ಅದೊಂದು ವಿಚಾರದಲ್ಲಿ ನಿಜಕ್ಕೂ ಮೈಲಿ ದೂರ ಉಳಿದುಬಿಡ್ತಾ ಯಶ್ 'ಟಾಕ್ಸಿಕ್' ಟೀಸರ್?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟೀಸರ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಚರ್ಚೆ ಹುಟ್ಟಾಕ್ಕಿದೆ. ಹಾಲಿವುಡ್ ರೇಂಜ್ ಮೇಕಿಂಗ್, ಯಶ್ ನಾನಾ ಅವತಾರಗಳನ್ನು ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಆಕ್ಷನ್ ಪ್ಯಾಕ್ಡ್ ಝಲಕ್ ನೋಡಿ ದಂಗಾಗಿದ್ದಾರೆ. ಮಾರ್ಚ್ 19ಕ್ಕೆ 'ಧುರಂಧರ್' ಎದುರು ರಾಯ ಗೆಲ್ಲೋದು ಗ್ಯಾರಂಟಿ. ಯುದ್ಧ ಒನ್ ಸೈಡ್ ಆಗಿಬಿಡುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಪದೇ ಪದೆ ಟೀಸರ್ ನೋಡಿ ಸಾಕಷ್ಟು ವಿಚಾರಗಳನ್ನು ಊಹಿಸುವ ಪ್ರಯತ್ನ ಮಾಡ್ತಿದ್ದಾರೆ. ಅದರಲ್ಲೂ ಟೀಸರ್ ಕೊನೆಯಲ್ಲಿ ಕ್ಲೀನ್‌ ಶೇವ್‌ನಲ್ಲಿ ಸಿಕ್ಕಾಪಟ್ಟೆ ಯಂಗ್ ಅವತಾರದಲ್ಲಿ ಯಶ್ ಆರ್ಭಟ ನೋಡಿ ಫಿದಾ ಆಗಿದ್ದಾರೆ. ನಿಜಕ್ಕೂ ಇದು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ರೇಂಜ್ ಸಿನಿಮಾ. ಇಷ್ಟು ಅದ್ಭುತವಾಗಿ ಸಿನಿಮಾ ಮೂಡಿ ಬಂದಿರುವ ಕಾರಣಕ್ಕೆ ಯಶ್ ಬಹಳ ಭರವಸೆಯಿಂದ ಇದ್ದಾರೆ. ಯಾವುದೇ ಬಾಕ್ಸಾಫೀಸ್ ಕ್ಲ್ಯಾಶ್‌ಗೂ ಹೆದರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಎಲ್ಲಾ ಸರಿ ಆದರೆ 'ಕೆಜಿಎಫ್-2' ಟೀಸರ್ ಮುಂದೆ 'ಟಾಕ್ಸಿಕ್' ಟೀಸರ್ ಕೂಡ ಠುಸ್ ಆಗಿಬಿಟ್ಟಿದೆ.

Toxic Teaser Storm Yash s New Avatar Sparks Buzz But Can It Match the Impact of KGF Chapter 2 Teaser

5 ವರ್ಷಗಳ ಹಿಂದೆ ಬಂದಿದ್ದ 'ಕೆಜಿಎಫ್-2' ಟೀಸರ್ ಇನ್ನು ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಆ ಬಳಿಕ ಸಾಕಷ್ಟು ದೊಡ್ಡ ಸಿನಿಮಾಗಳ ಟೀಸರ್ ಬಂದರೂ ಯಾವುದೂ ಕೂಡ ರಾಕಿಭಾಯ್ ಆರ್ಭಟದ ಹತ್ತಿರಕ್ಕೂ ಹೋಗಲಿಲ್ಲ. ಆ ದಾಖಲೆ ಮುರಿಯಲು ಆ ಇಂಪ್ಯಾಕ್ಟ್ ಮೀರಿಸಲು ಮತ್ತೆ ಯಶ್ ಬರಬೇಕು. ಯಶ್ ಸಿನಿಮಾ ಟೀಸರ್ ರಿಲೀಸ್ ಆಗಬೇಕು ಎಂದು ಕೆಲವರು ಹೇಳುತ್ತಿದ್ದರು. ಕೊನೆಗೂ 'ಟಾಕ್ಸಿಕ್' ಸಿನಿಮಾ ಟೀಸರ್ ಬಂದಿದೆ. ಅಭಿಮಾನಿಗಳ ಮನಗೆದ್ದಿದೆ. ಆದರೆ 'ಕೆಜಿಎಫ್-2' ಟೀಸರ್ ಮುಂದೆ ಡಲ್ಲಾಗಿದೆ.

