ತ್ರಿಷಾ ಕೃಷ್ಣನ್ ದಂತದ ಮೈಮೇಲೆ ಚಿಲಿಪಿಲಿ ಹಚ್ಚೆಗಳು

By ಉದಯರವಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗಿನ 'ಪವರ್ ***' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಮೋಹಕ ತಾರೆ ತ್ರಿಷಾ ಕೃಷ್ಣನ್ ಇದೀಗ ಇನ್ನಷ್ಟು ಮನಮೋಹಕವಾಗಿ ಕಾಣಲು ಟ್ಯಾಟೂಗೆ ಮೊರೆಹೋಗಿದ್ದಾರೆ.

ಒಂದು ಕಾಲದಲ್ಲಿ ಹಚ್ಚೆ ಎಂಬುದು ಬಡವರ ಫ್ಯಾಷನ್ ಆಗಿತ್ತು. ಇದೀಗ ಈ ಕಲೆ ಶ್ರೀಮಂತರ ಸ್ವತ್ತು ಎಂಬಂತಾಗಿದೆ. ಮೊದಲೆಲ್ಲಾ ಕೈಗೋ, ಹಣೆಗೂ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಇದೀಗ ಇದರ ವ್ಯಾಪ್ತಿ ಕೇವಲ ಹಣೆ ಕೈಗಷ್ಟೇ ಸೀಮಿತವಾಗಿಲ್ಲ. ಅಡಿಯಿಂಡ ಮುಡಿತನಕ ಹಚ್ಚೆಯ ಹುಚ್ಚು ವಿಸ್ತರಿಸಿದೆ. [ಶಾರ್ಟ್ಸ್ ನಲ್ಲಿ ತ್ರಿಷಾ ಕೃಷ್ಣನ್ ವಿಶ್ವರೂಪ ಪ್ರದರ್ಶನ]

ಹಚ್ಚೆಗೆ ಹೆಚ್ಚಾಗಿ ಮೊರೆ ಹೋಗುತ್ತಿರುವವರು ಸಿನಿಮಾ ತಾರೆಗಳು, ಸೆಲೆಬ್ರಿಟಿಗಳು. ತ್ರಿಷಾ ಅವರು ಈಗಾಗಲೆ ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಹಚ್ಚೆ 'ಪವರ್ ***' ಚಿತ್ರದಲ್ಲೂ ಆಗಾಗ ಪ್ರೇಕ್ಷಕರ ಕಣ್ಣಿಬಿದ್ದು ಕಚಗುಳಿ ಇಡುತ್ತಿತ್ತು. ಇದೀಗ ಅವರು ಇನ್ನಷ್ಟು ಕಚಗುಳಿ ಇಡುವ ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ ಬನ್ನಿ ನೋಡೋಣ.

ಟ್ಯಾಟೂ ಎಂದರೆ ಎಲ್ಲಿಲ್ಲದ ಮೋಹ

ಟ್ಯಾಟೂ ಎಂದರೆ ಎಲ್ಲಿಲ್ಲದ ಮೋಹ

ತ್ರಿಷಾ ಕೃಷ್ಣನ್ ಅವರಿಗೆ ಟ್ಯಾಟೂ ಎಂದರೆ ಎಲ್ಲಿಲ್ಲದ ಮೋಹವಂತೆ. ಹಾಗಾಗಿ ಹೆಚ್ಚಾಗಿ ಟ್ಯಾಟ್ಯೂಗಳನ್ನು ಹಾಕಿಸಿಕೊಂಡು ಸಂಭ್ರಮಿಸುತ್ತಾರೆ. ಈ ಹಿಂದೆ ತಮ್ಮ ಎದೆಯ ಭಾಗದಲ್ಲಿ 'Nemo' ಮೀನಿನ ಟ್ಯಾಟೂ ಹಾಕಿಸಿಕೊಂಡಿದ್ದರು.

