'ಟಾಕ್ಸಿಕ್' ಚಿತ್ರದಿಂದ ಹೊಸ ಅಪ್‌ಡೇಟ್; ಮಹಿಳಾ ಪಾತ್ರಗಳ ಪರಿಚಯಕ್ಕೆ ಸ್ಪೆಷಲ್ ಟೀಸರ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ 58 ದಿನ ಬಾಕಿಯಿದೆ. ಬೇಗ ಪ್ರಚಾರ ಆರಂಭಿಸಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬೇಡಿಕೆ ಇಟ್ಟಿದ್ದಾರೆ. ಚಿತ್ರತಂಡ ಮಾತ್ರ ಸೈಲೆಂಟ್ ಆಗಿದೆ. ಇದೀಗ ಹೊಸ ಅಪ್‌ಡೇಟ್ ಕೊಡಲು ಸಿದ್ಧತೆ ನಡೀತಿದೆ. ಮಹಿಳಾ ಪಾತ್ರಗಳ ಸುತ್ತಾ ಕ್ರೇಜಿ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ ಎನ್ನಲಾಗ್ತಿದೆ.

ಕೆಆರ್‌ಜಿ ಸ್ಟುಡಿಯೋಸ್ ಕಾರ್ತಿಕ್ ಗೌಡ ಕೂಡ 'ಟಾಕ್ಸಿಕ್' ಚಿತ್ರತಂಡ ಜೊತೆ ಕೈಜೋಡಿಸಿದ್ದಾರೆ. ಸಿನಿಮಾ ಪ್ರಮೋಷನ್ಸ್, ಬ್ಯುಸಿನೆಸ್‌‌ ಪ್ಲ್ಯಾನ್‌ಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಸದ್ಯ ಕಾರ್ತಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಸ್ಟೋರಿ ಗಮನ ಸೆಳೆಯುತ್ತಿದೆ. ಚಿತ್ರದ ಬಗ್ಗೆ ದೊಡ್ಡ ಅಪ್‌ಡೇಟ್ ಬಗ್ಗೆ ಸುಳಿವು ಸಿಕ್ತಿದೆ. "Where are the ladies Yash" ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಶೀಘ್ರದಲ್ಲೇ ಚಿತ್ರದ ಮತ್ತೊಂದು ಟೀಸರ್ ಬಿಡುಗಡೆ ಆಗುತ್ತದೆ ಎಂದು ನಿರೀಕ್ಷಿಸಲಾಗ್ತಿದೆ.

Toxic Teaser Update Soon KRG Studios Karthik Gowda Drops Major Hint for Yash Fans

'ಟಾಕ್ಸಿಕ್' ಚಿತ್ರದಲ್ಲಿ ನಯನತಾರಾ(ಗಂಗಾ), ಹುಮಾ ಖುರೇಶಿ(ಎಲಿಜಬೆತ್), ಕಿಯಾರಾ ಅದ್ವಾನಿ(ನಡಿಯಾ), ರುಕ್ಮಿಣಿ ವಸಂತ್(ಮೆಲ್ಲಿಸ್ಸಾ) ಹಾಗೂ ತಾರಾ ಸುತಾರಿಯಾ(ರೆಬೆಕಾ) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಅವರ ಲುಕ್ ಕೂಡ ರಿವೀಲ್ ಆಗಿದೆ. ಆದರೆ ಪಾತ್ರಗಳು ಏನೇನು? ಕಥೆಯಲ್ಲಿ ಮಹತ್ವ ಏನು ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಮಹಿಳಾ ಪಾತ್ರಗಳನ್ನು ಹೈಲೆಟ್ ಮಾಡಿ ಒಂದು ಟೀಸರ್ ಬಿಡುವ ಲೆಕ್ಕಾಚಾರ ಶುರುವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ 2 ತಿಂಗಳು ಕಾಯಬೇಕು. ಅಲ್ಲಿಯವರೆಗೆ ಹವಾ ಕಮ್ಮಿ ಆಗದಂತೆ ಸಣ್ಣ ಸಣ್ಣ ಸ್ಯಾಂಪಲ್ ಬಿಟ್ಟು ಕ್ರೇಜ್ ಉಳಿಸಿಕೊಳ್ಳಬೇಕಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ತಮ್ಮ ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ಚಿತ್ರದ ಡಬ್ಬಿಂಗ್ ಕೆಲಸಗಳು ನಡೀತಿದೆ. ಇತ್ತೀಚೆಗೆ ಕಿಯಾರಾ ತಮ್ಮ ಪಾತ್ರಕ್ಕೆ ವಾಯ್ಸ್ ಡಬ್ ಮಾಡಿದ್ದಾರೆ ಎಂದು ಗುಲ್ಲಾಗಿತ್ತು. ಅಂದಹಾಗೆ ಹಾಲಿವುಡ್ ಪ್ರೇಕ್ಷಕರನ್ನು ಕೂಡ ಗಮನದಲ್ಲಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗ್ತಿದೆ. ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿದ್ದಾರೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರಲಿದೆ.

