ಯಶ್ 'ಟಾಕ್ಸಿಕ್' ಸಿನಿಮಾ ಪಾರ್ಟ್-2 ಕೂಡ ಬರುತ್ತಾ? ಟೀಸರ್‌ನಲ್ಲೇ ಸುಳಿವು ಕೊಟ್ಟಿದ್ದಾರಾ?

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಟಾಕ್ಸಿಕ್' ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಬಿಡುಗಡೆ ಆಗಿರುವ ಆಕ್ಷನ್ ಪ್ಯಾಕ್ಡ್ ಟೀಸರ್ ಟಾಕ್ ಆಫ್ ದ ಟೌನ್ ಆಗಿದೆ.

'ಟಾಕ್ಸಿಕ್' ಚಿತ್ರದಲ್ಲಿ ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತೆ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅದ್ವಾನಿ, ಹುಮಾ ಖುರೇಶಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಆದರೆ ಟೀಸರ್‌ನಲ್ಲಿ ಅವರ ದರ್ಶನ ಆಗಿಲ್ಲ. ಇದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಆಗ ಮತ್ತಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿರೀಕ್ಷಿಸಬಹುದು. ಅಂತಿಮವಾಗಿ ತೆರೆಮೇಲೆ ಮಾರ್ಚ್ 19ಕ್ಕೆ ಅಸಲಿ ಪಿಕ್ಚರ್ ನೋಡೋಕೆ ಸಿಗಲಿದೆ.

Toxic Sparks Sequel Buzz Will Yash s Pan-World Action Epic Unfold in Two Parts

'ಟಾಕ್ಸಿಕ್' ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಎಲ್ಲೆಲ್ಲೂ ಸೀಕ್ವೆಲ್ ಸಿನಿಮಾಗಳ ಆರ್ಭಟ ನಡೀತಿದೆ. 'ಬಾಹುಬಲಿ', 'ಕೆಜಿಎಫ್', 'ಪುಷ್ಪ', 'ಕಾಂತಾರ' ಚಿತ್ರಗಳನ್ನು ಎರಡು ಭಾಗಗಳಾಗಿ ಕಟ್ಟಿಕೊಟ್ಟು ಸಕ್ಸಸ್ ಕಂಡಿದ್ದರು. 'ಧುರಂಧರ್' ಚಿತ್ರದ 2ನೇ ಭಾಗ ಕೂಡ ಮಾರ್ಚ್ 19ಕ್ಕೆ ತೆರೆಗೆ ಬರುತ್ತಿರುವುದು ವಿಶೇಷ. ಮತ್ತಷ್ಟು ಸಿನಿಮಾಗಳ ಸೀಕ್ವೆಲ್ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. 'ಟಾಕ್ಸಿಕ್' ವಿಚಾರದಲ್ಲೂ ಇದೇ ಲೆಕ್ಕಾಚಾರ ಇದ್ಯಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಮೊದಲೇ ಘೋಷಿಸದೇ ಇದ್ದರೂ ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣ ಝಲಕ್ ಕೊಟ್ಟು ಪಾರ್ಟ್-2 ಅನೌನ್ಸ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಬಾಹುಬಲಿ, ಪುಷ್ಪ, ಕೆಜಿಎಫ್ ಸಿನಿಮಾ ಕಥೆಗಳು ದೊಡ್ಡದು. ಹಾಗಾಗಿ ಎರಡು ಭಾಗಗಳಾಗಿ ಕಟ್ಟಿಕೊಡುತ್ತಿರುವುದಾಗಿ ಮೊದಲೇ ಹೇಳಿದ್ದರು. ಆದರೆ ಕೆಲ ಸಿನಿಮಾಗಳಲ್ಲಿ ದಿಢೀರನೆ ಸರ್‌ಪ್ರೈಸ್ ಕೊಟ್ಟಿರುವ ಉದಾಹರಣೆಗಳಿವೆ. 'ಕೆಜಿಎಫ್' ಚಾಪ್ಟರ್‌-2ನಲ್ಲೇ ಕಥೆ ಮುಗಿತು ಎಂದುಕೊಂಡಿದ್ದವರಿಗೆ ಕೊನೆಯಲ್ಲಿ ಚಾಪ್ಟರ್-3 ಬಗ್ಗೆ ಸುಳಿವು ಕೊಟ್ಟು ಅಚ್ಚರಿ ಮೂಡಿಸಿದ್ದರು.

