ಭಾರತದೆಲ್ಲೆಡೆ ಉಪ್ಪಿಯ 'ಟ್ರೋಲ್' ಹವಾ ಹೇಗಿದೆ ? ಕನ್ನಡದಲ್ಲಿ ಮಿಲಿಯನ್ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಎಷ್ಟು..?
ಟ್ರೋಲಿಗರನ್ನೇ ಟ್ರೋಲ್ ಮಾಡಿರುವ ಉಪೇಂದ್ರ ಅವರಿಗೆ ಕರುನಾಡಿನ ಪ್ರೀತಿ ಸಿಕ್ಕಿದೆ. ಹಾಡಲ್ಲಿ ಉಪೇಂದ್ರ ಹೇಳಿದಂತೆ 'ವಾಟ್ಸಾಪ್' ಗಳಲ್ಲಿ ಶೇರ್ ಕೂಡ ಆಗ್ತಿದೆ. ಆ ಕಾಲಕ್ಕೆ ಟ್ರೆಂಡ್ ಸೆಟರ್ ಅನಿಸಿಕೊಂಡ ರಿಯಲ್ ಸ್ಟಾರ್ ಹೆಸರು ಹಾಗೂ ಯುಐ ಸಿನಿಮಾ ಹೆಸರು ಎರಡು ಸಾಮಾಜಿಕ ಜಾಲತಾಣದಲ್ಲಿ 'ಟ್ರೆಂಡಿಂಗ್' ನಲ್ಲಿಯೂ ಇದೆ.
ಇನ್ನೂ ಯುಐ ಹೇಳಿ ಕೇಳಿ 'ಪ್ಯಾನ್ ಇಂಡಿಯಾ' ಸಿನಿಮಾ. ಹೀಗಾಗಿ ಕರುನಾಡಿನೆಲ್ಲೆಡೆ ವೈರಲ್ ಆದ ಈ ಹಾಡನ್ನ ಅಕ್ಕ ಪಕ್ಕದ ರಾಜ್ಯದಲ್ಲಿ, ಅವರ ಅವರ ಭಾಷೆಯಲ್ಲಿ ನೋಡಿರುವ ಸಿನಿ ಪ್ರೇಮಿಗಳ ಅಭಿಪ್ರಾಯ ಹೇಗಿದೆ ಎಂಬ ಕುತೂಹಲ ಹುಟ್ಟುವುದು ಸಹಜ. ಅಲ್ಲಿ ನಮ್ಮ ಕನ್ನಡ ಮಣ್ಣಿನಲ್ಲಿ ಹುಟ್ಟಿದ ಹಾಡಿನ 'ಹವಾ' ಹೇಗಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಹುಡುಕಲು ಯೂಟ್ಯೂಬ್ ನ ಕದ ತೆರೆದರೆ ಅಲ್ಲಿ ನಂಬರ್ ಗೇಮ್ ತುಂಬಾನೇ ಇಂಟ್ರೆಸ್ಟಿಂಗ್ ಆಗಿ ಕಾಣ್ಸುತ್ತೆ.

