೆ ತರ್ತಿದ್ದಾರೆ ಎನ್ನುವ ಭರವಸೆ ಕೂಡ ಇದೆ. ಸದ್ಯ ಮುಂಬೈನಲ್ಲಿ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮುಂದಿನ ವಾರವೇ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಸಿನಿಮಾ ಘೋಷಣೆ ಆದಾಗ ಏಪ್ರಿಲ್ 10, 2025ಕ್ಕೆ ಸಿನಿಮಾ ತೆರೆಗೆ ಬರುತ್ತದೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಚಿತ್ರೀಕರಣ ಶುರುವಾಗುವುದೇ ತಡವಾಗಿತ್ತು. ಅಷ್ಟರಲ್ಲೇ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋಸ್ ಆಗುವ ಸುಳಿವು ಸಿಕ್ಕಿತ್ತು. ಅದೇ ರೀತಿ ಆಯಿತು.

Toxic movie shoot in Mumbai Kiara Advani Tara Sutaria shooting with yash

ಕೊನೆಪಕ್ಷ ಈ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಟಾಕ್ಸಿಕ್' ಸಿನಿಮಾ ತೆರೆಗೆ ಬರುತ್ತದೆ ಎಂದು ಕೆಲವರು ಭಾವಿಸಿದ್ದರು. ಅದನ್ನು ಸುಳ್ಳಾಗಿಸಿ ಟೀಂ ಮುಂದಿನ ವರ್ಷ 19ಕ್ಕೆ ಸಿನಿಮಾ ತೆರೆಗೆ ಬರುತ್ತದೆ ಎಂದು ಇತ್ತೀಚೆಗೆ ಘೋಷಣೆ ಮಾಡಲಾಗಿದೆ. ಅಂದಹಾಗೆ ಚಿತ್ರತಂಡ ಸದ್ಯ ಮುಂಬೈನ ಕೊಲಾಬಾದಲ್ಲಿರುವ ಅಫ್ಘಾನ್ ಚರ್ಚ್‌ನಲ್ಲಿ ಚಿತ್ರದ ಚಿತ್ರೀಕರಣದ ನಡೆಯುತ್ತಿದೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

3 ದಿನಗಳ ಕಾಲ ಆ ಚರ್ಚ್‌ನಲ್ಲಿ ಒಂದಷ್ಟು ಆಕ್ಷನ್ ಸೀಕ್ವೆನ್ಸ್ ಸೆರೆ ಹಿಡಿಯಲಾಗುತ್ತಿದೆಯಂತೆ. ಈಗಾಗಲೇ ನಯನತಾರಾ ಹಾಗೂ ಕಿಯಾರಾ ಅದ್ವಾನಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಚರ್ಚ್‌ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆಯಲಾಗಿದೆ. ಅಲ್ಲಿ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿದ ಬಳಿಕ ಮುಂಬೈನ ಮಾಧ್ ದ್ವೀಪಕ್ಕೆ ಚಿತ್ರತಂಡ ಶಿಫ್ಟ್ ಆಗಲಿದೆ. ಅಲ್ಲೇ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.

ಕೊನೆ ಶೆಡ್ಯೂಲ್ ಮುಗಿದ ಬಳಿಕ ಹೆಚ್ಚು ಕಮ್ಮಿ ಒಂದು ವರ್ಷದ ಕಾಲ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ವರ್ಕ್ ನಡೆಯಲಿದೆ. ಚಿತ್ರದಲ್ಲಿ ಸಾಕಷ್ಟು ಗ್ರಾಫಿಕ್ಸ್ ವರ್ಕ್ ಇದೆ. ಇನ್ನು ಯಶ್ ತಮ್ಮ ಭಾಗದ ಚಿತ್ರೀಕರಣವನ್ನು ಸಾಧ್ಯವಾದಷ್ಟು ಬೇಗ ಮುಗಿಸಲು ಮುಂದಾಗಿದ್ದಾರೆ. ಸದ್ಯ ಅಫ್ಘಾನ್ ಚರ್ಚ್‌ನಲ್ಲಿ ಬಾಲಿವುಡ್ ನಟಿ ತಾರಾ ಸುತಾರಿಯೊ ಜೊತೆ ಒಂದಷ್ಟು ಆಕ್ಷನ್ ಸೀಕ್ವೆನ್ಸ್ ಶೂಟ್ ಮಾಡಲಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ಹಾಲಿವುಡ್ ಕಲಾವಿದರು, ತಂತ್ರಜ್ಞರು 'ಟಾಕ್ಸಿಕ್' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿ ಕೂಡ ಕನ್ನಡ ಚಿತ್ರದಲ್ಲಿ ಕೆಲಸ ಮಾಡಿದ ಬಗ್ಗೆ ಯಶ್ ಡೆಡಿಕೇಷನ್ ಬಗ್ಗೆ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಇನ್ನು ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಕೊಡಲು ಚಿತ್ರತಂಡ ಹಿಂದೇಟು ಹಾಕುತ್ತಿದೆ.

ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು, ತಂತ್ರಜ್ಞರ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡಿಲ್ಲ. ಕೆಲಸ ಮಾಡುತ್ತಿರುವ ಯಾರೊಬ್ಬರು ಮಾಹಿತಿ ಹಂಚಿಕೊಳ್ಳದಂತೆ ಚಿತ್ರತಂಡ ತಾಕೀತು ಮಾಡಿದೆ. ಕನ್ನಡ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಮುಂದೆ ದೇಶ ವಿದೇಶದ ಹಲವು ಭಾಷೆಗಳಿಗೆ ಡಬ್ಬಿಂಗ್ ಮಾಡುವ ಕೆಲಸ ಆರಂಭವಾಗಲಿದೆ. ನಗರದ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಸೆಟ್ ಹಾಕಿ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

60-70ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಡ್ರಗ್ ಮಾಫಿಯಾ ಸುತ್ತಾ ಚಿತ್ರದ ಕಥೆ ಸಾಗಲಿದೆಯಂತೆ. ಅದಕ್ಕೆ ತಕ್ಕ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಆ ಕಾಲಘಟ್ಟಕ್ಕೆ ಸೂಕ್ತವಾದ ಲೋಕೇಶನ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಯೂರೋಪ್‌ ಭಾಷೆಗಳಿಗೆ ಸಿನಿಮಾ ಡಬ್ ಆಗಲಿದೆ. ಇನ್ನು ಯಶ್ ಸಹೋದರಿ ಪಾತ್ರದಲ್ಲಿ ನಯನತಾರ ನಟಿಸಿದ್ದಾರೆ ಎನ್ನಲಾಗ್ತಿದೆ.

ಮತ್ತೊಮ್ಮೆ ಡಾನ್ ಅವತಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದಿದ್ದ ಟೀಸರ್ ಸೂಪರ್ ಹಿಟ್ ಆಗಿತ್ತು. ಸಿನಿಮಾ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಹುಟ್ಟುಹಾಕಿದೆ.

More from Filmibeat

English summary
Yash's Toxic team to shoot high octane action sequence at Afghan church at Colaba area Mumbai
Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X