"ಸಿನ್ಮಾಗೂ ರಿಯಲ್ ಲೈಫ್‌ಗೂ ಕಂಫೇರ್ ಬೇಡ"; 'ಟಾಕ್ಸಿಕ್' ಟೀಸರ್‌ ಬಗ್ಗೆ ಹೆಣ್ಮಕ್ಕಳ ಕಾಮೆಂಟ್ಸ್ ವೈರಲ್

ಯಶ್ ನಟನೆಯ 'ಟಾಕ್ಸಿಕ್' ಟೀಸರ್ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಹಸಿಬಿಸಿ ದೃಶ್ಯದ ಬಗ್ಗೆ ಭಾರೀ ಟೀಕೆ ಶುರುವಾಗಿದೆ. ಅದನ್ನು ತೆಗೆದು ಹಾಕಬೇಕು ಎಂದು AAP ಪಕ್ಷದಿಂದ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಆದರೆ ಯಶ್ ಅಭಿಮಾನಿಗಳು 'ಟಾಕ್ಸಿಕ್' ಟೀಸರ್ ನೋಡಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಯಶ್ ಚಿತ್ರಕ್ಕೆ ಇಂತಹ ದೃಶ್ಯ ಬೇಕಿರಲಿಲ್ಲ, ಹಾಲಿವುಡ್ ರೇಂಜ್ ಸಿನಿಮಾ ಎನ್ನುವ ಕಾರಣಕ್ಕೆ ಹಸಿಬಿಸಿ ದೃಶ್ಯ ಸೇರಿಸುವುದು ಸರಿಯಲ್ಲ. ಒಂದು ವೇಳೆ ಸಿನಿಮಾದಲ್ಲಿ ಅಂತಹ ದೃಶ್ಯ ಇದ್ದರೂ ಟೀಸರ್‌ನಲ್ಲಿ ಹಾಕಿ ಪ್ರಚಾರ ಪಡೆಯುವುದು ಬೇಕಿರಲಿಲ್ಲ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸಾಕಷ್ಟು ಜನ ಹೆಣ್ಣುಮಕ್ಕಳು 'ಟಾಕ್ಸಿಕ್' ಟೀಸರ್ ಮೆಚ್ಚಿ ಮಾತನಾಡಿದ್ದಾರೆ. ಸಿನಿಮಾ ಬರುವವರೆಗೂ ಕಾಯಿರಿ, ಈಗ್ಲೇ ಯಾವುದೇ ನಿರ್ಧಾರಕ್ಕೆ ಬರಬೇಡಿ ಎಂದು ತಿರುಗೇಟು ನೀಡುತ್ತಿದ್ದಾರೆ.

Toxic Teaser Controversy Yash lady Fans Defend Viral Scene as Debate Heats Up on Social Media

ಹೀಗೆ 'ಟಾಕ್ಸಿಕ್' ಟೀಸರ್ ಬಗ್ಗೆ ಹೆಣ್ಣು ಮಕ್ಕಳ ಮಾತುಗಳನ್ನು ಎಡಿಟ್ ಮಾಡಿರುವ ವೀಡಿಯೋ ವೈರಲ್ ಆಗ್ತಿದೆ. ಈ ವೀಡಿಯೋ 'ಟಾಕ್ಸಿಕ್' ಟೀಸರ್ ಬಗ್ಗೆ ಟಾಕ್ಸಿಕ್ ಆಗಿ ಮಾತನಾಡಿರುವವರಿಗೆ ಎಂದು ಯಶ್ ಮಹಿಳಾ ಅಭಿಮಾನಿಯೊಬ್ಬರು ಹೇಳಿದ್ದಾರೆ. "ಸಿನ್ಮಾಗೂ ರಿಯಲ್ ಲೈಫ್‌ಗೂ ಕಂಫೇರ್ ಮಾಡ್ತೀರಾ, ಎಲ್ಲಾ ಚಿತ್ರವನ್ನು ಕೆಜಿಎಫ್ ರೀತಿ ತೆಗೆಯೋಕೆ ಆಗಲ್ಲ" ಎಂದು ಮತ್ತೊಬ್ಬರು ಹೇಳಿದ್ದಾರೆ.

