ವಾರಕ್ಕೊಬ್ಬರ ಹೆಸರು ; ಸುಮಾರು ಜನರ ಜೊತೆ ನನ್ನ ಎರಡನೇ ಮದುವೆ ಮಾಡಿಸಿದ್ದಾರೆ- ಮೇಘನಾ ರಾಜ್
ನಿಜಾ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ.
ಯಾಕೆಂದರೆ ಹೀಗೆ ಹರಿದಾಡುವ ಸುದ್ದಿಗಳಲ್ಲಿ ಅರ್ಧಕ್ಕೆ ಅರ್ಧ ಸುಳ್ಳಾಗಿರುತ್ತಾವೆ. ಇನ್ನೂ ಕೆಲ ಒಮ್ಮೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಉದ್ದೇಶದಿಂದಲೇ ಕೆಲವರು ''ಫೇಕ್ ನ್ಯೂಸ್''ಗಳನ್ನು ತೇಲಿ ಬಿಡುತ್ತಾರೆ. ಈ ಮೂಲಕ ತಮ್ಮ ವಿಕೃತ ಮನಸ್ಥಿತಿಯ ಪ್ರದರ್ಶನ ಮಾಡುತ್ತಾರೆ.

2024ರಲ್ಲಿ ಗೃಹ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2021 ರಿಂದ 2024 ವರೆಗೆ ರಾಜ್ಯದಲ್ಲಿ ಒಟ್ಟು 247 ಪ್ರಕರಣ ದಾಖಲಾಗಿವೆ. ''ಸುಳ್ಳು ಸುದ್ದಿ'' ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುತ್ತೆ ಎನ್ನುವ ಅರಿವು ಇದ್ದರು ಕೂಡ ಲೈಕ್ಸ್ .. ಶೇರ್‌ಗಳ ಹುಚ್ಚಿಗೆ ಬಿದ್ದ ಅನೇಕರು ''ಸುಳ್ಳು ಸುದ್ದಿ''ಯನ್ನು ಬರೆಯುತ್ತಾರೆ. ಹಂಚಿಕೊಳ್ಳುತ್ತಾರೆ.
ಈ ಹಿನ್ನೆಲೆ .. ಇದೆಲ್ಲವೂ ಮಾಮೂಲು ಎಂದುಕೊಂಡ ಅನೇಕರು ಸುಮ್ಮನಾಗುತ್ತಾರೆ. ಒಂದರ್ಥದಲ್ಲಿ ಹಲವರಿಗೆ ಈ ಸುಳ್ಳು ಸುದ್ದಿಗಳನ್ನು ಕೇಳಿ ಅಭ್ಯಾಸವಾಗಿ ಬಿಟ್ಟಿರುತ್ತೆ. ಉದಾಹರಣೆಗೆ ಮೇಘನಾ ರಾಜ್.
ಹೌದು, ಎಲ್ಲರಿಗೆ ಗೊತ್ತಿರುವಂತೆ ಮೇಘನಾ ರಾಜ್ ಅವರ ಎರಡನೇ ಮದುವೆ ಕುರಿತು ಇಲ್ಲಿಯವರೆಗೆ ಹಲವಾರು ಸುದ್ದಿಗಳನ್ನು ಹಲವರು ಹಬ್ಬಿಸಿದ್ದಾರೆ. ಖುದ್ದು ಮೇಘನಾ ರಾಜ್ ಇದೆಲ್ಲವೂ ಸುಳ್ಳು ಎಂದು ಹಿಂದೆ ಹಲವಾರು ಬಾರಿ ಹೇಳಿದರು ಕೂಡ ಮೇಘನಾ ರಾಜ್ ಅವರ ಎರಡನೇ ಮದುವೆ ಕುರಿತು ಚರ್ಚೆ ಇನ್ನು ಕಡಿಮೆಯಾಗಿಲ್ಲ. ನಿಂತಿಲ್ಲ. ಹೀಗಾಗಿಯೇ ತಮ್ಮ ವ್ಯೆಯಕ್ತಿಕ ಬದುಕಿನ ಕುರಿತು ದಿನ ನಿತ್ಯ ಹರಿದಾಡುವ ಈ ಸುದ್ದಿಗಳ ಕುರಿತು ಈಗ ಮೇಘನಾ ರಾಜ್ ತಮಾಷೆ ಮಾಡಲು ಶುರುಮಾಡಿದ್ದಾರೆ.
ಹೌದು, ತಮ್ಮ ಬಗ್ಗೆ ಮಾಡಲಾಗುವ ಟ್ರೋಲ್‌ಗಳ ಬಗ್ಗೆ.. ತಮ್ಮ ಎರಡನೇ ಮದುವೆ ಕುರಿತು ಹಬ್ಬಿಸಲಾಗುವ ವದಂತಿಗಳ ಕುರಿತು ಮೇಘನಾ ರಾಜ್ ''ಮಿರ್ಚಿ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ಮೇಘನಾ ರಾಜ್

