ದಾವಣಗೆರೆಯಲ್ಲಿ 'ತ್ರಿಬಲ್ ರೈಡಿಂಗ್' ತಂಡ: ಪ್ರೇಕ್ಷಕರಲ್ಲಿ ಮಾಡಿದರು ಮನವಿ

By ದಾವಣಗೆರೆ ಪ್ರತಿನಿಧಿ

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಸಿನಿಮಾ ವಾರದ ಹಿಂದೆ ತೆರೆ ಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಪ್ರಚಾರರಾರ್ಥ ಹಾಗೂ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಕುರಿತಾಗಿ ಖುಷಿ ಹಂಚಿಕೊಳ್ಳಲು ಚಿತ್ರತಂಡ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದೆ.

ದಾವಣಗೆರೆಗೆ ಇಂದು ಭೇಟಿ ನೀಡಿದ್ದ 'ತ್ರಿಬಲ್ ರೈಡಿಂಗ್' ಚಿತ್ರತಂಡ. ತಮ್ಮ ಸಿನಿಮಾವನ್ನು ಒಪ್ಪಿಕೊಂಡಿದ್ದಕ್ಕೆ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿತು. ''ಎರಡನೇ ವಾರವೂ ಇದೇ ರೀತಿಯಲ್ಲಿ ಚಿತ್ರ ಬೆಂಬಲಿಸಲಿ. ಈ ಸಿನಿಮಾ ಒಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು, ಚಿತ್ರರಸಿಕರಿಗೆ ಹಾಸ್ಯದ ರಸದೌತಣ ನೀಡಲಿದೆ'' ಎಂದು ರಗಡ್ ಚಿತ್ರ ಖ್ಯಾತಿಯ ಹಾಗೂ ತ್ರಿಬಲ್ ರೈಡಿಂಗ್ ನ ನಿರ್ದೇಶಕ ಮಹೇಶ್ ಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 25 ರಂದು ಚಿತ್ರ ತೆರೆ ಕಂಡಿದ್ದು, ಎಲ್ಲಾ ಕಡೆಯಿಂದ ಉತ್ತಮ ಸ್ಪಂದನೆ ಬಂದಿದೆ. ಚಿತ್ರದ 4 ಹಾಡುಗಳಲ್ಲಿ ಮೂರನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಮೂರೂ ಹಾಡುಗಳು ಹಿಟ್ ಆಗಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಪ್ರೇಕ್ಷಕರಿಂದ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರವನ್ನು ನೋಡಿ ಗೆಲ್ಲಿಸಿರುವ ರಾಜ್ಯದ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಲು ಚಿತ್ರತಂಡವು ವಿಜಯಯಾತ್ರೆ ಆರಂಭಿಸಿದೆ ಎಂದರು.

ಎಲ್ಲವೂ ಇರುವ ಸಿನಿಮಾ

ಎಲ್ಲವೂ ಇರುವ ಸಿನಿಮಾ

ಮಹೇಶ್‌ಗೌಡ ಕಥೆ , ಚಿತ್ರಕಥೆ ಬರೆದು ನಿರ್ದೇಶಿಸಿರುವ , ಗೋಲ್ಡನ್ ಸ್ಟಾರ್ ಗಣೇಶ್ , ಅದಿತಿ ಪ್ರಭುದೇವ , ಮೇಘಾಶೆಟ್ಟಿ , ರಚನಾ ಇಂದರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಕ್ಷನ್, ಲವ್, ಕಾಮಿಡಿ, ಸೆಂಟಿಮೆಂಟ್‌ ಜೊತೆಗೆ ಸಸ್ಪೆನ್ಸ್‌ನಂಥ ಎಲ್ಲಾ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡ ಪಕ್ಕಾ ಸ್ವಮೇಕ್ ಚಿತ್ರ, ಸಾಯಿಕಾರ್ತಿಕ್ ಅವರ ಸಂಗೀತ ಸಂಯೋಜನೆ, ಜೈಆನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಕೃಪಾಳು ಎಂಟರ್‌ಟೈನ್‌ಮೆಂಟ್ ಬ್ಯಾನರ್‌ ಮೂಲಕ ರಾಮ್‌ಗೋಪಾಲ್ ವೈ.ಎಂ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕತೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ: ನಿರ್ದೇಶಕ

ಕತೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ: ನಿರ್ದೇಶಕ

ಚಿತ್ರದ ಆರಂಭದಿಂದ ಕೊನೆಯವರೆಗೂ ಬರುವ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನುಗಳು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವ ಜೊತೆಗೆ ನೋಡುಗರಿಗೆ ಮನರಂಜನೆ ನೀಡುತ್ತದೆ. ನಾಯಕನ ಜೀವನದಲ್ಲಿ ಈ ಮೂವರು ಯುವತಿಯರು ಹೇಗೆ? ಏಕೆ ಬರುತ್ತಾರೆ ಎನ್ನುವುದೇ ಚಿತ್ರದ ತಿರುಳು ಎಂದು ತಿಳಿಸಿದರು ನಿರ್ದೇಶಕರು.

ಕಿರುತರೆ ನಟಿ ಮೇಘಾಶೆಟ್ಟಿಯ ಮೊದಲ ಸಿನಿಮಾ

ಕಿರುತರೆ ನಟಿ ಮೇಘಾಶೆಟ್ಟಿಯ ಮೊದಲ ಸಿನಿಮಾ

ಮೊದಲಬಾರಿಗೆ ತೆರೆಮೇಲೆ ನಾಯಕಿಯಾಗಿ ಕಾಣಿಸಿಕೊಂಡಿರುವ ಕಿರುತರೆ ನಟಿ ಮೇಘಾಶೆಟ್ಟಿ ಒಬ್ಬ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದು, ಮತ್ತೊಬ್ಬ ನಾಯಕಿ , ಲವ್‌ಮಾಕ್ ಟೇಲ್ ಖ್ಯಾತಿಯ ರಚನಾ ಇಂದರ್ ಹಠಮಾರಿ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ದಾವಣಗೆರೆ ಬೆಡಗಿ ಅದಿತಿ ಪ್ರಭುದೇವಾ ಮಲ್ಟಿಮಿಲಿಯನೇರ್‌ ಮಗಳಾಗಿ ಬಣ್ಣಹಚ್ಚಿದ್ದಾರೆ ಎಂದು ಮಾಹಿತಿ ನೀಡಿದರು. ಚಿತ್ರದ ನಾಯಕಿಯರಾದ ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಮಾತನಾಡಿ, ಒತ್ತಡದ ಜೀವನದಲ್ಲಿ ನಮ್ಮ ತ್ರಿಬಲ್ ರೈಡಿಂಗ್ ಸಿನಿಮಾ ಜನರಿಗೆ ಮನರಂಜನೆ ನೀಡಲಿದೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್. ಸಿನಿಮಾ ಆಗಿದೆ. ಎಲ್ಲರೂ ಚಿತ್ರ ವೀಕ್ಷಿಸಿ ಹರಸಿ ಎಂದು ಹೇಳಿದರು.

ಹಲವು ಹಿರಿಯ ನಟರಿದ್ದಾರೆ

ಹಲವು ಹಿರಿಯ ನಟರಿದ್ದಾರೆ

ಛಾಯಾಗ್ರಾಹಕ ಜೈಆನಂದ್ ಅವರ 25 ನೇ ಚಿತ್ರ ಇದಾಗಿದ್ದು, ಅದ್ಭುತ ಕ್ಯಾಮೆರಾ ವರ್ಕ್ ಜೊತೆಗೆ ಸಾಯಿ ಕಾರ್ತಿಕ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚಿತ್ರಕ್ಕೆ ಹೊಸ ರೂಪವನ್ನೇ ನೀಡಿವೆ . ಹಿರಿಯನಟ ರಂಗಾಯಣ ರಘು, ಶೋಭರಾಜ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ರವಿಶಂಕರಗೌಡ, ಕುರಿ ಪ್ರತಾಪ್‌ ಮುಂತಾದವರು ಚಿತ್ರದ ಉಳಿದ ಪಾತ್ರವರ್ಗದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Tribble Riding Kannada movie team visited Davangere today and thanked people for making their movie a hit. request people watch their movie in second week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X