ಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ ಎಂದ ವಿಜಯಲಕ್ಷ್ಮಿ ದರ್ಶನ್!
ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ಹಾಗೂ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣ ಉಂಟು ಮಾಡಿದ ನೋವಿನಿಂದ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ತಮ್ಮ ಅಭಿಮಾನಿಗಳಿಗೆ ಮನೆಯ ಬಳಿಯೇ ಹುಟ್ಟುಹಬ್ಬದಂದ ದರ್ಶನ್ನ ನೀಡಿದ್ದರು.
ಮನೆ ಮುಂದೆ ಜಮಾಯಿಸಿದ ಸಹಸ್ರಾರು ಅಭಿಮಾನಿಗಳು ಸಾಲು ಸಾಲಾಗಿ ತಮ್ಮ ನೆಚ್ಚಿನ ನಟನ ಕೈ ಕುಲುಕಿ ಹುಟ್ಟುಹಬ್ಬದ ಶುಭ ಕೋರಿದರು. ಒಂದೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಿ ಖುಷಿಪಟ್ಟರೆ, ದರ್ಶನ್ ಮುಂದಿನ ಸಿನಿಮಾಗಳ ನಿರ್ಮಾಪಕರು ಆ ಚಿತ್ರಗಳ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಪ್‌ಡೇಟ್ ನೀಡಿದರು.
ಹೀಗೆ ಹಲವು ಖುಷಿಗಳಿಗೆ ಕಾರಣವಾಗಿದ್ದ ದರ್ಶನ್ ಹುಟ್ಟುಹಬ್ಬ ದಿನ ಕಳೆದ ನಂತರ ಪುಟ್ಟದೊಂದು ವಿವಾದ ಹಾಗೂ ಆಕ್ರೋಶಕ್ಕೂ ಸಹ ಕಾರಣವಾಗಿದೆ. ಹೌದು, ಕಿರುತೆರೆ ನಟಿ ಮೇಘಾ ಶೆಟ್ಟಿ ಹಾಗೂ ಪವಿತ್ರ ಗೌಡ ಸೇರಿದಂತೆ ಹಲವರು ದರ್ಶನ್ ಅವರ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿದ್ದರು. ಈ ಸಂಭ್ರಮಾಚರಣೆಯ ವಿಡಿಯೊವನ್ನೂ ಸಹ ಹಂಚಿಕೊಂಡಿದ್ದ ಮೇಘಾ ಶೆಟ್ಟಿ ಬೃಂದಾವನ ಚಿತ್ರದ 'ಹಾರ್ಟಲ್ಲಿರೋ ಹಾರ್ಮೋನಿಯಂ' ಹಾಡನ್ನು ಬಳಸಿ ಪೋಸ್ಟ್ ಹಾಕಿದ್ದರು. ಈ ವಿಡಿಯೊ ವಿರುದ್ಧ ದರ್ಶನ್ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್ ಕಿಡಿಕಾರಿದ್ದರು. ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿದ್ದ ವಿಜಯಲಕ್ಷ್ಮಿ ದರ್ಶನ್ ಇಂತಹ ವಿಡಿಯೊಗಳನ್ನು ಹಂಚಿಕೊಳ್ಳಬೇಡಿ ಎಂದು ಬರೆದುಕೊಂಡು ನೇರವಾಗಿ ಮೇಘಾ ಶೆಟ್ಟಿಗೆ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಸದ್ಯ ಎಲ್ಲರ ಚಿತ್ತ ವಿಜಯಲಕ್ಷ್ಮಿ ದರ್ಶನ್ ಇನ್ಸ್ಟಾಗ್ರಾಮ್ ಖಾತೆ ಮೇಲಿದ್ದು, ಪ್ರತಿ ಸ್ಟೋರಿಯನ್ನೂ ಸಹ ಹಲವು ಸಿನಿ ರಸಿಕರು ಗಮನಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ವಿಜಯಲಕ್ಷ್ಮಿ ದರ್ಶನ್ ಹಾಕಿರುವ ಸ್ಟೋರಿಯೊಂದು ನೆಟ್ಟಿಗರ ಗಮನ ಸೆಳೆದಿದೆ.

ಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ
ಹೌದು, ವಿಜಯಲಕ್ಷ್ಮಿ ದರ್ಶನ್ "ಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ, ಅದನ್ನು ಸೋಲಲು ಬಿಡಿ, ಅದನ್ನು ಅದೇ ರಕ್ಷಿಸಿಕೊಳ್ಳಲಿದೆ" ಎಂದು ಬರೆದಿರುವ ಸಾಲುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸತ್ಯ ಯಾವತ್ತಿಗೂ ಸೋಲುವುದಿಲ್ಲ, ಸಾಯುವುದಿಲ್ಲ, ಅದಕ್ಕೆ ರಕ್ಷಣೆ ಬೇಕಾಗಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ತಿಳಿಸಿದ್ದು, ಈ ಸ್ಟೋರಿ ಬಗ್ಗೆ ಸದ್ಯ ಚರ್ಚೆ ಜೋರಾಗಿದೆ.

ಮೇಘಾ ಶೆಟ್ಟಿಗೆ ಚಾಟಿ ಬೀಸಿದ ಡಿ ಫ್ಯಾನ್ಸ್
ಇನ್ನು ಈ ಎಲ್ಲಾ ವಿದ್ಯಾಮಾನಗಳನ್ನು ಗಮನಿಸಿರುವ ದರ್ಶನ್ ಅಭಿಮಾನಿಗಳು ಮೇಘಾ ಶೆಟ್ಟಿ ಹಾಗೂ ಪವಿತ್ರ ಗೌಡ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುವಾಗ ಎಚ್ಚರಿಕೆ ಇರಲಿ, ಅಳತೆ ಮೀರಿ ಮನಸ್ಸಿಗೆ ಬಂದ ಹಾಗೆ ಫೋಟೊಗಳನ್ನು ಹಾಕಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.

ಮೇಘಾ ಶೆಟ್ಟಿಗೆ ವಿಜಯಲಕ್ಷ್ಮಿ ನೀಡಿದ್ದ ವಾರ್ನಿಂಗ್ ಹೇಗಿತ್ತು?
ಮೇಘಾ ಶೆಟ್ಟಿ ಹಂಚಿಕೊಂಡಿದ್ದ ವಿಡಿಯೊ ಬಗ್ಗೆ ಪೋಸ್ಟ್ ಮಾಡಿದ್ದ ವಿಜಯಲಕ್ಷ್ಮಿ "ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವೀಡಿಯೊಗಳು, ಚಿತ್ರಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರು ಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ನನ್ನ ಪ್ರಾಮಾಣಿಕ ವಿನಂತಿ. ತಕ್ಷಣವೇ ಆ ರೀತಿಯಾದ ಪೋಸ್ಟ್‌ಗಳನ್ನು ನಿಲ್ಲಿಸಿ. ಮಹಿಳೆಯಾಗಿ ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಒಬ್ಬರು ಎರಡು ಬಾರಿ ಯೋಚಿಸಬೇಕಾಗಿತ್ತು. ಏಕೆಂದರೆ, ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ನೈತಿಕತೆಯನ್ನು ತೋರಿಸುತ್ತದೆ. ವ್ಯಕ್ತಿತ್ವವನ್ನು ಗಮನಿಸಿ. ನನ್ನ ಮೌನದ ಅರ್ಥ ನಾನು ನಾನ್‌ಸೆನ್ಸ್ ಅನ್ನು ತಡೆದುಕೊಳ್ಳುತ್ತೇನೆ ಎಂದು ಅರ್ಥವಲ್ಲ!" ಎಂದು ಬರೆದುಕೊಂಡು ಮೇಘಾ ಶೆಟ್ಟಿಯನ್ನು ಟ್ಯಾಗ್ ಮಾಡಿದ್ದರು.


Click it and Unblock the Notifications