"ಯಶ್ ಯಾರು, ಕರ್ನಾಟಕದವರು ಎಂದು ಇಡೀ ಪ್ರಪಂಚ ತಿರುಗಿ ನೋಡುವಂತೆ ಮಾಡಿದ್ದಾರೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಮಾರ್ಚ್ 19ರವರೆಗೆ ಕಾಯೋಣ, ಸಿನಿಮಾ ರಿಲೀಸ್ ಬಳಿಕ ಮಾತಾಡೋಣ" ಎನ್ನುವುದು ಮತ್ತೊಬ್ಬ ಮಹಿಳಾ ಮಣಿಯ ಅಭಿಪ್ರಾಯ. "ಹಾಲಿವುಡ್‌ ಸಿನಿಮಾಗಳಿಗೆ ತಕ್ಕಂತೆ ಏನೋ ಮಾಡಿದ್ದಾರೆ, ಇಡೀ ಸಿನಿಮಾ ಅದೇ ದೃಶ್ಯ ಇರಲ್ಲ ಅಲ್ವಾ?" ಎನ್ನುವುದು ಮತ್ತೊಬ್ಬರ ಪ್ರಶ್ನೆ.

"ಯಶ್ ಹಾಲಿವುಡ್ ಹೀರೊ ಎಂದುಕೊಂಡು ನೋಡಿದ್ರೆ, ಯಾವುದು ತಪ್ಪು ಅನ್ನಿಸಲ್ಲ" ಎಂದು ಮತ್ತೊಬ್ಬರು ವೀಡಿಯೋ ಮಾಡಿ ಪೋಸ್ಟ್ ಮಾಡಿರುವುದನ್ನು ನೋಡಬಹುದು. ಒಟ್ಟಾರೆ 'ಟಾಕ್ಸಿಕ್' ಟೀಸರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಮುಂದುವರೆದಿದೆ. ಮತ್ತೊಂದು ಕಡೆ ಯೂಟ್ಯೂಬ್‌ನಲ್ಲಿ ಕೋಟಿ ಕೋಟಿ ವೀವ್ಸ್ ಸಾಧಿಸಿ ಟೀಸರ್ ಸದ್ದು ಮಾಡ್ತಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಈಗಾಗಲೇ ವಕೀಲರೊಬ್ಬರು 'ಟಾಕ್ಸಿಕ್' ಸಿನಿಮಾ ಟೀಸರ್ ಬಗ್ಗೆ ಬೇಸರ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಸೆನ್ಸಾರ್ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಲೋಹಿತ್ ಕುಮಾರ್ ಆಗ್ರಹಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಅಂತಹ ದೃಶ್ಯ ಬಳಸಿಕೊಂಡಿರುವುದಕ್ಕೆ ಹಿರಿಯ ನಟ, AAP ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದ್ದಾರೆ. ಇಂತಹ ಸನ್ನಿವೇಶಗಳನ್ನು ಬಳಸುವಾಗ ಅದನ್ನು ಸೂಕ್ಷ್ಮವಾಗಿ ತೋರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೀತು ಮೋಹನ್ ದಾಸ್ 'ಟಾಕ್ಸಿಕ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಮಾರ್ಚ್ 19ರಂದು ಬಾಲಿವುಡ್ ಸಿನಿಮಾ 'ಧುರಂಧರ್'-2 ಎದುರು 'ಟಾಕ್ಸಿಕ್' ತೆರೆಗೆ ಬರಲಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅದ್ವಾನಿ ಚಿತ್ರದಲ್ಲಿ ನಟಿಸಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.

More from Filmibeat

Read more about: yash toxic fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X