»   » ಅಪ್ರತಿಮ ನಟ ಕಮಲ್ ಹಾಸನ್ ನೋವು ಸಿಟ್ಟು ಯಾರ ಮೇಲೆ?

ಅಪ್ರತಿಮ ನಟ ಕಮಲ್ ಹಾಸನ್ ನೋವು ಸಿಟ್ಟು ಯಾರ ಮೇಲೆ?

Posted By:
Subscribe to Filmibeat Kannada

ಬಹುಭಾಷಾ ನಟ, ಸಕಲ ಕಲಾವಲ್ಲಭನ್ ಕಮಲ್ ಹಾಸನ್ ತನ್ನ ಮಹತ್ವಾಕಾಂಕ್ಷೆಯ 'ಉತ್ತಮ ವಿಲನ್' ಚಿತ್ರ ಬಿಡುಗಡೆಗೆ ಮುನ್ನ ಅದ್ಯಾಕೋ ತಮಿಳು ಚಿತ್ರೋದ್ಯಮದ ಬಗ್ಗೆ ನೋವಿನ ಮಾತನ್ನಾಡಿದ್ದಾರೆ.

ಕಮಲ್ ಈ ನೋವಿನ ಹಿಂದೆ ಇರುವ ಕಾರಣ ಹಲವಾರು. ಕಮಲ್ ಹಾಸನ್ ಚಿತ್ರಗಳಿಗೂ ವಿವಾದಕ್ಕೆ ಬಿಡಿಸಲಾರದ ನಂಟು. ಚಿತ್ರದ ಶೀರ್ಷಿಕೆಯಿಂದ ಹಿಡಿದು ಚಿತ್ರಕಥೆಗಳವರೆಗೆ ಕಮಲ್ ಚಿತ್ರಗಳು ಏನಾದರೂ ಕಾಂಟ್ರೋವರ್ಸಿಯಲ್ಲಿ ಸಿಲುಕುತ್ತಿರುವುದು ಕಮಲ್ ನೋವಿಗೆ ಕಾರಣ.

ಉತ್ತಮ ವಿಲನ್ ಚಿತ್ರ ಬಿಡುಗಡೆಗೆ ಮುನ್ನ ಕಮಲ್ ಹಾಸನ್, ನನ್ನನ್ನು ಚಿತ್ರೋದ್ಯಮದಲ್ಲಿ ಸುಖಾಸುಮ್ಮನೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಂಗ್ಲ ದೈನಿಕಗೆ ನೀಡಿದ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. (ಉತ್ತಮ ವಿಲನ್ ಕನ್ನಡಕ್ಕೆ ರೀಮೇಕ್ ಆಗುತ್ತಾ)

ಭಾರತೀಯ ಚಿತ್ರರಂಗದ ಕೆಲವೇ ಕೆಲವು ಬಹುಭಾಷಾ ನಟರಲ್ಲಿ ಪ್ರಮುಖರಾದ, ಅಪ್ರತಿಮ ಕಲಾವಿದ ಕಮಲ್ ಹಾಸನ್ ಪ್ರಮುಖ ಭೂಮಿಕೆಯಲ್ಲಿರುವ, ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್ ಚಿತ್ರದ ತೆಲುಗು ಆವೃತ್ತಿ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ.

ಕಮಲ್ ಲೇಟೆಸ್ಟ್ ವಿವಾದ

ತಮಿಳು ಚಿತ್ರೋದ್ಯಮದಲ್ಲಿ ಏನಾದರೂ ಕಾರಣ ಹುಡುಕಿ ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಇದು ನಡೆದುಕೊಂಡು ಬರುತ್ತಲೇ ಇದೆ. ಇದನ್ನೆಲ್ಲಾ ಎದುರಿಸಿ ನನ್ನ ಸಿನಿಮಾ ಬದುಕು ಮುಂದುವರಿಯುತ್ತಲೇ ಇದೆ - ಕಮಲ್ ಹಾಸನ್

ಪಾಪನಾಶನಂ

ನನ್ನ ಪಾಪನಾಶನಂ ಚಿತ್ರದ ವಿವಾದ ಕಳೆದ ವಾರದ ವರೆಗೂ ಕೋರ್ಟಿನಲ್ಲಿತ್ತು. ವಿವಾದದಿಂದ ಈಗ ಹೊರ ಬಂದಿದ್ದೇವೆ. ಈ ಚಿತ್ರದ ವಿರುದ್ದ ಕೇಸ್ ಹಾಕಿದವರು ಯಾರು ಎಂದು ನಮಗೆ ತಿಳಿದಿದೆ - ಕಮಲ್ ಹಾಸನ್.

ಮುಂಬೈ ಎಕ್ಸ್ ಪ್ರೆಸ್

ನನ್ನ ಚಿತ್ರವೊಂದಕ್ಕೆ ಮುಂಬೈ ಎಕ್ಸ್ ಪ್ರೆಸ್ ಎಂದು ಶೀರ್ಷಿಕೆ ಇಟ್ಟಿದ್ದಕ್ಕೂ ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ತಮಿಳು ಹೆಸರು ಇಟ್ಟಿಲ್ಲಾ ಎಂದು ವಿವಾದ ಹುಟ್ಟುಹಾಕಿದರು, ಮುಂಬೈಗೆ ತಮಿಳಿನಲ್ಲಿ ಏನು ಹೆಸರು ಇಡಲು ಸಾಧ್ಯ?

ಸಾಂಡಿಯಾರ್

ಈ ಮೇಲಿನ ಚಿತ್ರದ ಶೀರ್ಷಿಕೆಗೂ ತಕರಾರು ಎತ್ತಿದರು. ಕೆಲವು ತಿಂಗಳ ಹಿಂದೆ, ಬೇರೆ ನಾಯಕನೊಬ್ಬ ಪ್ರಮುಖ ಭೂಮಿಕೆಯಲ್ಲಿ ಈ ಚಿತ್ರ ಇದೇ ಹೆಸರಿನಲ್ಲಿ ಬಿಡುಗಡೆಯಾಯಿತು. (ನಾಯಕಂ, ಪಾಂಡಿತುರೈ, ಕಾಯಲ್ ಪ್ರಮುಖ ಭೂಮಿಕೆಯಲ್ಲಿದ್ದಾರೆ)

ವಿಶ್ವರೂಪಂ

ದೇಶಾದ್ಯಂತ ಭಾರೀ ವಿವಾದ ಹುಟ್ಟುಹಾಕಿದ ಚಿತ್ರ. ಮುಸ್ಲಿಂ ಸಂಘಟನೆಗಳ ತೀವ್ರ ಟೀಕೆಗೆ ಗುರಿಯಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿತ್ತು. ಚಿತ್ರದ ವಿವಾದ ತಾರಕಕ್ಕೇರಿದ್ದಾಗ ಬಾಲಿವುಡ್ ಸಹಿತ ಚಿತ್ರೋದ್ಯಮದ ಹೆಚ್ಚಿನ ಎಲ್ಲಾ ಕಲಾವಿದರು ಕಮಲ್ ಹಾಸನ್ ಪರ ನಿಂತಿದ್ದು ವಿಶೇಷ.

English summary
Trouble controversies always follows me, legendary actor and filmmaker Kamal Haasan has expressed his displeasure about the film industry. He says that he is being targeted unnecessarily. He is the main character in Uttama Villain directed by Ramesh Arvind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada