»   » ಮಂಗಳಮುಖಿ ಮೇಲೆಯೂ ಅತ್ಯಾಚಾರವೆಸಗಿದ್ದ ನಿರ್ಮಾಪಕನ ಮಗ.!

ಮಂಗಳಮುಖಿ ಮೇಲೆಯೂ ಅತ್ಯಾಚಾರವೆಸಗಿದ್ದ ನಿರ್ಮಾಪಕನ ಮಗ.!

Posted By:
Subscribe to Filmibeat Kannada

ಇಷ್ಟು ದಿನ ಟಾಲಿವುಡ್ ಇಂಡಸ್ಟ್ರಿಯಲ್ಲಿ ನಟಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ದೊಡ್ಡ ಸುದ್ದಿಯಾಗಿತ್ತು. ನಟಿ ಶ್ರೀರೆಡ್ಡಿ ಹಾಗೂ ಕೆಲವು ನಟಿಯರು ತಮ್ಮನ್ನ ನಿರ್ದೇಶಕ, ನಿರ್ಮಾಪಕರು ಹೇಗೆ ದುರ್ಬಳಕೆ ಮಾಡಿಕೊಂಡರು ಎಂಬ ವಿಷ್ಯಗಳನ್ನ ಬಹಿರಂಗಪಡಿಸಿ ಸಂಚಲನ ಸೃಷ್ಟಿಸಿದ್ದರು.

ಇದೀಗ, ತೆಲುಗಿನ ಮಂಗಳ ಮುಖಿಯೊಬ್ಬರು ತೆಲುಗು ಸಿನಿ ಲೋಕದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು, ತನ್ನ ಮೇಲೆಯೂ ಹಲವರು ಅತ್ಯಾಚಾರ ಮಾಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ನಟಿ-ನಿರ್ಮಾಪಕನ ನಡುವಿನ 'ಕಾಸ್ಟಿಂಗ್ ಕೌಚ್' ಸಂಭಾಷಣೆ ಲೀಕ್ ಮಾಡಿದ ವರ್ಮಾ

ಆದ್ರೆ, ಈ ಬಗ್ಗೆ ಬಹಿರಂಗವಾಗಿ ಆರೋಪ ಮಾಡಿದರೂ, ಯಾರೊಬ್ಬರು ಕೂಡ ಅದರ ವಿರುದ್ಧ ದನಿ ಎತ್ತುವುದಿಲ್ಲ. ಯಾಕಂದ್ರೆ, ದೊಡ್ಡವರು ಮಕ್ಕಳು ಎಂಬ ಕಾರಣ ಎಂದು ಮಂಗಳಮುಖಿಯೊಬ್ಬರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಇವರು ಹೇಳಿದ ಸತ್ಯ ಕಥೆಗಳು ಮುಂದೆ ಓದಿ.....

ಮಂಗಳಮುಖಿನಾ ಎಂದು ಪರೀಕ್ಷಿಸಿದ್ದರು..

ನಟಿಸುವ ಆಸಕ್ತಿ ಇರುವವರು ಈ ನಂಬರ್ ಕರೆ ಮಾಡಿ ಎಂಬ ಜಾಹೀರಾತನ್ನ ಟಿವಿಯಲ್ಲಿ ನೋಡಿ ನಿರ್ದೇಶಕರೊಬ್ಬರನ್ನ ಭೇಟಿ ಮಾಡಲು ಹೋಗಿದ್ದೆ. ನೀನು ನಿಜವಾದ ಮಂಗಳ ಮುಖಿನಾ ಅಥವಾ ಡೂಪ್ಲಿಕೆಟ್ ಅಂತ ಕೇಳ್ದಾ. ಚೆಕ್ ಮಾಡ್ಬೇಕು ಅಂತ ತನ್ನನ್ನ ವಿವಸ್ತ್ರಗೊಳಿಸಿದ್ದ ಎಂಬ ಸ್ಫೋಟಕ ಸಂಗತಿಯನ್ನ ಬಿಚ್ಟಿಟ್ಟಿದ್ದಾರೆ.

ಮತ್ತಿಬ್ಬರ ಹೆಸರು ಲೀಕ್ ಮಾಡಿದ ಶ್ರೀರೆಡ್ಡಿ.! ಅವರದ್ದು ಅದೇ ಬುದ್ಧಿಯಂತೆ.!

ದೊಡ್ಡ ನಿರ್ಮಾಪಕನ ಮಗ ದೌರ್ಜನ್ಯ ಮಾಡಿದ್ದಾನೆ

ದೊಡ್ಡ ನಿರ್ಮಾಪಕನ ಮಗನೊಬ್ಬ ನೀನು ನೋಡೋದಕ್ಕೆ ಹುಡುಗಿ ರೀತಿಯೇ ಇದ್ದೀಯಾ, ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಸ್ಟುಡಿಯೋದಲ್ಲಿ ನನ್ನ ಮೇಲೆ ಬಲತ್ಕಾರವೆಸಗಿದ್ದನು. ಶ್ರೀರೆಡ್ಡಿ ಆರೋಪ ಮಾಡಿದ ವ್ಯಕ್ತಿಯೇ ಅವರು ಕೂಡ ಎಂದು ಸಂಚಲನ ಸೃಷ್ಟಿಸಿದ್ದಾರೆ.

'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಚಿರಂಜೀವಿಗೆ ಎಚ್ಚರಿಕೆ ನೀಡಿದ ಶ್ರೀರೆಡ್ಡಿ

ಪವನ್ ಕಲ್ಯಾಣ್ ಹೇಳಿಕೆಗೆ ಉತ್ತರ

ನಟ ಪವನ್ ಕಲ್ಯಾಣ್ ಇತ್ತೀಚಿಗೆ ನಟಿಯರಿಗೆ, ಯುವತಿಯರಿಗೆ ಮೋಸ ಆಗಿದ್ದರೇ, ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿ ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮಂಗಳಮುಖಿ ಸೋನು, ನನ್ನ ಬಳಿ ಎಲ್ಲ ದಾಖಲೆಗಳು ಇದೆ, ಸಾಕ್ಷಿ ಇದೆ, ಆದ್ರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಯಾರಿಗೂ ಧಮ್ ಇಲ್ಲ ಎಂದು ಭಾವುಕರಾದರು.

ಎಲ್ಲರನ್ನ ಬಿಟ್ಟು ಕೊನೆಗೆ ಪವನ್ ಕಲ್ಯಾಣ್ ಬಳಿ ಬಂದ ಶ್ರೀರೆಡ್ಡಿ

ಎಚ್ಚರಿಕೆ ನೀಡಿದ ಸೋನು

ಮಂಗಳಿಮುಖಿ ಸೋನು ರಾಥೋಡ್ ತೆಲುಗು ಇಂಡಸ್ಟ್ರಿಯಲ್ಲಿ ನಟಿಯಾಗಿದ್ದಾರೆ. ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಯುವತಿಯರ ಮೇಲೆ, ನಟಿಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನ ತಡೆಯಲಿಲ್ಲ ಅಂದ್ರೆ, ವಾಣಿಜ್ಯ ಮಂಡಳಿ ಎದುರು ನಗ್ನ ಪ್ರದರ್ಶನ ಮಾಡಿ, ಸಾಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

English summary
After sri reddy sensational comment, now, transgender artist sonu rathore reveals about on casting couch problem in tollywood industry. transgender has said in a programme held in Hyderabad that a director made her to undress to confirm her gender.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X