ನಾಚಿಕೆಯಾಗ್ಬೇಕು ದೇವರಕೊಂಡಗೆ: ರಶ್ಮಿಕಾ ಕೇಳಿ ಕೇಳಿ ಪಡೆದ ಸೌಭಾಗ್ಯ ಇದು

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ......ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಹೆಚ್ಚು ಸುದ್ದಿಯಲ್ಲಿರುವ ಜೋಡಿ. 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಅಂತಹ ಎರಡು ಸೂಪರ್ ಹಿಟ್ ಸಿನಿಮಾ ಮಾಡಿ ಬೆಸ್ಟ್ ಪೇರ್ ಎನಿಸಿಕೊಂಡಿರುವ ಜೋಡಿ.

ಆದರೆ, ಸಿನಿಮಾಗಿಂತ ಕೆಲವು ಬೇಡವಾದ ವಿಚಾರಗಳಿಗೆ ಈ ಜೋಡಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಎರಡೂ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯಕ್ಕೆ ದೊಡ್ಡ ಮಟ್ಟದಲ್ಲಿ ಹೆಡ್ ಲೈನ್ ಆಗಿದ್ದರು. ಎಂಗೇಜ್ ಮೆಂಟ್ ಬ್ರೇಕ್ ಅಪ್ ಆದ ಬಳಿಕ ದೇವರಕೊಂಡ ಜೊತೆ ರಶ್ಮಿಕಾ ಹೆಚ್ಚು ಆತ್ಮೀಯವಾಗಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.

ಇದೀಗ, ಈ ಆತ್ಮೀಯತೆ ಇನ್ನೊಂದು ಹಂತಕ್ಕೆ ಹೋಗಿದೆ. ಟಿವಿ ಸಂದರ್ಶನವೊಂದರಲ್ಲಿ ದೇವರಕೊಂಡ ಅವರು, ಎಲ್ಲೆ ಮೀರಿ ವರ್ತಿಸಿದ್ದಾರೆ. ಇಬ್ಬರು ನಡುವೆ ಕ್ಲೋಸ್ ಫ್ರೆಂಡ್ ಷಿಪ್ ಇದ್ದರೂ ಸಾರ್ವಜನಿಕ ಶೋನಲ್ಲಿ ಈ ರೀತಿ ಮಾಡಿದ್ದು ಈಗ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಅಷ್ಟಕ್ಕೂ, ಆ ಟಿವಿ ಸಂದರ್ಶನದಲ್ಲಿ ಏನು ನಡೆಯಿತು? ಮುಂದೆ ಓದಿ....

ಸಂದರ್ಶನದಲ್ಲಿ ರಶ್ಮಿಕಾ-ವಿಜಯ್ ಭಾಗಿ

ಸಂದರ್ಶನದಲ್ಲಿ ರಶ್ಮಿಕಾ-ವಿಜಯ್ ಭಾಗಿ

ಜುಲೈ 27 ರಂದು 'ಜೀ ಸಿನಿಮಾಲು' ಯೂಟ್ಯೂಬ್ ನಲ್ಲಿ ಅಪ್ ಲೌಡ್ ಆಗಿರುವ 'ಡಿಯರ್ ಕಾಮ್ರೇಡ್' ಚಿತ್ರದ ವಿಶೇಷ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದರು. ಈ ವೇಳೆ ವಿಜಯ್ ದೇವರಕೊಂಡ ಅವರು ನಡೆದುಕೊಂಡ ರೀತಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆ ದೃಶ್ಯ ನೋಡಿ ರಶ್ಮಿಕಾ ಅವರ ಬಗ್ಗೆಯೂ ಕನ್ನಡಿಗರು ಟ್ರೋಲ್ ಮಾಡ್ತಿದ್ದಾರೆ.

ರಶ್ಮಿಕಾ ಮೇಲೆ ಕಾಲು ಹಾಕಿದ ವಿಜಯ್

ರಶ್ಮಿಕಾ ಮೇಲೆ ಕಾಲು ಹಾಕಿದ ವಿಜಯ್

ಗೀತಾ ನಂತರ ಲಿಲ್ಲಿ ಪಾತ್ರ ಹೇಗೆ ಎಂದು ನಿರೂಪಕಿ ಕೇಳಿದ ಪ್ರಶ್ನೆ ಉತ್ತರಿಸಿದ ರಶ್ಮಿಕಾ, ''ಜೀವನ ಅಂದ್ಮೇಲೆ ಎಲ್ಲ ಪಾತ್ರವೂ ಮಾಡಬೇಕು. ಗೀತಾ, ಲಿಲ್ಲಿ ಹಾಗೂ ಈ ರೀತಿ ತಾತನ ಜೊತೆಯೂ ನಟಿಸಬೇಕು (ದೇವರಕೊಂಡ ಅವರನ್ನ ತೋರಿಸಿ) ಎಂದರು. ತನ್ನನ್ನು 'ತಾತ' ಎಂದು ರಶ್ಮಿಕಾ ಹೇಳಿದ್ದನ್ನ ಕೇಳಿದ ದೇವರಕೊಂಡ, ರಶ್ಮಿಕಾ ಅವರ ಮೇಲೆ ತನ್ನ ಕಾಲು ಎತ್ತಿ ಹಾಕಿ ಅಗೌರವ ತೋರಿದ್ದಾರೆ.

