twitter
    For Quick Alerts
    ALLOW NOTIFICATIONS  
    For Daily Alerts

    ಸೈನೈಡ್ ಗುಡ್ಡಕ್ಕೆ ಹಸಿರು ಹೊದಿಕೆ ಕೊಟ್ಟ ಹೊಂಬಾಳೆ ಫಿಲ್ಮ್ಸ್‌

    |

    ಸಿನಿಮಾ ಚಿತ್ರೀಕರಣಕ್ಕೆ ಅಂದುಕೊಂಡಂತೆ ಲೊಕೇಶನ್‌ಗಳು ಸಿಗೋದು ಕಷ್ಟ. ಇದೇ ಕಾರಣಕ್ಕೆ ಕೆಲ ಚಿತ್ರತಂಡಗಳು ಸಿನಿಮಾದ ಶೂಟಿಂಗ್‌ಗಾಗಿ ಅಂದುಕೊಂಡಂತೆ ಜಾಗಗಳನ್ನು ರಿಕ್ರಿಯೇಟ್ ಮಾಡುತ್ತವೆ. ಸೆಟ್‌ಗಳನ್ನು ಹಾಕಿ ವಿಜ್ರಂಭಣೆಯಿಂದ ಶೂಟಿಂಗ್ ಕೂಡ ಮುಗಿಸುತ್ತಾರೆ. ಆದರೆ, ಶೂಟಿಂಗ್ ಮುಗಿದ ನಂತರದಲ್ಲಿ ಆ ಜಾಗ ಎಷ್ಟೇ ಹಾಳಾಗಿರಲಿ ಅಥವಾ ಶೂಟಿಂಗ್‌ನಿಂದಲೇ ಏನಾದರು ತೊಂದರೆ ಆಗಿದ್ದರೂ ಕೆಲ ಸಿನಿಮಾ ತಂಡಗಳು ಅದರ ಗೋಜಿಗೆ ಹೊಗದೆ ಹಾಗೆ ಬಿಟ್ಟು ಬಿಡುತ್ತವೆ. ಇನ್ನು ಕೆಲವರು ತಮ್ಮ ಜವಾಬ್ದಾರಿಯನ್ನಷ್ಟೆ ಮುಗಿಸಿ ಜಾಗ ಖಾಲಿ ಮಾಡಿರುತ್ತವೆ. ಆದರೆ, ಕನ್ನಡದ ಕೆಜಿಎಫ್ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಎಲ್ಲಾರಿಗೂ ಈಗ ಮಾದರಿಯಾಗಿ ನಿಂತಿದೆ.

    ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್‌ ಚಾಪ್ಟರ್ 2 ಸಿನಿಮಾಗಳ ಚಿತ್ರೀಕರಣದ ಜಾಗ ಕೋಲಾರದ ಕೆಜಿಎಫ್ ಅನ್ನೋದು ಎಲ್ಲರಿಗೂ ಗೊತ್ತು. ಕೆಜಿಎಫ್‌ನ ಬರಡು ಭೂಮಿಯಲ್ಲಿ ಎರಡೂ ಚಾಪ್ಟರ್‌ಗಳನ್ನು ಮುಗಿಸಿದೆ ಚಿತ್ರತಂಡ. ಎತ್ತ ನೋಡಿದರೂ ಬರಡು, ಮರ ಗಿಡಗಳು ಕಾಣೊದು ಕಷ್ಟ. ಬಿಸಿಲಿನ ಬೇಗೆಯ ಜೊತೆಗೆ ಅಲ್ಲಿ ಕೆಜಿಎಫ್ ತಂಡ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಹಾಗೆ ಸಾಕಷ್ಟು ಸಿನಿಮಾಗಳು ಇಲ್ಲಿ ಚಿತ್ರೀಕರಣ ಮಾಡಿವೆ. ಅಲ್ಲಿನ ಲೊಕೇಶನ್ ಸಾಕಷ್ಟು ಸಿನಿಮಾಗಳಿಗೆ ಪ್ಲಸ್‌ಪಾಯಿಂಟ್ ಆಗಿದೆ. ಆದರೆ ಯಾರು ಈ ಕೆಜಿಎಫ್ ಬರಡು ಜಾಗವನ್ನು ಹಸಿರಾಗಿಸಬೇಕು ಎಂಬ ಮನಸ್ಸು ಮಾಡಿರಲಿಲ್ಲ. ಆದರೆ ಈಗ ಹೊಂಬಾಳೆ ಫಿಲ್ಮ್ಸ್‌ಇಂತದ್ದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಬರಡು ಭೂಮಿಯಲ್ಲಿ ಗಿಡಗಳನ್ನು ನೆಟ್ಟು ಸಾರ್ಥಕತೆ ಮೆರೆದಿದೆ.

    ಹೊಂಬಾಲೆ ಫಿಲ್ಮ್ಸ್ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ, ಕೆಜಿಫ್ ಬರಡು ಭೂಮಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ಮುಂದಾಗಿದೆ. ಇದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದೆ. ಶೂಟಿಂಗ್ ಮಾಡಿದ ಜಾಗಗಳಲ್ಲಿ ಹಾಗೆಯೇ ಅರಣ್ಯ ಇಲಾಖೆ ಗೊತ್ತು ಮಾಡಿದ ಬರಡು ಜಾಗದಲ್ಲಿ 1000ಕ್ಕು ಹೆಚ್ಚು ಗಿಡಗಳನ್ನು ಈಗ ನೆಡಲಾಗಿದೆ. ಜೆಸಿಬಿ ಮುಂಖಾಂತರ ಗುಂಡಿ ತೆಗೆಸಿ ಬೇರೆ ಬೇರೆ ತರಹದ ಗಿಡಗಳನ್ನು ಇಲ್ಲಿ ನೆಡಲಾಗಿದೆ. ಪ್ರಮುಖವಾಗಿ ಕೆಜಿಎಫ್ ನಗರದಲ್ಲಿ ಬರಡಾಗಿದ್ದ ಸೈನೈಡ್ ಗುಡ್ಡದಲ್ಲಿ ಸಾಕಷ್ಟು ಗಿಡಗಳನ್ನು ನೆಡಲಾಗಿದ್ದು, ಸೈನೈಡ್ ಗುಡ್ಡ ಹಸಿರ ಹೊದಿಕೆಗೆ ತಯಾರಾಗುತ್ತಿದೆ.

