Tabaahi Video Song: ಕಾರು, ಬೀಚು, ಪಬ್ಬು, ಸರ್ಕಸ್ ಎಲ್ಲೆಲ್ಲೂ ರೊಮ್ಯಾನ್ಸ್; ಮುತ್ತಿನ ಮಳೆಗರೆದ ಯಶ್-ಕಿಯಾರಾ
'ಟಾಕ್ಸಿಕ್' ಚಿತ್ರದ 'ತಬಾಹಿ' ವೀಡಿಯೋ ಸಾಂಗ್ ಬಂದುಬಿಟ್ಟಿದೆ. ಯಾವುದೇ ಅನೌನ್ಸ್‌ಮೆಂಟ್ ಇಲ್ಲದೇ ನೇರವಾಗಿ ಸಾಂಗ್ ರಿಲೀಸ್ ಮಾಡಿದ್ದಾರೆ. ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಸಾಂಗ್ ಕಂಪೋಸ್ ಮಾಡಲಾಗಿದೆ. ಅದನ್ನು ಅಷ್ಟೇ ಸೊಗಸಾಗಿ ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಯಶ್ ಹಾಗೂ ಕಿಯಾರಾ ಅದ್ವಾನಿ ಸಿಕ್ಕಾಪಟ್ಟೆ ಕೆಮೆಸ್ಟ್ರಿ ಹೈಲೆಟ್ ಹಾಕಿದೆ.
ಎರಡು ತಿಂಗಳ ಹಿಂದೆ 'ತಬಾಹಿ' ಆಡಿಯೋ ಸಾಂಗ್ ಬಂದಿತ್ತು. ಒಂದೇ ಒಂದು ಫೋಟೊ ಇಟ್ಟು ವೀಡಿಯೋ ರಿಲೀಸ್ ಮಾಡಿದ್ದಾರೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಳಿಕ ಕೇಳ್ತಾ ಕೇಳ್ತಾ ಇಷ್ಟವಾಗಿತ್ತು. ಇದೀಗ ವೀಡಿಯೋ ಸಾಂಗ್ ಬಂದು ಸದ್ದು ಮಾಡ್ತಿದೆ. ಯಶ್ ಹಾಗೂ ಕಿಯಾರಾ ಸಿಕ್ಕಾಪಟ್ಟೆ ಸ್ಟೈಲಿಶ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಮಾಡಿ ಹುಬ್ಬೇರಿಸಿದ್ದಾರೆ.

ಕಾರು, ಬೀಚು, ಪಬ್ಬು, ಸರ್ಕಸ್ ಎಲ್ಲೆಲ್ಲೂ ರಾಯ ಹಾಗೂ ನಾಡಿಯಾ ರೊಮ್ಯಾನ್ಸ್ ನೋಡಬಹುದು. ನಡುವೆ ರೆಬೆಕಾ ಆಗಿ ತಾರಾ ಸುತಾರಿಯಾ ಕೂಡ ರಾಯನ ಜೊತೆ ರೊಮ್ಯಾನ್ಸ್ ಮಾಡುವ ಪ್ರಯತ್ನ ಮಾಡುವುದನ್ನು ನೋಡಬಹುದು. ಸರ್ಕಸ್‌ನಲ್ಲಿ ಪ್ರದರ್ಶನ ಮಾಡುವ ಹುಡುಗಿಯ ಪಾತ್ರದಲ್ಲಿ ಕಿಯಾರಾ ನಟಿಸಿದ್ದಾರೆ. ಸರ್ಕಸ್‌ನಲ್ಲಿ ಎಲ್ಲರೂ ಆಕೆಯ ಎಂಟ್ರಿಗೆ ಕಾಯುತ್ತಿದ್ದರೆ ಅಲ್ಲಿಗೂ ಬರುವ ರಾಯ ಆಕೆಯನ್ನು ಕರೆದುಕೊಂಡು ಹೋಗಿ ರೊಮ್ಯಾನ್ಸ್ ಮಾಡುವುದನ್ನು ನೋಡಬಹುದು.
