ದೃಶ್ಯ ವೈಭವೊಪೇತ ಬಾಹುಬಲಿ ಟ್ರೈಲರ್ ಗೆ ಬಹುಪರಾಕ್

By ಜೇಮ್ಸ್ ಮಾರ್ಟಿನ್

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಬಾಹುಬಲಿ' ಟ್ರೈಲರ್ ಗೆ ಪ್ರೇಕ್ಷಕರು ಬಹು ಪರಾಕ್ ಹೇಳಿದ್ದಾರೆ. ಸೋಮವಾರ ಸಂಜೆ ಬಿಡುಗಡೆಯಾದ ಚಿತ್ರದ ಟ್ರೈಲರ್ ದೃಶ್ಯವೈಭವಗಳಿಂದ ಕೂಡಿದ್ದು ಮೊದಲ ನೋಟಕ್ಕೆ ಮೆಚ್ಚುಗೆ ಪಡೆದುಕೊಂಡಿದೆ. ಯೂಟ್ಯೂಬ್ ನಲ್ಲಿ ಬಿಡುಗಡೆಗೂ ಮುನ್ನ ಆಂಧ್ರಪ್ರದೇಶದ ಪ್ರಮುಖ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ಬಾಹುಬಲಿ ಘರ್ಜಿಸಿದ್ದಾನೆ.

ಒಂದೊಂದು ಪಾತ್ರಗಳ ವೇಷ ಭೂಷಣ, ಅದ್ಭುತ ಹಿನ್ನೆಲೆ ದೃಶ್ಯಾವಳಿ, ಪೂರಕ ಹಿನ್ನೆಲೆ ಸಂಗೀತ, ಯುದ್ಧಭೂಮಿಯ ಚಿತ್ರಣ ಎಲ್ಲವೂ ಕಣ್ಮನ ಸೆಳೆಯುತ್ತದೆ. ಅದರೆ, ಟೀಸರ್ ಗಳಲ್ಲಿ ಉಂಟಾಗಿದ್ದ ಕುತೂಹಲ ಈ ಟ್ರೈಲರ್ ನಲ್ಲಿಲ್ಲ. ಅಂಥಾ ಕಿಕ್ ಕೊಡಲಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಅಪರೂಪಕ್ಕೆ ರಾಮ್ ಗೋಪಾಲ್ ವರ್ಮಾ ಕೂಡಾ ಬಾಹುಬಲಿ ಟ್ರೈಲರ್ ನೋಡಿ ತಲೆದೂಗಿದ್ದಾರೆ.

ಮಹಿಷ್ಮತಿ ಸಾಮ್ರಾಜ್ಯ ದರ್ಶನಕ್ಕೂ ಮುನ್ನ ದೇವಕನ್ಯೆಯಾಗಿ ಧರೆಗಿಳಿಯುವ ತಮನ್ನಾ, ನಾಯಕ ನಟ ಪ್ರಭಾಸ್, ರಾಣಾ ದಗ್ಗುಭಾತಿ ಆರ್ಭಟ, ನೆಗಟಿವ್ ಪಾತ್ರಗಳು ಎಲ್ಲವೂ ಒಟ್ಟಿಗೆ ಬಂದರೂ ಪಾತ್ರ ಪರಿಚಯಕ್ಕಾಗಿ ಮಾಡಿದ್ದ ಟೀಸರ್ ಮುಂದೆ ಟ್ರೈಲರ್ ಸಪ್ಪೆ ಎನಿಸುತ್ತದೆ. ಚಿತ್ರದ ಟ್ರೈಲರ್ ಬಗ್ಗೆ ಇನ್ನಷ್ಟು ಅನಿಸಿಕೆಗಳು ಮುಂದಿದೆ...

ಸ್ಪೂರ್ತಿ : ಯುದ್ಧ ಸಿನಿಮಾಗಳ ಸೀನ್ ಗಳು

ಸ್ಪೂರ್ತಿ : ಯುದ್ಧ ಸಿನಿಮಾಗಳ ಸೀನ್ ಗಳು

ಹಲವಾರು ಹಾಲಿವುಡ್ ಚಿತ್ರಗಳ ಯುದ್ಧ ಸಿನಿಮಾಗಳ ಸೀನ್ ಗಳಿಂದ ಸ್ಪೂರ್ತಿ ಪಡೆದಂತೆ ಕಾಣಿಸಿದರೂ ಭಾರತೀಯ ಸಿನಿಮಾ ಮಟ್ಟಿಗೆ ಇದು ಅದ್ಭುತ ವಿನ್ಯಾಸ ಎನ್ನಬಹುದು. ಐತಿಹಾಸಿಕ ಕಥೆಯುಳ್ಳ ಸಿನಿಮಾ ಗೆಲ್ಲಿಸುವ ಪಣ ತೊಟ್ಟಿರುವ ರಾಜಮೌಳಿ ಪ್ರತಿಯೊಂದು ವಿಷಯದಲ್ಲೂ ಕಾಳಜಿ ವಹಿಸಿ ಸೃಷ್ಟಿಸಿರುವ ಕಥೆಯ ಬಗ್ಗೆ ಇನ್ನೂ ಕುತೂಹಲ ಉಳಿದಿದೆ.

ಬಾಹುಬಲಿ ಟ್ರೈಲರ್ ನೋಡಿ

ಟ್ರೈಲರ್ ನಿರಾಶೆ ಮೂಡಿಸದಿದ್ದರೂ ಅಚ್ಚರಿಯಂತೂ ಮೂಡಿಸುತ್ತಿಲ್ಲ. ದಿ ಬಿಗಿನಿಂಗ್ ಎಂದು ಹೇಳಿರುವುದರಿಂದ ಮತ್ತೊಂದು ಟ್ರೈಲರ್ ಗಾಗಿ ಕಾಯುವುದರಲ್ಲಿ ತಪ್ಪೇನಿಲ್ಲ. ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಬಾಹುಬಲಿ ಟ್ರೈಲರ್ ಬಿಡುಗಡೆಯಾಗಿದೆ.

ಪ್ರಭಾಸ್ ಎರಡು ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ

ಪ್ರಭಾಸ್ ಎರಡು ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ

ಕಾಡಿನ ಪರಿಸರದಲ್ಲಿ ಕಾಣುವ ಪ್ರಭಾಸ್ ಹಾಗೂ ರಾಜ ಪೋಷಕಿನಲ್ಲಿ ಕಾಣಿಸಿಕೊಂಡಿದ್ದು, ನಾಯಕತ್ವದ ಗುಣ ಸಾರುವ ಡೈಲಾಗ್ ಹಾಗೂ ದೃಶ್ಯಗಳು ಕಾಣಿಸಿಕೊಳ್ಳುತ್ತದೆ. ಅದರೆ, ಅಂಥ ಹೊಸತನವಾಗಲಿ, ಕುತೂಹಲವಾಗಲಿ ಇದರಲ್ಲಿ ಕಾಯ್ದುಕೊಂಡಿಲ್ಲ.

ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ನಿರಾಶೆ

ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ನಿರಾಶೆ

ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಟೀಸರ್ ನಲ್ಲಿ ಕಂಡ ಅನುಷ್ಕಾ ಪಾತ್ರಕ್ಕೂ ಟ್ರೈಲರ್ ನಲ್ಲಿ ಕಂಡ ಝಲಕ್ ಗೂ ಭಾರಿ ಅಂತರ ಕಂಡು ಬರುತ್ತದೆ.

ದೇವಕನ್ಯೆ ತಮನ್ನಾ ಉತ್ತಮ ಲುಕ್

ದೇವಕನ್ಯೆ ತಮನ್ನಾ ಉತ್ತಮ ಲುಕ್

ಕಿನ್ನರಿಯಂತೆ ಜಲಪಾತದ ಬಳಿ ಧರೆಗಿಳಿದ ಅಪ್ಸರೆ ತಮನ್ನಾ ಲುಕ್ ಗಮನಸೆಳೆಯುತ್ತದೆ. ಟ್ರೈಲರ್ ಆರಂಭದಲ್ಲೇ ತಮನ್ನಾ ಪಾತ್ರ ಬಂದು ಹೋಗುತ್ತದೆ.

 ರಾಣಾ ದಗ್ಗುಭಾತಿ ವೀರಾವೇಶ

ರಾಣಾ ದಗ್ಗುಭಾತಿ ವೀರಾವೇಶ

ರಾಣಾ ದಗ್ಗುಭಾತಿ ವೀರಾವೇಶದ ಝಲಕ್ ಚೆನ್ನಾಗಿ ಮೂಡಿದೆ. ಯುದ್ಧದ ಸನ್ನಿವೇಶ, ಶಸ್ತ್ರಾಸ್ತ್ರ ಹಿಡಿದು ಆರ್ಭಟಿಸುವ ರೀತಿ ಅನನ್ಯವಾಗಿದೆ.

