ದಾವಣಗೆರೆಯಲ್ಲಿ 'ತ್ರಿವಿಕ್ರಮ'ನ ಜೊತೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು!

By ದಾವಣಗೆರೆ ಪ್ರತಿನಿಧಿ

ಇದೇ ಜೂನ್ 24ಕ್ಕೆ ರಾಜ್ಯಾದ್ಯಂತ ತೆರೆಕಾಣಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ 'ತ್ರಿವಿಕ್ರಮ' ಸಿನಿಮಾದ ಪ್ರಮೋಷನ್ ಗಾಗಿ ಚಿತ್ರತಂಡ ಬೆಣ್ಣೆನಗರಿಗೆ ಆಗಮಿಸಿತ್ತು. ನಗರದ ದವನ್ - ನೂತನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮುಂದೆ ಚಿತ್ರತಂಡ ನೃತ್ಯ ಮಾಡುವ ಮೂಲಕ ರಂಜಿಸಿದರು.

ಮೊದಲಿಗೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿದ ಚಿತ್ರತಂಡವು ತಾಯಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿತು. ಜಿಎಂಐಟಿ, ಅಥಣಿ ಕಾಲೇಜು, ಎವಿ ಕಮಲಮ್ಮ

ಮಹಿಳಾ ಕಾಲೇಜು, ಜೈನ್ ತಾಂತ್ರಿಕ ಕಾಲೇಜುಗಳಲ್ಲಿ ಹೋಗಿ ವಿದ್ಯಾರ್ಥಿಗಳ ಸಮೂಹದ ನಡುವೆ ಚಿತ್ರ ಬೆಂಬಲಿಸುವತೆ ಮನವಿ ಮಾಡಿತು.

ದವನ್ - ನೂತನ್ ಕಾಲೇಜಿನಲ್ಲಿ "ಅಲಲಾ ಲಾ ಅಲಲಾ ನಿನ್ನ ಮುಂದೆ ಯಾರೂ ಇಲ್ಲ. ಎಲ್ಲಾ ನಿಂದೆ ನಂದೇನಿಲ್ಲ. ಆಗು ಗಲ್ಲಿ ಹಲ್ಲಾ ಗುಲ್ಲಾ ಶಕುಂತಲಾ ಶೇಕ್ ಯುವರ್ ಬಾಡಿ'' ಎಂಬ ಹಾಡಿಗೆ ವಿಕ್ರಮ್ ರವಿಚಂದ್ರನ್ ಹಾಗೂ ಚಿತ್ರದ ನಾಯಕಿ ಆಕಾಂಕ್ಷಾ ಶರ್ಮಾ ಹೆಜ್ಜೆ ಹಾಕುತ್ತಿದ್ದಂತೆ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಈ ವೇಳೆ ನಟ, ನಟಿಯರ ಜೊತೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದರು. ರವಿಚಂದ್ರನ್ ಪುತ್ರನನ್ನು ಕಂಡು ಪುಳಕಿತರಾದರು.