    Tree Plantation drive on the Cyanide Hill and KGF Chapter 2 Shooting sets by Hombale Films

    ಕೆಜಿಎಫ್‌ನ ತಾಪಮಾನಕ್ಕೆ ಸರಿಯಾಗುವ ಒಂದಷ್ಟು ಹಣ್ಣುಗಳ ಗಿಡ ಮತ್ತು ಇತರೆ ಗಿಡಗಳನ್ನು ಆಯ್ದು ನೆಡಲಾಗಿದೆ. ಕೆಲಸಗಾರರ ಸಹಾಯದಿಂದ ಗಿಡಗಳನ್ನು ನೆಡಿಸಿರುವ ಹೊಂಬಾಳೆ ಫಿಲ್ಮ್ಸ್, ಅದನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಹೊತ್ತಿದೆ. ಅದಕ್ಕೆ ನೀರು ಹಾಕುವುದುರಿಂದ ಹಿಡಿದು ಪೋಷಕಾಂಶ ಪೂರೈಕೆಯ ಸಂಪೂರ್ಣ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯೇ ಮಾಡಲಿದೆ. ಈ ಮೂಲಕ ಅಲ್ಲಿನ ಸುತ್ತಮುತ್ತಲ ನಿವಾಸಿಗಳಿಗೆ ಸ್ವಚ್ಚ ಹಾಗೂ ಸುಂದರ ಪರಿಸರವನ್ನು ಕೊಡುಗೆ ನೀಡುವ ಪ್ರಯತ್ನವನ್ನು ಹೊಂಬಾಲೆ ಫಿಲ್ಮ್ಸ್ ಮಾಡುತ್ತಿದೆ.

    ಈಗಾಗಲೇ ಗಿಡಗಳನ್ನು ನೆಟ್ಟು ಕೆಲದಿನಗಳೇ ಆಗಿವೆ. ನೆಟ್ಟಿರುವ ಗಿಡಗಳು ಸೊಂಪಾಗಿ ನೆಲದಲ್ಲಿ ಬೇರೂರಿ ಹಸಿರಿನ ಕಂಪು ನೀಡುತ್ತಿದೆ. ಅಲ್ಲಿನ ನಿವಾಸಿಗಳು ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹೊಂಬಾಳೆ ಫಿಲ್ಮ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಹೊಂಬಾಳೆ ಸಂಸ್ಥೆ ಕೂಡ ಪ್ರಕೃತಿಯ ಮೇಲಿನ ಕಾಳಜಿಗೆ ಪ್ರಕೃತಿಗೆ ಮರಳಿ ನೀಡುವುದರಲ್ಲಿ ಹಾಗೂ ಮುಂದಿನ ಪೀಳಿಗೆಗೋಸ್ಕರ ಅದನ್ನು ಕಾಪಾಡುವುದರಲ್ಲಿದೆ ಎಂಬು ನಂಬುತ್ತೇವೆ ಎಂದು ಹೇಳಿಕೊಂಡಿದೆ. ಈ ಮೂಲಕ ತಾವು ಶೂಟಿಂಗ್‌ಗಾಗಿ ಉಪಯೋಗಿಸಿಕೊಂಡ ಜಾಗದಲ್ಲಿ ಮಾದರಿ ಕೆಲಸ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    Tree Plantation drive on the Cyanide Hill and KGF Chapter 2 Shooting sets by Hombale Films

    ಇನ್ನು ಗಿಡ ನೆಡುವ ತಯಾರಿ ಹೇಗೆ ನಡೀತು, ಯಾವ ಯಾವ ಗಿಡಗಳನ್ನು ನೆಡಲಾಗಿದೆ, ಗಿಡ ನೆಡುವುದಕ್ಕು ಮುಂಚೆ ಜಾಗ ಹೇಗಿತ್ತು, ಈಗ ಹೇಗೆ ಆಗಿದೆ ಎಂಬ ಬಗ್ಗೆ ವೀಡಿಯೋ ಮುಖಾಂತರ ಹೊಂಬಾಳೆ ಫಿಲ್ಮ್ಸ್ ತೋರಿಸುವ ಪ್ರಯತ್ನ ಮಾಡಿದೆ. ಈ ವೀಡಿಯೋ ಈಗ ಸಾಕಷ್ಟು ಶೇರ್ ಆಗುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ತಂಡದ ಈ ಕೆಲಸಕ್ಕೆ ನೆಟ್ಟಿಗರು ಖುಷಿಯಾಗಿದ್ದಾರೆ. ಕೆಜಿಎಫ್ ಚಾಪ್ಟರ್ 2 ಗೂ ಒಳ್ಳೆದಾಗಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಕೆಜಿಎಫ್ ಚಾಪ್ಟರ್ 2 ಕೂಡ 2022 ಏಪ್ರೀಲ್ 14ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಅಭಿಮಾನಿಗಳು ಕೂಡ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

    English summary
    Tree Plantation drive on the Cyanide Hill and KGF Chapter 2 Movie Shooting sets by Hombale Films. More than 1000 plants were planted.
    Thursday, October 28, 2021, 11:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X