ರಾಕಿಂಗ್ ಸ್ಟಾರ್ ಯಶ್ ಮನೆ ಕಾಂಪೌಂಡ್ ಗೆ ಟ್ರ್ಯಾಕ್ಟರ್ ಡಿಕ್ಕಿ
ನಟ ರಾಕಿಂಗ್ ಸ್ಟಾರ್ ಯಶ್ ಮನೆಗೆ ನಿನ್ನ ಮೇ 26 ರಾತ್ರಿ ಟ್ರ್ಯಾಕ್ಟರ್ ಡಿಕ್ಕಿ ಹೊಡಿದಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆ ಕಾಂಪೌಂಡ್ ಗೆ ಟ್ರ್ಯಾಕ್ಟರ್ ಗುದ್ದಿ ಅಪಘಾತವಾಗಿದೆ.
Recommended Video
ಯಶ್ ಮನೆಗೆ ಡಿಕ್ಕಿಹೊಡೆದ ಟ್ರ್ಯಾಕ್ಟರ್ | Tractor hits Yash home | Filmibeat Kannada
ಟ್ರ್ಯಾಕ್ಟರ್ ಬ್ರೇಕ್ ಫೇಲ್ಯೂರ್ ಆದ ಕಾರಣ ಮನೆ ಕಾಂಪೌಂಡ್ ಗೆ ಡಿಕ್ಕಿಯಾಗಿದೆ ಎನ್ನಲಾಗುತ್ತಿದೆ. ಈ ವೇಲೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಜಖಂ ಆಗಿದೆ. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಹೊಸಕೆರೆಹಳ್ಳಿ ಮನೆಯಲ್ಲಿ ಸದ್ಯ ಯಶ್ ಕುಟುಂಬ ವಾಸವಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.
ಸ್ಥಳಕ್ಕೆ ಬನಶಂಕರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಿಸಿದ್ದಾರೆ. ಜೆಸಿಬಿ ಮೂಲಕ ಟ್ರ್ಯಾಕ್ಟರ್ ಅನ್ನು ಸ್ಥಳಾಂತರ ಮಾಡಿಸಲಾಗಿದೆ.

ಯಶ್ ಮತ್ತು ರಾಧಿಕಾ ಪ್ರತ್ಯೇಕ ಮನೆಯಲ್ಲಿ ವಾಸವಿದ್ದು, ಲಾಕ್ ಡೌನ್ ಪರಿಣಾಮ ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ. ಕೆಜಿಎಫ್-2 ಚಿತ್ರೀಕರಣದಲ್ಲಿ ಬ್ಯುಸಿ ಇರುವ ಯಶ್ ಸದ್ಯ ಚಿತ್ರೀಕರಣ ಸ್ಥಗಿತವಾಗಿದ್ದು, ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣದಲ್ಲಿ ಹಾಜರಾಗಲಿದ್ದಾರೆ.
More from Filmibeat
English summary
Tractor hit to Rocking star Yash house in Hosakerehalli.


Click it and Unblock the Notifications