ಅಪ್ಪನಿಗೆ ಸಾಕಷ್ಟು ಪ್ರೀತಿಯನ್ನು ದಾವಣಗೆರೆ ನೀಡಿದೆ: ವಿಕ್ರಮ್

ಅಪ್ಪನಿಗೆ ಸಾಕಷ್ಟು ಪ್ರೀತಿಯನ್ನು ದಾವಣಗೆರೆ ನೀಡಿದೆ: ವಿಕ್ರಮ್

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮ್ ರವಿಚಂದ್ರನ್, ''ನನ್ನ ತಂದೆ ಮೊದಲ ಸಿನಿಮಾದ ಆಡಿಯೋ ಇಲ್ಲೇ ಬಿಡುಗಡೆಯಾಗಿದ್ದು. ಆಗಿನಿಂದ ಇಲ್ಲಿಯವರೆಗೆ ದಾವಣಗೆರೆಯ ಜನರು ನನ್ನ ತಂದೆ ಮೇಲೆ ಅಪಾರ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ. ಅವರ ಚಿತ್ರಗಳನ್ನು ಪ್ರೋತ್ಸಾಹಿಸಿದ್ದಾರೆ. ನನಗೂ ಇದರಲ್ಲಿ ಶೇಕಡಾ 1ರಷ್ಟಾದರೂ ನೀಡಿ. ಮೊದಲಿನಿಂದಲೂ ನಮ್ಮ ಕುಟುಂಬದ ಮೇಲೆ ತೋರಿರುವ ಪ್ರೀತಿ ಮುಂದೆಯೂ ಮುಂದುವರಿಯುತ್ತದೆ'' ಎಂದು ಹೇಳಿದರು.

ಜೂನ್ 24 ರಂದು ಸಿನಿಮಾ ಬಿಡುಗಡೆ

ಜೂನ್ 24 ರಂದು ಸಿನಿಮಾ ಬಿಡುಗಡೆ

''ಪ್ರತಿಯೊಬ್ಬರಿಗೂ ಒಂದು ಬೆಲ್ಟ್ ಇರುತ್ತದೆ. ಅದೇ ರೀತಿಯಲ್ಲಿ ಹೀರೋಗೂ ಕರ್ನಾಟಕದಲ್ಲಿ ಬೆಲ್ಟ್ ಇದ್ದೇ ಇರುತ್ತೆ. ನನ್ನ ತಂದೆಗೆ ಸಿನಿ ಪ್ರೇಕ್ಷಕರು ತುಂಬಾ ಪ್ರೀತಿ ತೋರಿಸಿದ್ದಾರೆ. 'ತ್ರಿವಿಕ್ರಮ' ಜೂನ್ 24 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ದಾವಣಗೆರೆಯಲ್ಲಿ ಅರುಣಾ, ಅಶೋಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಮೂಲಕ ನಿಮ್ಮ ಮನಸು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಪ್ರತಿಯೊಬ್ಬರೂ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹ ಕೊಡಿ ಎಂದು ಮನವಿ ಮಾಡಿದರು.

ತಂದೆಗೆ ನೀಡಿದ ಪ್ರೀತಿಯಲ್ಲಿ 1% ಕೊಡಿ: ವಿಕ್ರಮ್ ಮನವಿ

ತಂದೆಗೆ ನೀಡಿದ ಪ್ರೀತಿಯಲ್ಲಿ 1% ಕೊಡಿ: ವಿಕ್ರಮ್ ಮನವಿ

''ತಂದೆ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ತುಂಬಾನೇ ಹೆಚ್ಚಿದೆ. ನನಗೆ ಅದರಲ್ಲಿ ಶೇಕಡಾ 1ರಷ್ಟಾದರೂ ತೋರಿಸಿ. ಸಿನಿಮಾದಲ್ಲಿ ನಿಮ್ಮ ಮನಸ್ಸನ್ನು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಬೆಂಗಳೂರು ಬಿಟ್ಟರೆ ದಾವಣಗೆರೆ ಜನರು ಹೆಚ್ಚು ಪ್ರೀತಿ ನೀಡುತ್ತಾರೆ. ನಾವು ಇಟ್ಟಿರುವುದು ಮೊದಲ ಹೆಜ್ಜೆ. ತುಂಬಾ ಹೆಜ್ಜೆಗಳನ್ನಿಡಬೇಕಿದೆ. ಈಶ್ವರಿ ಸಂಸ್ಥೆಯು ಈಗಾಗಲೇ ಒಳ್ಳೆಯ ಸಿನಿಮಾ ಕೊಟ್ಟಿದೆ. ಇದು ಇನ್ನು ಜಾಸ್ತಿಯಾಗಬೇಕು ಎಂಬ ಹಂಬಲ ನಮ್ಮದು. 'ತ್ರಿವಿಕ್ರಮ' ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗ, ಜೈನ ಧರ್ಮದ ಯುವತಿ ನಡುವೆ ಪ್ರೇಮಾಂಕುರವಾಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ. ಆಸೆಯಲ್ಲಿ ಹುಟ್ಟುತ್ತೇವೆ, ಆಸೆಯಲ್ಲೇ ಬದುಕುತ್ತೇವೆ. ಆಸೆಯಲ್ಲೇ ಸಾಯುತ್ತೇವೆ. ಈ ಪಾತ್ರದ ಜರ್ನಿ ಹೇಗಿರುತ್ತೆ ಎಂಬ ಕುರಿತಾಗಿಯೂ ಇದೆ'' ಎಂದು ತಿಳಿಸಿದರು.

