ಮಹಿಳಾ ಪ್ರಧಾನ ಸಿನಿಮಾದಲ್ಲಿ ಕಾಲಿವುಡ್ ನಟಿ ತ್ರಿಷಾ
ನಟಿ ತ್ರಿಷಾ ಈಗ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ತ್ರಿಷಾ ಈಗ ವಿಭಿನ್ನ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ತಮ್ಮ ಹೊಸ ಸಿನಿಮಾದ ವಿಷಯವನ್ನು ಈ ನಟಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಹೊಸ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ತ್ರಿಷಾ ''ನನ್ನ ಮುಂದಿನ ಸಿನಿಮಾದ ಬಗ್ಗೆ ಹೇಳಿಕೊಳ್ಳುವುದಕ್ಕೆ ಸಂತಸವಾಗುತ್ತಿದೆ. 'ಕುತ್ರಪ್ಪಾಯಿಚಿ' (kuthrappayirchi) ಎಂಬ ಹೊಸ ಸಿನಿಮಾದಲ್ಲಿನಟಿಸುತ್ತಿದ್ದೇನೆ'' ಎಂದು ತ್ರಿಷಾ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ತ್ರಿಷಾ ಮುಂದಿನ ಸಿನಿಮಾಗಳ ದೊಡ್ಡ ಲಿಸ್ಟ್ ಇದ್ದು ಅದಕ್ಕೆ ಈ ಸಿನಿಮಾ ಕೂಡ ಸೇರಿಕೊಂಡಿದೆ.

ವಿಶೇಷ ಅಂದರೆ ಇದೊಂದು ರಿಯಲ್ ಸ್ಟೋರಿ ಅದರಲ್ಲಿಯೂ ಪತ್ತೇದಾರಿ ಚಿತ್ರವಾಗಿದೆ. ಭಾರತದ ಮಹಿಳಾ ಪತ್ತೇದಾರಿ ಆದ ರಜನಿ ಪಂಡಿತ್ ಕಥೆ ಚಿತ್ರದಲ್ಲಿ ಇರಲಿದೆ. ನಿರ್ದೇಶಕ ಬಾಲ ಅವರ ಜೊತೆಗೆ ಕೆಲಸ ಮಾಡುತ್ತಿದ್ದ ವೆರ್ನಿ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ತ್ರಿಷಾ ಈ ರೀತಿಯ ಪಾತ್ರವನ್ನು ಮಾಡುತ್ತಿದ್ದಾರೆ. ತಿಷಾ ಹೊಸ ಸಿನಿಮಾಗೆ ಅವರ ಅಭಿಮಾನಿಗಳು ಶುಭ ಕೋರಿದ್ದಾರೆ.


Click it and Unblock the Notifications