'ಪುಷ್ಪ'-2 ಕ್ಲೈಮ್ಯಾಕ್ಸ್ ಹಾಗೂ 'ಕಾಂತಾರ'-1 ಕ್ಲೈಮ್ಯಾಕ್ಸ್‌ನಲ್ಲಿ ಕೂಡ ಇಂಥದ್ದೇ ಸರ್‌ಪ್ರೈಸ್ ಪ್ರೇಕ್ಷಕರಿಗೆ ಎದುರಾಗಿತ್ತು. ಕೂಡಲೇ ಕಥೆಯನ್ನು ಮುಂದುವರೆಸದೇ ಇದ್ದರೂ ಮುಂದಿನ ದಿನಗಳಲ್ಲಿ ಅಂತಹದೊಂದು ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅದೇ ರೀತಿ 'ಟಾಕ್ಸಿಕ್' ಚಿತ್ರದ ಕೊನೆಗೆ ಟ್ವಿಸ್ಟ್ ಕೊಟ್ಟು ಸೀಕ್ವೆಲ್ ಬಗ್ಗೆ ಕುತೂಹಲ ಮೂಡಿಸಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಒಂದು ಚಿತ್ರಕ್ಕಾಗಿ ಒಂದು ಹೊಸ ಪ್ರಪಂಚವನ್ನು ಸೃಷ್ಟಿಸಿದಾಗ ಅದೇ ಪ್ರಪಂಚದಲ್ಲಿ ಮತ್ತಷ್ಟು ಕಥೆಗಳನ್ನು ಹೇಳಲು ಅವಕಾಶ ಇದ್ದಾಗ ಅದನ್ನು ಫಿಲ್ಮ್ ಮೇಕರ್ಸ್ ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಮಾಹಿಷ್ಮತಿ ಸಾಮ್ರಾಜ್ಯದಲ್ಲಿ ಪಾರ್ಟ್-1 ಹಾಗೂ ಪಾರ್ಟ್‌-2 ಅದೇ ರೀತಿ ಕೆಜಿಎಫ್ ಚಿನ್ನದ ಗಣಿಯಲ್ಲಿ ಚಾಪ್ಟರ್‌-1 ಹಾಗೂ ಚಾಪ್ಟರ್‌-2, 'ಕಾಂತಾರ' ಹಾಗೂ 'ಪುಷ್ಪ' ಚಿತ್ರಗಳಲ್ಲಿ ಇದೇ ಐಡಿಯಾ ವರ್ಲ್‌ಔಟ್ ಆಗಿತ್ತು. ರಾಯನ 'ಟಾಕ್ಸಿಕ್' ಪ್ರಪಂಚದಿಂದ ಮತ್ತಷ್ಟು ಕಥೆಗಳು ಬಂದರೂ ಬರಬಹುದು.

ಟೀಸರ್ ಕೊನೆಯಲ್ಲಿ ಟಿಕೆಟ್ ಎಂಬ ಪಾತ್ರವನ್ನು ಪರಿಚಯಿಸಲಾಗಿದೆ. ಇವನು ರಾಯನ ಮಗ ಆಗಿರಬಹುದು. ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಆತನ ಆರ್ಭಟ ತೋರಿಸಿ ಮುಂದೆ ಪಾರ್ಟ್-2 ಬಗ್ಗೆ ಕುತೂಹಲ ಹೆಚ್ಚಿಸಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಅದೇ ನಿಜವಾದರೆ ಸಿನಿರಸಿಕರಿಗೆ ಹಬ್ಬವೇ ಸರಿ. ನೂರಾರು ಕೋಟಿ ಸುರಿದು 'ಟಾಕ್ಸಿಕ್' ಲೋಕ ಸೃಷ್ಟಿಸಲಾಗ್ತಿದೆ. ಅಲ್ಲೇ ಮತ್ತಷ್ಟು ಕಥೆ ಹೇಳುವ ಸಾಧ್ಯತೆ ಇದ್ರೆ ಚಿತ್ರತಂಡ ಅಂತಹ ಸುವರ್ಣಾವಕಾಶ ಬಿಡೋದುಂಟೆ.

ಒಂದೇ ಕಥೆಯನ್ನು ಜಗ್ಗಾಡುವುದು, ಒಂದು ಸಿನಿಮಾ ಹಿಟ್ ಆಯ್ತು ಅಂತ ಸೀಕ್ವೆಲ್ ಮಾಡಿ ಬಲವಂತವಾಗಿ ಪ್ರೇಕ್ಷಕರನ್ನು ಮೆಚ್ಚಿಸುವ ಪ್ರಯತ್ನ ಸರಿಯಲ್ಲ ಎನ್ನುವ ವಾದ ಕೂಡ ಇದೆ. ಕೆಲ ಸೀಕ್ವೆಲ್‌ಗಳು ಇದೇ ಕಾರಣಕ್ಕೆ ಕೈಕೊಟ್ಟಿವೆ. ಇನ್ನು ಕೆಲ ಸಿನಿಮಾ ಪಾರ್ಟ್‌-2 ಮಾಡಲೇಬೇಡಿ ಎಂದು ಸಿನಿರಸಿಕರು ಮನವಿ ಮಾಡುತ್ತಾರೆ. ಯಶ್ 'ಕೆಜಿಎಫ್'-3 ಕೂಡ ಮಾಡಬೇಕಿದೆ. ಹಾಗಾಗಿ 'ಟಾಕ್ಸಿಕ್' ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳಿ ಮುಗಿಸಿ ಬಳಿಕ ಬೇರೆ ಸಿನಿಮಾಗಳಲ್ಲಿ ನಟಿಸೋ ಸಾಧ್ಯತೆ ಕೂಡ ಇದೆ. ಈ ಎಲ್ಲಾ ಊಹಾಪೋಹಕ್ಕೆ ಮಾರ್ಚ್ 19ರಂದು ತೆರೆ ಬೀಳಲಿದೆ.

More from Filmibeat

Read more about: yash toxic rukmini vasanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X