ನನ್ನ ಕಾಲು ಒತ್ತು ಎಂದು ಕೇಳಿದ್ರು

ನನ್ನ ಕಾಲು ಒತ್ತು ಎಂದು ಕೇಳಿದ್ರು

ರಶ್ಮಿಕಾ ತಾತ ಎಂದು ಹೇಳಿದ್ದಕ್ಕೆ, ಸರಿ ತಾತನ ಕಾಲು ಒತ್ತು ಎಂದು ಕಾಲು ಎತ್ತಿ ರಶ್ಮಿಕಾ ಮೇಲೆ ಹಾಕಿದರು. ರಶ್ಮಿಕಾ ಅವರೇ ಸ್ವತಃ ವಿಜಯ್ ಅವರ ಕಾಲನ್ನ ಕೆಳಗೆ ಇಳಿಸಿದರು. ಬಳಿಕ ಮತ್ತೊಮ್ಮೆ ಅದೇ ರೀತಿ ರಶ್ಮಿಕಾ ಕಾಲ ಮೇಲೆ ತನ್ನ ಕಾಲು ಎತ್ತಿ ಹಾಕಿ ಅಶಿಸ್ತು ಪ್ರದರ್ಶಿಸಿದ್ದಾರೆ. ಆಗಲೂ ರಶ್ಮಿಕಾ ನಗುನಗುತ್ತಲೇ ವಿಜಯ್ ಅವರ ಕಾಲನ್ನ ಕೆಳಗೆ ಇಳಿಸಿದರು.

ಟಿವಿ ಶೋ ಒಂದರಲ್ಲಿ ಮಾಡಿದ್ದು ತಪ್ಪು

ಟಿವಿ ಶೋ ಒಂದರಲ್ಲಿ ಮಾಡಿದ್ದು ತಪ್ಪು

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸ್ನೇಹಿತರಿರಬಹುದು. ತುಂಬಾ ಆತ್ಮೀಯರಿರಬಹುದು. ಸಾರ್ವಜನಿಕ ಶೋ ಒಂದರಲ್ಲಿ ಕುಳಿತು ಒಂದು ಸಿನಿಮಾ ಬಗ್ಗೆ ಮಾತನಾಡುವಾಗ ಈ ರೀತಿಯಾದ ವರ್ತನೆ ಸರಿಯಿಲ್ಲ. ಇದು ನಿಜಕ್ಕೂ ಖಂಡನೀಯ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ರಶ್ಮಿಕಾ ಕೇಳಿ ಕೇಳಿ ಪಡೆದ ಸೌಭಾಗ್ಯ

ರಶ್ಮಿಕಾ ಕೇಳಿ ಕೇಳಿ ಪಡೆದ ಸೌಭಾಗ್ಯ

ರಶ್ಮಿಕಾ ಮಂದಣ್ಣ ಅವರು ನೀಡಿದ ಸಲಿಗೆಯಿಂದ ವಿಜಯ್ ದೇವರಕೊಂಡ ಅವರು ಈ ರೀತಿ ನಡೆದುಕೊಂಡಿದ್ದಾರೆ. ಇದು ರಶ್ಮಿಕಾ ಅವರು ಕೇಳಿ ಕೇಳಿ ಪಡೆದುಕೊಂಡ ಸೌಭಾಗ್ಯ ಎಂದು ಕಿಡಿಕಾರುತ್ತಿರುವ ಸೋಶಿಯಲ್ ಮೀಡಿಯಾದ ಮಂದಿ, ಕೊಡಗಿನ ಕುವರಿ ವಿರುದ್ಧವೂ ನಿಂದಿಸುತ್ತಿದ್ದಾರೆ. ರಶ್ಮಿಕಾ ಅವರ ಬೆಳವಣಿಗೆ ಬಗ್ಗೆ ಖುಷಿ ಇದೆ. ಆದರೆ, ಈ ರೀತಿಯಾದ ಬೆಳವಣಿಗೆಯನ್ನ ಬಹುಶಃ ಅವರ ಅಭಿಮಾನಿಗಳು ಕೂಡ ಸಹಿಸಿಲ್ಲ.

More from Filmibeat

English summary
Telugu actor vijay devarakonda and rashmika mandanna's interview went viral. Because devarakonda done mistake in that interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X