ಯೂಟ್ಯೂಬ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಎಲ್ಲಾ ಕಡೆ 'ಟಾಕ್ಸಿಕ್' ಟೀಸರ್ ಸದ್ದು ಮಾಡ್ತಿದೆ. 24 ಗಂಟೆಗಳಲ್ಲಿ ದಾಖಲೆ ಮಟ್ಟದ ವೀವ್ಸ್, ಲೈಕ್ಸ್ ಗಿಟ್ಟಿಸಿದೆ. ಆದರೂ ಅಂದು ದೊಡ್ಡಮ್ಮ ಹಿಡಿದು ಅಬ್ಬರಿಸಿದ್ದ ರಾಕಿಭಾಯ್ ಝಲಕ್ ಮುಂದೆ ಹಿಂದೆ ಉಳಿದಿದೆ. 'ಕೆಜಿಎಫ್-2' ಹಾಗೂ 'ಟಾಕ್ಸಿಕ್' ಎರಡೂ ಬೇರೆ ಬೇರೆ ಸಿನಿಮಾಗಳು. ಎರಡರ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ. ಆದರೆ ಟೀಸರ್ ಕಟ್, ಆ ಎಫೆಕ್ಟ್, ಬಿಜಿಎಂ, ಯಶ್ ಪರ್ಫಾರ್ಮನ್ಸ್ ವಿಚಾರದಲ್ಲಿ 'ಕೆಜಿಎಫ್- 2' ಬಹಳ ಎತ್ತರಕ್ಕೆ ನಿಲ್ಲುತ್ತದೆ. ಈ ಮಾತನ್ನು ಯಶ್ ಅಭಿಮಾನಿಗಳು ಒಪ್ಪಿಕೊಳ್ಳುತ್ತಾರೆ. ರಾಕಿಭಾಯ್ ಆಗಿ ಯಶ್ ಕ್ರಿಯೇಟ್ ಮಾಡಿದ ಬೆಂಚ್‌ಮಾರ್ಕ್ ಅನ್ನು ಅವರಿಂದಲೇ ಮೀರಿಸೋದಕ್ಕೆ ಕಷ್ಟವಾಗುತ್ತಿದ್ಯಾ ಎನಿಸದೇ ಇರದು.

Toxic Teaser Storm Yash s New Avatar Sparks Buzz But Can It Match the Impact of KGF Chapter 2 Teaser

ಪ್ರಶಾಂತ್ ನೀಲ್ ವಿಷನ್, ಯಶ್ ಆರ್ಭಟದ 'ಕೆಜಿಎಫ್-2' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಅದಕ್ಕೆಲ್ಲಾ ಬುನಾದಿ ಹಾಕಿದ್ದೇ ಆ ಟೀಸರ್. ಯಶ್ ಹುಟ್ಟುಹಬ್ಬದ ದಿನ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಕೆಲವೇ ಗಂಟೆಗಳ ಮುನ್ನ ಲೀಕ್ ಆಗಿ ಗೊಂದಲ ಏರ್ಪಟ್ಟಿತ್ತು. ಹಾಗಾಗಿ ಹೇಳಿದ್ದಕ್ಕಿಂತ ಬಹಳ ಬೇಗ ಟೀಸರ್ ಹೊರಬಂದಿತ್ತು. ಸೂಪರ್ ಹಿಟ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಒಟ್ಟಾರೆ 'ಕೆಜಿಎಫ್'- 2 ಟೀಸರ್ ಆರ್ಭಟ ಮರೆಸೋಕೆ 'ಕೆಜಿಎಫ್- 3' ಟೀಸರ್ ಬರಬೇಕು ಅನ್ನಿಸುತ್ತದೆ.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. 'ಕೆಜಿಎಫ್'-2 ಬಳಿಕ ಬಿಡುಗಡೆ ಆಗುತ್ತಿರುವ ಯಶ್ ಸಿನಿಮಾ ಇದು. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಭಾರೀ ಕಲೆಕ್ಷನ್ ಲೆಕ್ಕಾಚಾರ ಶುರುವಾಗಿದೆ. 1000 ಕೋಟಿ ರೂ.ಗೂ ಹೆಚ್ಚು ಪ್ರೀ ರಿಲೀಸ್ ಬ್ಯುಸಿನೆಸ್ ಆಗುವ ನಿರೀಕ್ಷೆಯಿದೆ. ಇಂಗ್ಲೀಷ್ ಭಾಷೆಗೂ ಡಬ್ ಆಗಿ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡಿದ್ದಾರೆ.

More from Filmibeat

Read more about: toxic yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X