»   » ರಾಜಕೀಯಕ್ಕೆ ಬರುತ್ತಿರುವ ಉಪೇಂದ್ರಗೆ ಸಿಕ್ಕಿದೆ ಭರ್ಜರಿ ಬೆಂಬಲ

ರಾಜಕೀಯಕ್ಕೆ ಬರುತ್ತಿರುವ ಉಪೇಂದ್ರಗೆ ಸಿಕ್ಕಿದೆ ಭರ್ಜರಿ ಬೆಂಬಲ

Posted By:
Subscribe to Filmibeat Kannada

ನಟ ಉಪೇಂದ್ರ ರಾಜಕೀಯಕ್ಕೆ ಬರುತ್ತಿರುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಅವರಿಗೆ ಭರ್ಜರಿ ಬೆಂಬಲ ಸಿಗುತ್ತಿದೆ. ಅನೇಕರು ವಿಶೇಷವಾದ ಟ್ರೋಲ್ ಗಳ ಮೂಲಕ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಸ್ವಾಗತ ಕೋರಿದ್ದಾರೆ.

ಉಪೇಂದ್ರ ರಾಜಕೀಯಕ್ಕೆ ಬರಬೇಕು ಎನ್ನುವುದು ಅನೇಕ ಅಭಿಮಾನಿಗಳ ಆಸೆಯಾಗಿತ್ತು. ಅದೇ ರೀತಿ ಉಪೇಂದ್ರ ರಾಜಕೀಯಕ್ಕೆ ಬಂದೇ ಬರುತ್ತಾರೆ ಎಂದು ಸುದ್ದಿ ಕೂಡ ಕೇಳಿ ಬಂದಿದೆ. ಸದ್ಯ ಉಪ್ಪಿ ರಾಜಕೀಯಕ್ಕೆ ಬರುವ ಸುದ್ದಿ ಕೇಳಿದ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂದೆ ಓದಿ....

'CM'

'CM' ಅಂದರೆ ಕಾಮನ್ ಮ್ಯಾನ್ ಅಂತ ಹೇಳಿದ ಬುದ್ದಿವಂತ ಇವರು. ಅಂತ ಹೇಳಿ ಉಪೇಂದ್ರ ಅವರ ರಾಜಕೀಯ ಎಂಟ್ರಿಗೆ ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಈ ರೀತಿಯ ನಾಯಕರು ಬೇಕು

ಉಪೇಂದ್ರ ಅವರ ರೀತಿಯ ನಾಯಕರು ರಾಜಕೀಯಕ್ಕೆ ಬೇಕು ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ನಮ್ ಕಥೆ ಮುಗಿಯಿತು

'ಉಗ್ರಂ' ಸಿನಿಮಾದ ಸ್ಟೈಲ್ ನಲ್ಲಿ ಉಪೇಂದ್ರ ರಾಜಕೀಯಕ್ಕೆ ಬರುತ್ತಿದ್ದಾರೆ. ಇನ್ನು ಮುಂದೆ ಭ್ರಷ್ಟಾಚಾರ ಮಾಡುವವರ ಕಥೆ ಮುಗಿಯಿತು ಅಂತ ಉಪ್ಪಿ ಅವರ ಪೊಲಿಟಿಕಲ್ ಎಂಟ್ರಿಯನ್ನು ಫ್ಯಾನ್ಸ್ ವರ್ಣಿಸುತ್ತಿದ್ದಾರೆ.

'ಓಂಕಾರ'

ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ 'ಓಂಕಾರ' ಹಾಕುವುದು ಒಂದು ಬಾಕಿ ಇದೆ. ಎಂದು ಅಭಿಮಾನಿಗಳು ಉಪ್ಪಿಗೆ ಶುಭ ಕೋರಿದ್ದಾರೆ.

ದೇಶಕ್ಕೆ ನರೇಂದ್ರ, ರಾಜ್ಯಕ್ಕೆ ಉಪೇಂದ್ರ

ದೇಶಕ್ಕೆ ನರೇಂದ್ರ ಮೋದಿ ರೀತಿ ರಾಜ್ಯಕ್ಕೆ ಉಪೇಂದ್ರ ಆಗಬೇಕು ಎನ್ನುವ ಆಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

English summary
Trolls about Real Star Upendra politics Entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada