ಗಾಂಧಿನಗರದಲ್ಲಿ 'ನಟ ಸಾರ್ವಭೌಮ'ನಿಗೆ ಸಿಕ್ಕ ಚಿತ್ರಮಂದಿರ ಯಾವುದು?
'ನಟ ಸಾರ್ವಭೌಮ' ಸಿನಿಮಾದ ಟ್ರೇಲರ್ ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಚಿತ್ರಮಂದಿರಗಳ ಲಿಸ್ಟ್ ಹೊರ ಬಂದಿದೆ.
ಯಾವುದೇ ದೊಡ್ಡ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತದೆ ಎಂದಾಗ ಗಾಂಧಿನಗರದ ಯಾವ ಚಿತ್ರಮಂದಿರದಲ್ಲಿ ಬರುತ್ತದೆ ಎಂಬ ಕುತೂಹಲ ಇರುತ್ತದೆ. 'ನಟ ಸಾರ್ವಭೌಮ'ಗೆ ಯಾವ ಮುಖ್ಯ ಚಿತ್ರಮಂದಿರ ಸಿಕ್ಕಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' ಆರ್ಭಟ ನಡೆಸಲಿದ್ದಾನೆ. ಸಿನಿಮಾ ಫೆಬ್ರವರಿ 7 ಎಂದು ಬಿಡುಗಡೆಯಾಗಲಿದೆ. ಉಳಿದ ಚಿತ್ರಮಂದಿರಗಳ ಲಿಸ್ಟ್ ಸದ್ಯದಲ್ಲಿಯೇ ತಿಳಿಯಲಿದೆ.

ಪವನ್ ಒಡೆಯರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್, ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದಲ್ಲಿ ನಟಿಸಿದ್ದಾರೆ. ಈ ನಾಳೆ ಸಿನಿಮಾ ಟ್ರೇಲರ್ ಹೊರಬರಲಿದೆ. ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಣ ಮಾಡಿದ್ದಾರೆ.
More from Filmibeat
English summary
Triveni is main theatre for Power Star Puneet Rajkumar's 'Nata Sarwabouma' movie.
nata sarvabhouma puneeth rajkumar pawan wadeyar rachita ram ನಟ ಸಾರ್ವಭೌಮ ಪುನೀತ್ ರಾಜ್ ಕುಮಾರ್ ರಚಿತಾ ರಾಮ್


Click it and Unblock the Notifications











