'ಕಾಂತಾರ' ಆಯ್ತು ಈಗ ತ್ರಿವಿಕ್ರಮ ನಿರ್ಮಾಣದ 'ಕರಿಹೈದ ಕೊರಗಜ್ಜ' ಸಿನಿಮಾ ಬಿಡುಗಡೆಗೆ ಸಿದ್ಧ

ಬೆಂಗಳೂರು: ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಕಥೆಯುಳ್ಳ ಸಿನಿಮಾಗಳು, ವಿಶ್ವದಾದ್ಯಂತ ಗಮನ ಸೆಳೆಯುತ್ತಿರುವುದು ಕನ್ನಡಿಗರ ಹೆಮ್ಮೆ. ತುಳುನಾಡು, ಮಲೆನಾಡಿನ ಸಂಸ್ಕೃತಿಯನ್ನು ಬಿಂಬಿಸುವ 'ಕಾಂತಾರ' ಚಿತ್ರ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ. ಇದೀಗ ಖ್ಯಾತ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ನಿರ್ಮಾಣದ ತುಳುನಾಡಿನ ಮತ್ತೊಂದು ಪ್ರಸಿದ್ಧ ದೈವ 'ಕರಿಹೈದ ಕೊರಗಜ್ಜ' ಸಿನಿಮಾ ಸದ್ದು ಮಾಡಲು ರೆಡಿಯಾಗಿದೆ.

ತುಳುನಾಡಿನ ಪ್ರಸಿದ್ಧ ದೈವಗಳ ಪೈಕಿ ಕೊರಗಜ್ಜ ಕೂಡ ಒಂದು. ಹಿಂದಿನಿಂದಲೂ ಅಜ್ಜನ ಸನ್ನಿಧಿಯಲ್ಲಿ ಅನೇಕ ಪವಾಡಗಳು ನಡೆಯುತ್ತ ಬಂದಿದ್ದು, ಇತ್ತೀಚೆಗೆ ಆ ಭಾಗದ ಜನರಷ್ಟೇ ಅಲ್ಲದೇ, ರಾಜ್ಯ, ಹೊರ ರಾಜ್ಯ, ವಿದೇಶಗಳಿಂದಲೂ ಹಲವರು ತಮ್ಮ ಕಷ್ಟ ಪರಿಹರಿಸುವಂತೆ ಕೊರಗಜ್ಜನಿಗೆ ಹರಕೆ ಹೊತ್ತು, ಅಜ್ಜ ನೆಲೆ ನಿಂತ ಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಇಂಥಾ ಶಕ್ತಿ ಹೊಂದಿರುವ ಕೊರಗಜ್ಜನ ನಿಖರವಾದ ಕಥೆಯ ಸಿನಿಮಾ ಕೂಡ ತಯಾರಾಗಿದ್ದು, ಇದರಲ್ಲಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರ ಶ್ರಮ ದೊಡ್ಡದಿದೆ.

Trivikram Sapalyas Kari Haida Koragajja movie release soon

ಸಮುದಾಯದ ಒಪ್ಪಿಗೆ ಪಡೆದು ಚಿತ್ರೀಕರಣ

ಒಂದಷ್ಟು ಬಿಡುವಿನ ನಂತರ ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡಿದ 'ಕರಿಹೈದ ಕೊರಗಜ್ಜ' ಚಿತ್ರವನ್ನು ಸುಧೀರ್ ಅತ್ತಾವರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕೊರಗಜ್ಜನ ರೋಚಕ ಜೀವನಗಾಥೆಯನ್ನೊಳಗೊಂಡಿದೆ. ಕೊರಗ ಸಮುದಾಯದ ಒಪ್ಪಿಗೆ ಪಡೆದೇ, ಕೊರಗಜ್ಜನ ಅಧಿಕೃತ ಕಥೆಗೆ ಸಿನಿಮಾ ಫ್ರೇಮು ತೊಡಿಸಲಾಗಿದೆಯಂತೆ.

ಘಟಾನುಘಟಿ ಕಲಾವಿದರು

'ಕರಿಹೈದ ಕೊರಗಜ್ಜ' ಚಿತ್ರದಲ್ಲಿ ಘಟಾನುಘಟಿ ಕಲಾವಿದರ ದಂಡೇ ಇದೆ. ಬಾಲಿವುಡ್‌ನ ಖ್ಯಾತ ನಟ ಕಬೀರ್ ಬೇಡಿ ರಾಜನಾಗಿ, ಖ್ಯಾತ ಕೊರಿಗ್ರಾಫರ್ ಸೋಫಾರ್ಕರ್ ಗುಳಿಗನ ಪಾತ್ರದಲ್ಲಿಅಭಿನಯಿಸಿದ್ದಾರೆ. ಪ್ರತಿಭಾವಂತ ಯುವ ನಟ ಭರತ್ ಕೊರಗಜ್ಜನಾಗಿ ಕಾಣಿಸಿಕೊಂಡಿದ್ದು, ನಟಿ ಭವ್ಯ, ಶ್ರುತಿ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

Trivikram Sapalyas Kari Haida Koragajja movie release soon

ನಿರ್ಮಾಪಕ ತ್ರಿವಿಕ್ರಮ ಅವರ ಹಿನ್ನೆಲೆ

ಯಶಸ್ವಿ ಉದ್ಯಮಿಯಾಗಿರುವ ತ್ರಿವಿಕ್ರಮ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ, ದಶಕಗಳಷ್ಟು ಕಾಲದಿಂದ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ತ್ರಿವಿಕ್ರಮ ನಿರ್ದೇಶನದಲ್ಲಿ ಮೂಡಿಬಂದ ಪರಿ ಸಿನಿಮಾ ಒಂದು ಮಟ್ಟಿಗೆ ಗೆಲುವು ದಾಖಲಿಸಿತ್ತು. ಬಳಿಕ ಚಿರಂಜೀವಿ ಸರ್ಜಾ ನಾಯಕ ನಟನಾಗಿ, ರವಿಚಂದ್ರನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ 'ಸೀಜರ್' ಚಿತ್ರ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ದೊಡ್ಡ ಮಟ್ಟದ ಗೆಲುವಿನ ಜೊತೆಗೆ ಬೆಸ್ಟ್ ಆಕ್ಷನ್ ಚಿತ್ರವಾಗಿ ಅಧಿಕ ಮೊತ್ತಕ್ಕೆ ಮಾರಾಟವಾಗಿತ್ತು.

ನಿರ್ಮಾಪಕ ತ್ರಿವಿಕ್ರಮ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಕಷ್ಟದಲ್ಲಿ ಬೆಳೆದು ಬಂದ ಇವರ ಗುರಿ, ಛಲ, ಯಶಸ್ಸಿನ ಕಥೆ ಎಲ್ಲರಿಗೂ ಸ್ಫೂರ್ತಿಯಾಗುವಂತಿದೆ. ಟ್ರಾನ್ಸ್ಫರ್ಮೆರ್ ತಯಾರಿಸುವ ಬಹು ದೊಡ್ಡ ಉದ್ದಿಮೆ ನಡೆಸುವ ತ್ರಿವಿಕ್ರಮ್, ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿಯೂ ಹೆಸರು ಗಳಿಸಿದ್ದಾರೆ.

More from Filmibeat

English summary
Trivikram Sapalya's Kari Haida Koragajja movie release soon. The movie is directed by Sudhir Attavar, Bollywood actor Kabir Bedi portraying King Role. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X