ವಿಕ್ರಮ್ ಸ್ಟಾರ್ ಆಗಲಿದ್ದಾನೆ ಎಂದ ನಿರ್ದೇಶಕ

ವಿಕ್ರಮ್ ಸ್ಟಾರ್ ಆಗಲಿದ್ದಾನೆ ಎಂದ ನಿರ್ದೇಶಕ

ಇನ್ನು ಚಿತ್ರದ ನಿರ್ದೇಶಕ ಸಹನಾ ಮೂರ್ತಿ ಮಾತನಾಡಿ, ''ಸಿನಿಮಾ ಅಂದ ಮೇಲೆ ಹೊಡೆದಾಟ, ಆಕ್ಷನ್ ಸೀನ್ ಗಳು ಇದ್ದೇ ಇರುತ್ತವೆ. ರಫ್ ಅಂಡ್ ಟಫ್ ಇರುವ ಹುಡುಗ ಹಾಗೂ ತುಂಬಾ ಮುಗ್ಧವಾಗಿರುವ ಜೈನ ಧರ್ಮದ ಯುವತಿ ನಡುವೆ ಪ್ರೇಮಾಂಕುರವಾಗಿ ಕೊನೆಗೆ ಏನಾಗುತ್ತದೆ ಎಂಬುದನ್ನು ನೀವು ತೆರೆ ಮೇಲೆ ನೋಡಿ. ಆಗ ಗೊತ್ತಾಗುತ್ತೆ ನಾನು ಈಗ ಹೇಳಿದ್ದು ಏನು ಎಂಬುದು. ಸಿನಿಮಾ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ. ಜೂನ್ 24ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ವಿಕ್ರಮ್ ತಾರೆಯಾಗಿ ಬೆಳೆಯಲಿದ್ದಾರೆ. ಬ್ಯಾಂಕ್ಯಾಕ್, ರಾಜಸ್ತಾನ, ಕಾಶ್ಮೀರ, ಉಡುಪಿ ಸೇರಿದಂತೆ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ'' ಎಂದು ಹೇಳಿದರು.

ಆಕಾಂಕ್ಷಾ ಹೇಳಿದ್ದು ಏನು?

ಆಕಾಂಕ್ಷಾ ಹೇಳಿದ್ದು ಏನು?

ಚಿತ್ರದ ನಾಯಕಿ ಆಕಾಂಕ್ಷಾ ಶರ್ಮಾ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. 'ತ್ರಿವಿಕ್ರಮ' ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಜೊತೆ ನಟಿಸಿದ್ದೇನೆ, ತುಂಬಾ ಖುಷಿ ಆಗಿದೆ. ದಾವಣಗೆರೆಗೆ ಬಂದಿದ್ದೂ ತುಂಬಾ ಸಂತಸ ತಂದಿದೆ. ಚಿತ್ರಕ್ಕೆ ಸಪೋರ್ಟ್ ಮಾಡಿ. ಕುಟುಂಬ ಸಮೇತರಾಗಿ ಬಂದು ನೋಡುವಂಥ ಸಿನಿಮಾ. ಫ್ಯಾಮಿಲಿ ಜೊತೆ ಹೋಗಿ ಸಿನಿಮಾ ನೋಡಿ'' ಎಂದು ಮನವಿ ಮಾಡಿದರು. ಈ ವೇಳೆ ವಾಸುದೇವ, ಗುಡ್ಡಪ್ಪ, ಎಂ.ಮನು ಹಾಜರಿದ್ದರು.

More from Filmibeat

English summary
Ravichandran son Vikram starrer Trivikrama movie team visited Davangere for movie promotions. Movie team did promotions in Davangere colleges.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X