ಕನ್ನಡ ಚಿತ್ರರಂಗದ ವಿರುದ್ದ ಕೋಪಗೊಂಡ ಟ್ರೋಲ್ ಪೇಜ್ ಗಳು
ಒಂದು ಚಿತ್ರ ನಿರ್ಮಾಣ ಮಾಡುವಷ್ಟೇ ಮುಖ್ಯ ಸಿನಿಮಾವನ್ನ ಪ್ರಮೋಷನ್ ಮಾಡೋದು. ಸಿನಿಮಾ ನಿರ್ಮಾಣ ಮಾಡಿದ ನಂತರ ಇಂತಹ ಸಿನಿಮಾವೊಂದು ತೆರೆಗೆ ಬರುವುದಕ್ಕೆ ಸಿದ್ದವಾಗಿ ಎನ್ನುವ ವಿಚಾರವನ್ನ ಜನರಿಗೆ ಸೂಕ್ತ ರೀತಿಯಲ್ಲಿ ತಿಳಿಸಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳನ್ನ ಪ್ರಮೋಷನ್ ಮಾಡಲು ಟ್ರೋಲ್ ಪೇಜ್ ಗಳ ಸಹಾಯ ಪಡೆದುಕೊಳ್ಳುತ್ತಿದ್ದರು ಕನ್ನಡ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರು.
ಟ್ರೋಲ್ ಗಳ ಅತಿರೇಕತನವನ್ನ ನೋಡಿ ಬೆಂಗಳೂರಿನ ಪೊಲೀಸರು ಟ್ರೋಲ್ ಮಾಡೋ ಪುಂಡರಿಗೆ ಖಡಕ್ ಆಗಿ ವಾರ್ನಿಂಗ್ ನೀಡಿದ್ದರು. ಈ ವಿಚಾರವನ್ನ ಸಿನಿಮಾರಂಗದ ಕೆಲವು ಕಲಾವಿದರು ಸ್ವಾಗತ ಮಾಡಿದ್ದರು. ಇದನ್ನ ತಿಳಿದ ಟ್ರೋಲ್ ಪೇಜ್ ನವರು ಗರಂ ಆಗಿದ್ದಾರೆ. ಕನ್ನಡ ಕಲಾವಿದರು ಮತ್ತು ಚಿತ್ರರಂಗದ ವಿರುದ್ದ ಕೋಪಗೊಂಡು ಟ್ರೋಲ್ ಮಾಡಲು ಬೇರೆ ಹಾದಿ ಹಿಡಿದಿದ್ದಾರೆ.

ಕಲಾವಿದರ ವಿರುದ್ದ ಟ್ರೋಲ್ ಪೇಜ್ ಗರಂ
ಸಿನಿಮಾಗಳ ಹೆಸರು ಮತ್ತು ಕಲಾವಿದರನ್ನ ಬಳಸಿಕೊಂಡು ಟ್ರೋಲ್ ಮಾಡುತ್ತಿದ್ದ ಫೇಸ್ ಬುಕ್ ಪೇಜ್ ಗಳಿಗೆ ಪೊಲೀಸರು ಕಳೆದ ಒಂದು ವಾರದ ಹಿಂದೆ ಎಚ್ಚರಿಕೆ ನೀಡಿದ್ದರು. "ಸಿನಿಮಾ ಕಲಾವಿದರನ್ನ ಹಾಗೂ ರಾಜಕೀಯ ವ್ಯಕ್ತಿಗಳನ್ನ ಕೆಟ್ಟದಾಗಿ ಟ್ರೋಲ್ ಮಾಡುವುದು ತಪ್ಪು, ಇನ್ನು ಮುಂದೆ ಈ ರೀತಿಯ ಘಟನೆ ಆಗದಂತೆ ನೋಡಿಕೊಳ್ಳಿ ಇಲ್ಲವಾದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದರು. ಈ ನಿಯಮವನ್ನ ಚಿತ್ರರಂಗವೂ ಸ್ವಾಗತಿಸಿತ್ತು.

ನಮ್ಮ ಸಹಕಾರ ನಿಮಗಿಲ್ಲ
ಟ್ರೋಲ್ ಪೇಜ್ ಗಳ ಹಾವಳಿ ಕಡಿಮೆಯಾಗಬೇಕು ಎಂದಿದ್ದ ಕಲಾವಿದರ ವಿರುದ್ದ ಟ್ರೋಲ್ ಪೇಜ್ ನವರು ಸಿಟ್ಟಾಗಿದ್ದಾರೆ. "ನಾವು ನಿಮಗಾಗಿ ನಮ್ಮ ಸಮಯ ನೀಡಿದ್ದೇವೆ ಅದನ್ನೇ ನೀವು ತಪ್ಪಾಗಿ ಪರಿಗಣಿಸಿದರೆ ನಮ್ಮ ಸಹಕಾರ ನಿಮಗಿಲ್ಲ" ಎಂದಿದ್ದಾರೆ.

ತಮಿಳು-ತೆಲುಗು ಚಿತ್ರಕ್ಕೆ ಸಾಥ್ ನೀಡಿದ ಟ್ರೋಲ್
ಕನ್ನಡದ ಚಿತ್ರರಂಗದ ಕಲಾವಿದರು ಅತಿರೇಕ ಎನ್ನಿಸುವ ಟ್ರೋಲ್ ಮಾಡಬೇಡಿ ಅಂದ ತಕ್ಷಣವೇ ಟ್ರೋಲ್ ನವರು ಬೇರೆ ಕೆಲಸ ಶುರು ಮಾಡಿಕೊಂಡಿದ್ದಾರೆ. ತಮ್ಮ ಪೇಜ್ ಗಳಲ್ಲಿ ತಮಿಳು ಮತ್ತು ತೆಲುಗು ಚಿತ್ರಗಳನ್ನ ಪ್ರಚಾರ ಮಾಡಲು ಶುರು ಮಾಡಿಕೊಂಡಿದ್ದಾರೆ.

ಯಾರದ್ದೋ ತಪ್ಪಿಗೆ ಎಲ್ಲರೂ ಗುರಿ
ಟ್ರೋಲ್ ಮಾಡೋ ಎಲ್ಲಾ ಪೇಜ್ ಗಳು ಕೆಟ್ಟವು ಅಂತ ಹೇಳಲಾಗುವುದಿಲ್ಲ, ಅದೇ ರೀತಿ ಎಲ್ಲಾ ಪೇಜ್ ನವರು ಚೆನ್ನಾಗಿ ಸಿನಿಮಾ ಪ್ರಚಾರ ಮಾಡುತ್ತಾರೆ ಅಂತಾನೂ ಹೇಳಲು ಸಾಧ್ಯವಿಲ್ಲ. ಯಾವುದೇ ವಿಚಾರವಾಗಲಿ ಅತಿರೇಕ ತಲುಪದೇ ಇದ್ದರೆ ತುಂಬಾ ಒಳ್ಳೆಯದು ಅನ್ನೋದು ಸಿನಿಮಾ ಕಲಾವಿದರ ಮನವಿ.


Click it and Unblock the Notifications