'ಭೂಲೋಹಮ್' ಚಿತ್ರಕ್ಕಾಗಿ ಈ ಕಸರತ್ತು

'ಭೂಲೋಹಮ್' ಚಿತ್ರಕ್ಕಾಗಿ ಈ ಕಸರತ್ತು

ತಮ್ಮ ಮುಂದಿನ ತಮಿಳು 'ಭೂಲೋಹಮ್' ಚಿತ್ರಕ್ಕಾಗಿ ಇನ್ನೂ ಹಲವಾರು ಆಕರ್ಷಕ ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹೊಟ್ಟೆ, ತೊಡೆ ಭಾಗಗಳಲ್ಲಿ ಆಕರ್ಷಕ ಹಚ್ಚೆಗಳನ್ನು ಹಾಕಿಸಿಕೊಂಡು ಅಭಿಮಾನಿಗಳ ನಿದ್ದೆಗೆ ಬರೆ ಎಳೆದಿದ್ದಾರೆ.

ಜಯಂ ರವಿ ಚಿತ್ರದ ಹೀರೋ

ಜಯಂ ರವಿ ಚಿತ್ರದ ಹೀರೋ

ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ತನ್ನ ಬಾಯ್ ಫ್ರೆಂಡ್ ಜಯಂ ರವಿ ಚಿತ್ರದ ಹೀರೋ ಎಂಬುದು. ಟ್ಯಾಟೂಗಳು ಚಿತ್ರದ ಕಥೆಗೆ ಪೂರಕವಾಗಿವೆಯೋ ಅಥವಾ ತ್ರಿಷಾ ಅವರ ಆಸಕ್ತಿಗೆ ಅನುಗುಣವಾಗಿವೆಯೋ ಎಂಬುದು ಗೊತ್ತಾಗಿಲ್ಲ.

ದಕ್ಷಿಣದಲ್ಲಿ ಬಲು ಬೇಡಿಕೆಯ ನಟಿಮಣಿ

ದಕ್ಷಿಣದಲ್ಲಿ ಬಲು ಬೇಡಿಕೆಯ ನಟಿಮಣಿ

ಚಿತ್ರವೊಂದಕ್ಕೆ ಸರಿಸುಮಾರು ರು.1 ಕೋಟಿ ಎಣಿಸುವ ತ್ರಿಷಾ ಕೃಷ್ಣನ್ ದಕ್ಷಿಣದಲ್ಲಿ ಬಲು ಬೇಡಿಕೆಯ ನಟಿಮಣಿ. ಇದೀಗ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಈ ಬೆಡಗಿ ಮೊದಲ ಚಿತ್ರದಲ್ಲೇ ಸಾಕಷ್ಟು ಕನ್ನಡ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಈಗಲೂ ಚಲಾವಣೆಯಲ್ಲಿರುವ ತಾರೆ

ಈಗಲೂ ಚಲಾವಣೆಯಲ್ಲಿರುವ ತಾರೆ

ಸಿನಿಮಾ ಉದ್ಯಮಕ್ಕೆ ಸಾಕಷ್ಟು ಹೊಸ ಬೆಡಗಿಯರು ಅಡಿಯಿಡುತ್ತಿದ್ದರೂ ತ್ರಿಷಾ ಮಾತ್ರ ತಮ್ಮ ಎಂದಿನ ಸೌಂದರ್ಯವನ್ನು ಉಳಿಸಿಕೊಂಡು ಈಗಲೂ ಚಲಾವಣೆಯಲ್ಲಿರುವ ತಾರೆ. ದಶಕಗಳ ಕಾಲ ಮಹಾರಾಣಿಯಂತೆ ಮೆರೆದ, ಮೆರೆಯುತ್ತಿರುವ ತಾರೆ ತ್ರಿಷಾ.

More from Filmibeat

English summary
Actress Trisha Krishnan, who is basking in the success of her Kannada movie Power***, earlier had a tattoo of Nemo on her chest along with a tattoo of her sun sign Taurus on her body. Now, for her forthcoming Tamil movie Bhooloham, she has inked tattoos on her thighs and belly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X