 ಅಪೂರ್ವ ದೃಶ್ಯ ವೈಭವಗಳ ಸಮ್ಮಿಲನ

ಅಪೂರ್ವ ದೃಶ್ಯ ವೈಭವಗಳ ಸಮ್ಮಿಲನ

ಅಪೂರ್ವ ದೃಶ್ಯ ವೈಭವಗಳ ಸಮ್ಮಿಲನವಾಗಿ ಮೂಡಿ ಬಂದಿರುವ ಟ್ರೈಲರ್ ನಲ್ಲಿ ಕೆಲವಾರು ಸನ್ನಿವೇಶಗಳು ನೆನಪಲ್ಲಿ ಉಳಿಯುತ್ತವೆ.

ಹೌದು ಕಿಚ್ಚ ಸುದೀಪ್ ಪಾತ್ರ ಎಲ್ಲಿ?

ಹೌದು ಕಿಚ್ಚ ಸುದೀಪ್ ಪಾತ್ರ ಎಲ್ಲಿ?

ರಾಜಮೌಳಿ ಅವರ ನೆಚ್ಚಿನ ನಟ ಕಿಚ್ಚ ಸುದೀಪ್ ಪಾತ್ರ ಟ್ರೈಲರ್ ನಲ್ಲಿ ಕಾಣಿಸಿಕೊಂಡಿಲ್ಲ. ಅಸ್ಲಂ ಖಾನ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದ್ದರು. ಬಹುಶಃ ಮುಂದಿನ ಟ್ರೈಲರ್ ನಲ್ಲಿ ಸುದೀಪ್ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿದೆ. ಅಥವಾ ಐ ಚಿತ್ರದ ಮುಖ್ಯ ವಿಲನ್ ಸುರೇಶ್ ಗೋಪಿ ಪಾತ್ರದಂತೆ ಸುದೀಪ್ ಪಾತ್ರವನ್ನು ಗೌಪ್ಯವಾಗಿರಿಸಿರಬಹುದು. ಉಳಿದಂತೆ ಮುಖ್ಯ ಪೋಷಕ ಪಾತ್ರಧಾರಿಗಳು ಕಾಣಿಸಿಕೊಂಡಿದ್ದಾರೆ.

ಚಿತ್ರದ ಟೈಟಲ್ ಕಾರ್ಡ್ ಪವರ್ ಫುಲ್

ಚಿತ್ರದ ಟೈಟಲ್ ಕಾರ್ಡ್ ಪವರ್ ಫುಲ್

ಚಿತ್ರದ ಟೈಟಲ್ ಕಾರ್ಡ್ ಪವರ್ ಫುಲ್ ಆಗಿ ಮೂಡಿ ಬಂದಿದೆ. ಈ ಸಮಯಕ್ಕೆ ಯೂಟ್ಯೂಬಿನಲ್ಲಿ ಮಲೆಯಾಳಂ ಟ್ರೈಲರ್ 65 ಸಾವಿರ, ತಮಿಳು 2,34,984, ಹಿಂದಿ 8,35,303 ಹಾಗೂ ತೆಲುಗು 12,54,334 ಹಿಟ್ಸ್ ಪಡೆದುಕೊಂಡಿದೆ. ಡಬ್ಬಿಂಗ್ ನಿಷೇಧ ಇರುವುದರಿಂದ ಈ ಚಿತ್ರವನ್ನು ಕನ್ನಡಿಗರು ಮೇಲ್ಕಂಡ ಯಾವುದಾದರೂ ಭಾಷೆಯಲ್ಲಿ ನೋಡುವುದು ಅನಿವಾರ್ಯವಾಗಿದೆ.

More from Filmibeat

English summary
Living up to the expectations around Baahubali, the team released a trailer that is nothing short of outstanding. Despite a few inspirations from world cinema, it promises to attempt a new kind of cinema in Indian film history. We know it is not fair to conclude just by watching a two minute trailer, it still appears to be a sure shot winner in hand continuing the success streak of S S Rajamouli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X