ಯಶ್ 'ಟಾಕ್ಸಿಕ್' 100 ದಿನ ರೀ-ಶೂಟ್? ಈ ವರ್ಷ ಸಿನಿಮಾ ರಿಲೀಸ್ ಆಗಲ್ಲ ಅನ್ನೋದು ನಿಜಾನಾ?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ರಿಲೀಸ್ ಪದೇ ಪದೆ ಮುಂದಕ್ಕೆ ಹೋಗ್ತಿದೆ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಆದರೂ ಯಶ್ ಮೇಲಿನ ನಂಬಿಕೆಯಿಂದ ಲೇಟ್ ಆದ್ರು ಅದ್ಭುತವಾಗಿ ಸಿನಿಮಾ ಮೂಡಿ ಬರುತ್ತದೆ ಎಂದು ಕಾಯುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇವತ್ತು(ಜೂನ್ 4) ಸಿನಿಮಾ ತೆರೆಗೆ ಬರಬೇಕಿತ್ತು.
ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವ ಕಾರಣಕ್ಕೆ ತಡವಾಗ್ತಿದೆ ಎಂದು ಚಿತ್ರತಂಡ ಹೇಳಿದೆ. ಸಿನಿಮಾ ಫಸ್ಟ್ ಕಾಪಿ ಸಿದ್ಧವಾದ ಬಳಿಕ ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಸಿನಿಮಾ ವಿತರಣೆ ಮಾತುಕತೆ ನಡೆಸಲು ಚಿತ್ರತಂಡ ಮುಂದಾಗಿದೆ. ಅದೇ ಕಾರಣಕ್ಕೆ ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಮುಗಿದು 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ತಯಾರಾಗಲಿ ಎಂದು ಚಿತ್ರತಂಡ ಕಾಯ್ತಿದೆ. ಆದರೆ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ವದಂತಿ ಹರಿದಾಡ್ತಿದೆ.

'ಟಾಕ್ಸಿಕ್' ಚಿತ್ರಕ್ಕಾಗಿ 100 ದಿನ ರೀ-ಶೂಟ್ ಮಾಡಲು ಯಶ್ ಮುಂದಾಗಿದ್ದಾರೆ, ಹಾಗಾಗಿ ಈ ವರ್ಷ ಸಿನಿಮಾ ಬಿಡುಗಡೆ ಅನುಮಾನ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ತಮಿಳು ಇಂಡಸ್ಟ್ರಿಯಲ್ಲಿ ಇಂತಾದೊಂದು ಸುದ್ದಿ ತೇಲಿಬಿಡಲಾಗಿದೆ. ಇದಕ್ಕೆ ಯಶ್ ಅಭಿಮಾನಿಗಳು ತಿರುಗೇಟು ಕೊಡುತ್ತಿದ್ದಾರೆ. ಸುಖಾಸುಮ್ಮನೆ ಸುಳ್ಳು ವದಂತಿ ಹಬ್ಬಿಸಬೇಡಿ ಎಂದು ತಿಳಿ ಹೇಳುತ್ತಿದ್ದಾರೆ.
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ 'ಟಾಕ್ಸಿಕ್' ಸಿನಿಮಾ ನೋಡಿ ಯಶ್ ಅವರಿಗೆ ಕೆಲ ದೃಶ್ಯಗಳು ಇಷ್ಟವಾಗಿಲ್ಲ. ಹೆಚ್ಚು ಕಮ್ಮಿ ಮುಕ್ಕಾಲು ಭಾಗ ಸಿನಿಮಾ ರೀ-ಶೂಟ್ ಮಾಡೋಣ ಎನ್ನುತ್ತಿದ್ದಾರೆ. ಹಾಗಾಗಿ 100 ದಿನಗಳ ಕಾಲ ಮತ್ತೆ ಚಿತ್ರೀಕರಣ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದಾರೆ. ಹಾಗಾಗಿ ಸಿನಿಮಾ ಯಾವಾಗ ರಿಲೀಸ್ ಎನ್ನುವುದು ಗೊತ್ತಿಲ್ಲ. ಓಟಿಟಿ ರೈಟ್ಸ್ ವಿಚಾರದಲ್ಲಿ ಕೂಡ 'ಟಾಕ್ಸಿಕ್' ತಂಡಕ್ಕೆ ಹಿನ್ನಡೆ ಆಗ್ತಿದೆ ಎಂದು ಅಂತೆಕಂತೆ ಸುದ್ದಿ ಹಬ್ಬಿಸಲಾಗ್ತಿದೆ. ಚಿತ್ರತಂಡ ಈ ಬಗ್ಗೆ ಮೌನ ವಹಿಸಿದೆ. ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಜೂನ್ 8ರಂದು(ಸೋಮವಾರ) ನಿರ್ದೇಶಕಿ ಗೀತು ಮೋಹನ್ ದಾಸ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ 'ಟಾಕ್ಸಿಕ್' ಸಿನಿಮಾ ಬಗ್ಗೆ ಏನಾದರೂ ಅಪ್‌ಡೇಟ್ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಟೀಸರ್ ಜೊತೆಗೆ ಒಂದು ಸಾಂಗ್ ಕೂಡ ಬಂದಿದೆ. ಚಿತ್ರೀಕರಣ ಮುಗಿಯದೇ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿರಲಿಲ್ಲ. ಸಿನಿಮಾಕಾನ್ ಸಮಾವೇಶಕ್ಕೆ ಹೋದಾಗ ಅಲ್ಲಿ 9 ನಿಮಿಷಗಳ ಫುಟೇಜ್ ಕೂಡ ಪ್ರದರ್ಶನ ಮಾಡಿದ್ದಾರೆ. ಹಾಗಾಗಿ ರೀ-ಶೂಟ್ ಪ್ರಶ್ನೆಯೇ ಬರಲ್ಲ ಎಂದು ಯಶ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರುತ್ತದೆ ಎಂದು ಕೆಲವರು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೇನು ಚಿತ್ರದ ಫಸ್ಟ್ ಕಾಪಿ ಚಿತ್ರತಂಡ ಕೈ ಸೇರುತ್ತದೆ. ಬಳಿಕ ವಿದೇಶಗಳಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಬಿಡುಗಡೆ ಪ್ಲ್ಯಾನ್ ನಡೆಯುತ್ತದೆ. ಅದನ್ನೆಲ್ಲಾ ನೋಡಿಕೊಂಡು ಡೇಟ್ ಘೋಷಣೆ ಮಾಡುತ್ತಾರೆ ಎನ್ನುವ ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ. ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ, ತಂದೆ-ಮಗನ ಜಿದ್ದಾಜಿದ್ದಿನ ಕಥೆ ಎಂದು ಸ್ವತಃ ಯಶ್ ಹೇಳಿದ್ದಾರೆ. ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಅದಕ್ಕೆ ತಕ್ಕಂತೆ ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ಯಾನ್ ವರ್ಲ್ಡ್ ಬಾಕ್ಸಾಫೀಸ್ ಕಬ್ಜ ಮಾಡೋಕೆ ಯಶ್ ಮುಂದಾಗಿದ್ದಾರೆ.


Click it and Unblock the Notifications