ಹೌದು.. ಇಲ್ಲಿ ಟಾಕ್ ಆಫ್ ದಿ ಸ್ಟೇಟ್ ಆಗಿರುವ ಟ್ರೋಲ್ ಹಾಡು ಪಕ್ಕದ ಆಂಧ್ರದಲ್ಲಿ ಹತ್ ಹತ್ರ ಏಳು ಲಕ್ಷ ವೀಕ್ಷಣೆ ಕಂಡಿದೆ. ನಾಲ್ಕನೇ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿಯೂ ಇದೆ. ಅದು 24 ಘಂಟೆಯಲ್ಲಿ. ಇನ್ನೂ ಉಪ್ಪಿ ಸಿನಿಮಾವನ್ನ ಆ ಕಾಲದಲ್ಲೇ ಹುಚ್ಚೆದ್ದು ನೋಡಿದವರಲ್ಲಿ ತೆಲುಗು ಸಿನಿಪ್ರಿಯರು ಇದ್ದಾರೆ. ಯುಐ ಚಿತ್ರಕ್ಕೆ ಆಂಧ್ರದಲ್ಲಿ ಗ್ರ್ಯಾಂಡ್ ವೆಲ್ ಕಂ ಸಿಗಲು ಇದು ಪ್ರಮುಖ ಕಾರಣ
ಆಂಧ್ರ ಹೊರತು ಪಡಿಸಿ. ತಮಿಳುನಾಡಿನಲ್ಲಿ ಈ ಹಾಡನ್ನ ನಾಲ್ಕು ಲಕ್ಷಕ್ಕೂ ಅಧಿಕ ಜನ ಕಣ್ತುಂಬಿಕೊಂಡಿದ್ದಾರೆ. ನಮ್ಮ ಉಪ್ಪಿಗೆ ಅಲ್ಲಿನ ಜನ ಉಘೇ ಉಘೇ ಅಂದಿದ್ದಾರೆ. ಮಲಯಾಳಂನಲ್ಲಿ ಸಂಖ್ಯೆ ಒಂದು ಲಕ್ಷದ ಗಡಿಯನ್ನ ದಾಟಿದೆ. ಹಾಗಂಥ ಮಲಯಾಳಂನಲ್ಲಿ ಪ್ರತಿಕ್ರಿಯೆ ನಿರಾಶಾದಾಯಕವಾಗಿಲ್ಲ. Slow & Steady ಆಗಿ ಹಾಡು ಅಲ್ಲಿನವರ ಗಮನ ಸೆಳೆಯುತ್ತಿದೆ.
ತೆಲುಗು, ತಮಿಳು ಹಾಗೂ ಮಲಯಾಳಂ ಹೊರತು ಪಡಿಸಿದರೆ, ಹಿಂದಿಯಲ್ಲಿ ಹಾಡು ಅಂದುಕೊಂಡಿದ್ದಕ್ಕಿಂತ ತುಸು ಹೆಚ್ಚೇ ಮೋಡಿಯನ್ನ ಮಾಡ್ತಿದೆ. 24 ಘಂಟೆಗಳಲ್ಲಿ ಹಿಂದಿಯಲ್ಲಿಯೂ ಐದೂವರೆ ಲಕ್ಷದ ಗಡಿಯನ್ನ ತಲುಪಿದೆ. 06ನೇ ಸ್ಥಾನದಲ್ಲಿ ಹಾಡು ಟ್ರೆಂಡಿಂಗ್ ನಲ್ಲಿಯೂ ಇದೆ. ಇನ್ನೂ ನಿಮಗೆ ಗೊತ್ತಿರಲಿ ಅಲ್ಲಿನವರಲ್ಲಿ ಬಹುತೇಕರು ಗಂಧದಗುಡಿಯ 'ಉಪ್ಪಿ'ನಕಾಯಿ ರುಚಿಯನ್ನ ಇನ್ನೂ ಅನುಭವಿಸಿಲ್ಲ. ಉಪ್ಪಿಯ ಮಾಸ್ಟರ್ ಪೀಸ್ ಸಿನಿಮಾಗಳನ್ನ ನೋಡಿಲ್ಲ. ಈ ಅರ್ಥದಲ್ಲಿ ಹಾಡಿಗೆ ಸಿಕ್ತಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ.

ಒಟ್ಟಿನಲ್ಲಿ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಯುಐ ಚಿತ್ರದ ಮೊದಲ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಹತ್ತು ಲಕ್ಷದ ಗಡಿ ದಾಟಿ ಮುನ್ನುಗ್ಗುತ್ತಿದೆ. ಬೇರೆ ಭಾಷೆಯಲ್ಲಿಯೂ ನಿಧಾನ ಅನಿಸಿದರೂ ಹಾಡು ಎಲ್ಲರ ಗಮನ ಸೆಳೆಯುತ್ತಿದೆ. ಯು ಐ ಸಿನಿಮಾವನ್ನ ನೋಡಬೇಕೆಂಬ ಆಸೆ ಬೇರೆ ಭಾಷೆಯ ಸಿನಿಪ್ರೇಮಿಗಳಲ್ಲಿಯೂ ಚಿಗುರೊಡೆಯುತ್ತಿದೆ.


Click it and Unblock the Notifications