ಗೋವಾ ಹಾಗೂ ಮುಂಬೈ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ 'ತಬಾಹಿ' ಸಾಂಗ್ ಶೂಟ್ ಮಾಡಿದ್ದಾರೆ. ಕನ್ನಡದಲ್ಲಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಶಾಲ್ ಮಿಶ್ರಾ ಟ್ಯೂನ್ ಹಾಕಿ ಹಾಡು ಹಾಡಿದ್ದಾರೆ. ಆಗಸ್ಟ್ 26ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಇನ್ನುಳಿದ 4 ಸಾಂಗ್ಸ್ ಹಾಗೂ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ವೀಡಿಯೋ ಸಾಂಗ್ ಮೂಲಕ 'ಟಾಕ್ಸಿಕ್' ಕ್ರೇಜ್ ಹೆಚ್ಚಾಗಿದೆ.
ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಅದಕ್ಕೆ ತಕ್ಕಂತೆ ಬಹಳ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಿದ್ದಾರೆ.ಪ್ರತಿ ಫ್ರೇಮ್ ಕಣ್ಣಿಗೆ ಹಬ್ಬ ಎನ್ನುವಂತಿದೆ. ಸಖತ್ ಬಿಂದಾಸ್ ಆಗಿ ಸಾಂಗ್ ಮೂಡಿ ಬಂದಿದ್ದರೂ ಒಂದೇ ಒಂದು ಲಿಪ್ ಲಾಕ್ ದೃಶ್ಯವಿಲ್ಲ. ನಿಜಕ್ಕೂ ಅಂತಹ ದೃಶ್ಯಗಳು ಚಿತ್ರದಲ್ಲಿ ಇಲ್ವಾ? ಸಾಂಗ್‌ನಲ್ಲಿ ತೋರಿಸಿಲ್ವಾ ಎನ್ನುವ ಅನುಮಾನ ಮೂಡಿದೆ. ಅಭಿಮಾನಿಗಳಂತೂ ಸಾಂಗ್ ಎಂಜಾಯ್ ಮಾಡುತ್ತಿದ್ದಾರೆ. ಪಡವಾರಳ್ಳಿಯಿಂದ ಹಾಲಿವುಡ್‌ವರೆಗೆ ರಾಕಿಂಗ್ ಸ್ಟಾರ್ ಯಶ್ ಜರ್ನಿ ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಿಯಾರಾ ನಿಜಕ್ಕೂ ಸುಂದರವಾಗಿ ತೆರೆಮೇಲೆ ಕಾಣುತ್ತಿದ್ದಾರೆ. ಆಕೆಯ ಸೌಂದರ್ಯವನ್ನು ಸೊಗಸಾಗಿ ಸೆರೆಹಿಡಿಯಲಾಗಿದೆ.
ಇಡೀ 'ತಬಾಹಿ' ಸಾಂಗ್ ಹೈಲೆಟ್ ತಾರಾ ಸುತಾರಿಯಾ ಎಂಟ್ರಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಆಕೆ ರಾಯನ ಪ್ರೇಯಸಿಯಾಗಿ ನಟಿಸಿರುವುದು ಗೊತ್ತಾಗುತ್ತಿದೆ. 60-70ರ ದಶಕದ ಗ್ಯಾಂಗ್‌ಸ್ಟರ್ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಸಾಂಗ್ ಮೂಡಿ ಬಂದಿದೆ.
ಇನ್ನು ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಘ್ನೇಶ್ ಶಿವನ್, ಮಲಯಾಳಂನಲ್ಲಿ ರಫೀಕ್ ಅಹ್ಮದ್ ಹಾಗೂ ಹಿಂದಿಯಲ್ಲಿ ರಾಜ್‌ಶೇಖರ್ ಸಾಹಿತ್ಯ ಬರೆದಿದ್ದಾರೆ. ರಾಜೀವ್ ರವಿ ತಮ್ಮ ಕ್ಯಾಮರಾ ಕಣ್ಣಲ್ಲಿ ಸಾಂಗ್ ಸೆರೆ ಹಿಡಿದಿದ್ದಾರೆ. 'ಟಾಕ್ಸಿಕ್' ಸಿನಿಮಾ ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗಲಿದೆ. ಭಾರೀ ಬಾಕ್ಸಾಫೀಸ್ ಲೆಕ್ಕಾಚಾರ ನಡೀತಿದೆ.


Click it and Unblock the Notifications