Toxic Teaser Update Soon KRG Studios Karthik Gowda Drops Major Hint for Yash Fans

ಈಗಾಗಲೇ ಚಿತ್ರದ ಎರಡು ಟೀಸರ್ ಹಾಗೂ ಒಂದು ಆಡಿಯೋ ಸಾಂಗ್ ಬಂದಿದೆ. 'ತಬಾಹಿ' ವೀಡಿಯೋ ಸಾಂಗ್ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕೂ ಮುನ್ನ ಮತ್ತೊಂದು ಟೀಸರ್ ಬರಬಹುದು ಎಂದು ನಿರೀಕ್ಷಿಸಲಾಗ್ತಿದೆ. ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ನಾಯಕಿಯಾಗಿ ಕಿಯಾರಾ ಸಾಥ್ ಕೊಟ್ಟಿದ್ದಾರೆ. ಆಕೆ ಚಿತ್ರದಲ್ಲಿ ಕಣ್ಣು ಕಾಣದ ವಿಶೇಷ ಚೇತನ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಇನ್ನುಳಿದಂತೆ ಹುಮಾ ಖುರೇಶಿ ಹಾಗೂ ತಾರಾ ಸುತಾರಿಯಾ ನೆಗೆಟಿವ್ ರೋಲ್‌ಗಳಲ್ಲಿ ನಟಿಸಿದ್ದಾರೆ ಎಂದು ಕೆಲವರು ಅಂದುಕೊಂಡಿದ್ದಾರೆ.

ಯಶ್ ಚಿತ್ರದಲ್ಲಿ ತಂದೆ, ಮಗನಾಗಿ ದ್ವಿಪಾತ್ರದಲ್ಲಿ ನಟಿಸಿರುವುದು ವಿಶೇಷ. ರಾಯ ಎಂಬ ಖಡಕ್ ಗ್ಯಾಂಗ್‌ಸ್ಟರ್ ಅವತಾರದಲ್ಲಿ ರಾಕಿಂಗ್ ಸ್ಟಾರ್ ಅಬ್ಬರಿಸೋಕೆ ಬರ್ತಿದ್ದಾರೆ. ತಂದೆಗೆ ಸವಾಲು ಹಾಕುವ ಕಿಲಾಡಿ ಮಗ ಟಿಕೆಟ್ ಪಾತ್ರದಲ್ಲೂ ಯಶ್ ಮಿಂಚಿದ್ದಾರೆ. ಗಡ್ಡಕ್ಕೆ ಕತ್ತರಿ ಹಾಕಿ ಕ್ಲೀನ್ ಶೇವ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಗೌಡ ಮಾಡಿರುವ ಪೋಸ್ಟ್ ಅರ್ಥ ಏನು? 'ಟಾಕ್ಸಿಕ್' ಚಿತ್ರದ ಮಹಿಳಾ ಪಾತ್ರಗಳ ಸ್ಪೆಷಲ್ ಝಲಕ್ ಹೊರ ಬರುತ್ತಾ ಕಾದು ನೋಡಬೇಕಿದೆ.

Read more about: yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X