'ತ್ರಿಬಾಹು' ಟೀಸರ್ ಗೆ ಬಾಲಿವುಡ್ ಬೌಲ್ಡ್: ಕನ್ನಡದ ಚಿತ್ರಕ್ಕೆ ಭಾರಿ ಬೇಡಿಕೆ
ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಕಮ್ಮಿ ಎನ್ನುವ ಕಾಲ ಹೋಯ್ತು ಎನಿಸುತ್ತೆ. ಯಾಕಂದ್ರೆ, ಈಗಿನ ಸಿನಿಮಾಗಳು ಆರಂಭದಲ್ಲೇ ಪರಭಾಷಿಗರ ಮೇಲೆ ಪ್ರಭಾವ ಬೀರುತ್ತಿದೆ. ಅದರಲ್ಲೂ ಹೊಸಬರ ಚಿತ್ರಗಳು ಬೇರೆ ಭಾಷಿಗರಿಂದ ಶಬ್ಬಾಶ್ ಎನಿಸಿಕೊಳ್ಳುವುದು ವಿಶೇಷವೇ ಸರಿ.
ಹೌದು, ಇತ್ತೀಚೆಗಷ್ಟೇ 'ತ್ರಿಬಾಹು' ಎಂಬ ಕನ್ನಡ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್ ನೋಡಿ ಕನ್ನಡ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ರೀತಿ ತ್ರಿಬಾಹು ಟೀಸರ್ ನೋಡಿರುವ ಬಾಲಿವುಡ್ ಮಂದಿ ಕ್ಲೀನ್ ಬೌಲ್ಡ್ ಆಗಿದ್ದಾರೆ. ಬರಿ ಪೋಸ್ಟರ್ ಹಾಗೂ ಟೀಸರ್ ನೋಡಿಯೇ ಚಿತ್ರದ ಡಬ್ಬಿಂಗ್ ರೈಟ್ಸ್ ಕೊಂಡುಕೊಳ್ಳಲು ಮುಂದಾಗಿದ್ದಾರೆ.
ಬಾಲಿವುಡ್ ನ ಖ್ಯಾತ ನಿರ್ಮಾಪಕರೊಬ್ಬರು 'ತ್ರಿಬಾಹು' ಚಿತ್ರವನ್ನ ಹಿಂದಿಗೆ ಡಬ್ ಮಾಡಲು ಮನಸ್ಸು ಮಾಡಿದ್ದು, ಈ ಕುರಿತು ಮಾತುಕತೆಗೆ ಮುಂದಾಗಿದ್ದಾರೆ. ಒಳ್ಳೆಯ ಬೆಲೆಗೆ ಬೇಡಿಕೆ ಇಟ್ಟಿರುವುದು ಚಿತ್ರದ ಆರಂಭಿಕ ಗೆಲವು ಎನ್ನಬಹುದು. ಎಲ್ಲ ಅಂದುಕೊಂಡಂತೆ ವ್ಯವಹಾರ ನಡೆದರೇ, ತ್ರಿಬಾಹು ಸಿನಿಮಾ ಹಿಂದಿಯಲ್ಲೂ ಮೂಡಿಬರುವುದು ಬಹುತೇಕ ಖಚಿತವಾಗಲಿದೆ.

'ತ್ರಿಬಾಹು' ಟೈಟಲ್ ಹೇಳುವಾಗೆ ಇದು ಮೂರು ವಿಭಿನ್ನ ಶೇಡ್ ನ ಕಥೆ ಹೊಂದಿರುವ ಸಿನಿಮಾ. ಈ ಚಿತ್ರದ ನಾಯಕ ವಿಶ್ವ. ಈ ಚಿತ್ರಕ್ಕಾಗಿ ಸಖತ್ ನಾಯಕ ವಿಶ್ವ ಅವರು ಸಖತ್ ತಯಾರಿ ಮಾಡಿಕೊಂಡಿದ್ದಾರೆ. ಸದ್ಯ, ಬಿಡುಗಡೆಯಾಗಿರುವ ಟೀಸರ್ ನಲ್ಲಿ ಕುಸ್ತಿಪಟು ಆಗಿ ನಟ ಗಮನ ಸೆಳೆದಿದ್ದಾರೆ. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿರುವ ನಾಯಕ, ತಮ್ಮ ದೇಹವನ್ನ ದಂಡಿಸಿದ್ದಾರೆ. 65 ಕೆಜಿಯ ತೂಕವನ್ನ ಬರೋಬ್ಬರಿ 102 ಕೆಜಿ ಹೆಚ್ಚಿಸಿಕೊಂಡಿದ್ದಾರೆ. ಸದ್ಯ, ಚಿತ್ರದ ಒಂದು ಶೇಡ್ ಮಾತ್ರ ರಿವಿಲ್ ಮಾಡಿರುವ ಚಿತ್ರತಂಡ ಉಳಿದ ಎರಡು ಶೇಡ್ ಗಳನ್ನ ಗೌಪ್ಯವಾಗಿಟ್ಟಿದೆ. ಅದು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು.
ಅಂದ್ಹಾಗೆ, ಈ ಚಿತ್ರವನ್ನ ಸ್ವತಃ ವಿಶ್ವ ಅವರೇ ನಟಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಅಮಿತ್ ಎಸ್ ಕುಮಾರ್ ಅವರ ಸಂಗೀತ ಹಾಗೂ ಅಭಿಷೇಕ್ ಎ ಎನ್ ಅವರು ಕೊರಿಯೋಗ್ರಫಿ ಚಿತ್ರಕ್ಕಿದೆ.


Click it and Unblock the Notifications