ನನ್ನ ಬಗ್ಗೆ ಡಿಸೈನ್ ಡಿಸೈನ್ ಆಗಿ ಹಲವರು ಟ್ರೋಲ್ ಮಾಡುತ್ತಾರೆ ಎಂದು ಹೇಳಿದ್ಧಾರೆ. ಮುಂದುವರೆದು ಇಲ್ಲಿವರೆಗೆ ನನ್ನ ಮದುವೆಯನ್ನು ತುಂಬಾ ಜನರ ಜೊತೆ ಮಾಡಿಸಿದ್ದಾರೆ ಎಂದು ಹೇಳಿರುವ ಮೇಘನಾ ರಾಜ್ ಒಂದೊಂದು ವಾರ ಒಬ್ಬೊಬ್ಬರ ಹೆಸರು ಗೊತ್ತಾ. ನಾನು ಅದೆಲ್ಲ ನೋಡಿ ಇಷ್ಟೊಂದು ಪ್ರಪೋಸಲ್ ನನಗೆ ಬಂದಿಲ್ವಲ್ಲಾ ಅಂತ ನಾನೇ ಅಂದುಕೊಳ್ಳುತ್ತಿದ್ದೆ ಎಂದು ತಮಾಷೆ ಮಾಡಿದ್ದಾರೆ.
ಇನ್ನು. ನಾನು ಗರ್ಭಿಣಿಯಾದಾಗ ನನಗೆ ಇನ್ನೂ ಹೆರಿಗೆ ಆಗಿರಲಿಲ್ಲ. ಆಗಲೇ ನನಗೆ ಅವಳಿ ಜವಳಿ ಮಕ್ಕಳಾಗುತ್ತೆ ಎಂದು ಸುದ್ದಿ ಹಬ್ಬಿಸಿದರು, ಟ್ರೋಲ್ ಮಾಡುವವರೇ ಡಿಸೈಡ್ ಮಾಡಿದ್ದರು ಎಂದು ಹೇಳಿರುವ ಮೇಘನಾ ರಾಜ್ ಇಷ್ಟೇ ಅಲ್ಲ ನನ್ನ ಮಕ್ಕಳಿಗೆ ಅಂಜನ್ ಮತ್ತು ಅಂಜನಿ ಎಂದು ಹೆಸರನ್ನು ಕೂಡ ಅವರೇ ಇಟ್ಟಿದ್ದರು ಎಂದು ಕೂಡ ಹೇಳಿದ್ದಾರೆ.
ಇನ್ನುಳಿದಂತೆ ಮೇಘನಾ ರಾಜ್ ಸದ್ಯ ''ಸಂಗೀತಾ ಬಾರ್ & ರೆಸ್ಟೋರೆಂಟ್'' ಚಿತ್ರವನ್ನು ಮಾಡಿದ್ಧಾರೆ. ಕೋಮಲ್ ನಾಯಕನಾಗಿರುವ ಈ ಚಿತ್ರಕ್ಕೆ ಸಂದೇಶ್ ಶೆಟ್ಟಿ ನಿರ್ದೇಶನ ಇದೆ. ಇನ್ನು ಈ ಬಾರಿ ಮೇಘನಾ ರಾಜ್ ''ಬಿಗ್ ಬಾಸ್'' ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿಯನ್ನು ಕೂಡ ಕೆಲವರು ಹಬ್ಬಿಸಿದ್ದರು. ಇತ್ತೀಚೆಗೆ ಈ ವಿಚಾರದ ಕುರಿತು ಕೂಡ ಪ್ರತಿಕ್ರಿಯೆ ನೀಡಿದ್ದ ಮೇಘನಾ ನಾನು ''ಬಿಗ್ ಬಾಸ್''ಗೆ ಹೋಗ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.


Click it and Unblock the Notifications