'ಧುರಂಧರ್'-2 ಚಿತ್ರಕ್ಕೆ ಟಕ್ಕರ್ ಕೊಡಲು ಮುಹೂರ್ತ ಫಿಕ್ಸ್ ಮಾಡಿದ ಯಶ್ 'ಟಾಕ್ಸಿಕ್' ಟೀಮ್
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರಗಪ್ಪಳಿಸುವುದು ಪಕ್ಕಾ ಆಗಿದೆ. ನಿಧಾನವಾಗಿ ಸಿನಿಮಾ ಪ್ರಮೋಷನ್ ಶುರುವಾಗ್ತಿದೆ. ಇಷ್ಟು ದಿನ ಅಪ್‌ಡೇಟ್ ಕೇಳುತ್ತಿದ್ದವರಿಗೆ ಭಾರೀ ಸರ್‌ಪ್ರೈಸ್ ಕಾಯ್ತಿದೆ. ಕೆಲವೇ ಗಂಟೆಗಳಲ್ಲಿ ಅದು ರಿವೀಲ್ ಆಗಲಿದೆ.
ಮಾರ್ಚ್ 19ಕ್ಕೆ 'ಟಾಕ್ಸಿಕ್' ಜೊತೆಗೆ 'ಧುರಂಧರ್'-2 ಸಿನಿಮಾ ಕೂಡ ತೆರೆಗಪ್ಪಳಿಸುತ್ತಿದೆ. ಎರಡೂ ಚಿತ್ರಗಳ ನಡುವೆ ಭಾರೀ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ. ಎರಡೂ ಚಿತ್ರಗಳ ಹೈಪ್ ಕ್ರಿಯೇಟ್ ಮಾಡ್ತಿದ್ದು ಸಹಜವಾಗಿಯೇ ಕದನ ಕುತೂಹಲ ಮೂಡಿದೆ. ಇತ್ತೀಚೆಗೆ 'ಧುರಂಧರ್'-2 ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಇದೀಗ 'ಟಾಕ್ಸಿಕ್' ಚಿತ್ರದ ಟೀಸರ್ ಬಗ್ಗೆ ಅಪ್‌ಡೇಟ್ ಬಂದಿದೆ.

ಸಿನಿಮಾ ಬಿಡುಗಡೆಗೆ ಇನ್ನು ಒಂದು ತಿಂಗಳು ಬಾಕಿಯಿದೆ. ಚಿತ್ರದಲ್ಲಿ ಹಾಡುಗಳ ಸಂಖ್ಯೆ ಕಮ್ಮಿಯಿದೆ. ಹಾಗಾಗಿ ಮತ್ತೊಂದು ಟೀಸರ್ ಬಿಟ್ಟು ಸದ್ದು ಮಾಡಲು ಚಿತ್ರತಂಡ ಮನಸ್ಸು ಮಾಡಿದೆ. ಕಳೆದೆರಡು ವರ್ಷಗಳಲ್ಲಿ ಯಶ್ ಹುಟ್ಟುಹಬ್ಬದ ವಿಶೇಷವಾಗಿ 'ಟಾಕ್ಸಿಕ್' ಚಿತ್ರದ 2 ಸಣ್ಣ ಗ್ಲಿಂಪ್ಸ್ ಬಂದು ಹುಬ್ಬೇರಿಸಿತ್ತು. ಆದರೆ ಕಥೆ, ಪಾತ್ರಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಟೀಸರ್‌ನಲ್ಲಿ ಅದಕ್ಕೆಲ್ಲಾ ಬ್ರೇಕ್ ಬೀಳಲಿದೆ. ಕಥೆ ಏನಿರಬಹುದು? ಯಾವ ರೇಂಜ್‌ನಲ್ಲಿ ಸಿನಿಮಾ ಮೂಡಿಬರ್ತಿದೆ ಎನ್ನುವ ಬಗ್ಗೆಯೂ ಚಿತ್ರಣ ಸಿಗಲಿದೆ.
ನಾಳೆ(ಫೆಬ್ರವರಿ 20) ಬೆಳಗ್ಗೆ 9.35ಕ್ಕೆ 'ಟಾಕ್ಸಿಕ್' ಟೀಸರ್ ಬಿಡುಗಡೆ ಎಂದು ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡಿದೆ. ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಎಂದು ಮತ್ತೊಮ್ಮೆ ಖಚಿತಪಡಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರಕಥೆಯನ್ನು ತಿದ್ದಿ ತೀಡಿದ್ದಾರೆ. ಗೋವಾ ಹಿನ್ನೆಲೆಯಲ್ಲಿ ಈ ಗ್ಯಾಂಗ್‌ಸ್ಟರ್ ಸಿನಿಮಾ ಕಥೆ ಸಾಗಲಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ 'ಟಾಕ್ಸಿಕ್' ಚಿತ್ರಕ್ಕಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಬಿಡುಗಡೆ ಮಾಡಲಾಗ್ತಿದೆ. ಹಿಂದೆ ಬಂದಿದ್ದ 2 ಗ್ಲಿಂಪ್ಸ್ ರೀತಿ ಟೀಸರ್ ರಿಲೀಸ್ ಮಾಡಬೇಡಿ. ಚಿತ್ರದಲ್ಲಿರುವ ಮುಖ್ಯವಾದ ಸನ್ನಿವೇಶಗಳನ್ನು ಮಿಕ್ಸ್ ಮಾಡಿ ಟೀಸರ್ ಕಟ್ ಮಾಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ಧುರಂಧರ್'-2 ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು 'ಟಾಕ್ಸಿಕ್' ಟೀಸರ್ ಜೊತೆ ಹೋಲಿಸಿದ್ದರು. ಟೀಸರ್ ಹಾಗೂ ಗ್ಲಿಂಪ್ಸ್‌ಗೆ ವ್ಯತ್ಯಾಸ ಇದೆ ಎಂದು ಕಾಮೆಂಟ್ ಮಾಡಿದವರು ಇದ್ದರು. ಅಂತಹವರಿಗೆ ಟೀಸರ್ ಮೂಲಕವೇ 'ಟಾಕ್ಸಿಕ್' ಟೀಂ ಉತ್ತರ ಕೊಡಲು ಸಜ್ಜಾಗಿದೆ.
ರಾಯನ ಪಾತ್ರ ಪರಿಚಯದ ಗ್ಲಿಂಪ್ಸ್‌ನಲ್ಲಿದ್ದ ಹಸಿಬಿಸಿ ದೃಶ್ಯದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ವಿವಾದ ಸೃಷ್ಟಿಯಾಗಿತ್ತು. ಅಂತಹ ಸನ್ನಿವೇಶಗಳು ಇಲ್ಲದೇ ಒಳ್ಳೆ ಟೀಸರ್ ಬಿಡಿ ಎಂದು ಕೇಳುವವರು ಇದ್ದಾರೆ. ಈಗಾಗಲೇ ಭಾರೀ ಮೊತ್ತಕ್ಕೆ ಚಿತ್ರದ ರಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಗಿದೆ. ಓಟಿಟಿ, ಸ್ಯಾಟಲೈಟ್ ರೈಟ್ಸ್‌ಗೂ ಭಾರೀ ಡಿಮ್ಯಾಂಡ್ ಶುರುವಾಗಿದೆ. ಸಿನಿಮಾ 1000 ಕೋಟಿ ರೂ. ಪ್ರೀ-ರಿಲೀಸ್ ಬ್ಯುಸಿನೆಸ್ ಮಾಡುವ ಲೆಕ್ಕಾಚಾರ ನಡೀತಿದೆ.
ಒಂದು ತಿಂಗಳು ಬಾಕಿ ಇರುವಂತೆ ದೊಡ್ಡ ಸಿನಿಮಾಗಳ ಟ್ರೈಲರ್ ರಿಲೀಸ್ ಮಾಡಿ ಪ್ರಚಾರ ಆರಂಭಿಸುತ್ತಾರೆ. ಆದರೆ 'ಟಾಕ್ಸಿಕ್' ತಂಡ ಮಾತ್ರ ಟೀಸರ್ ಬಿಡುಗಡೆಗೆ ಮುಂದಾಗಿದೆ. ಹಾಗಿದ್ದರೆ ಟ್ರೈಲರ್ ಯಾವಾಗ ಬರುತ್ತದೆ ಎನ್ನುವ ಕುತೂಹಲ ಕೆಲವರನ್ನು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications











