ಸುನಾಮಿ ಕಿಟ್ಟಿ ಕಿಡ್ನಾಪ್ ಪ್ರಕರಣ : ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸುನಿಲ್ ಪತ್ನಿ
'ಬಿಗ್ ಬಾಸ್' ಸೇರಿದಂತೆ ಕನ್ನಡದ ಕೆಲವು ರಿಯಾಲಿಟಿ ಶೋ ಗಳ ಮೂಲಕ ಹೆಸರು ಮಾಡಿದ್ದ ಸುನಾಮಿ ಕಿಟ್ಟಿ ಈಗ ಜೈಲು ಪಾಲಾಗಿದ್ದಾನೆ. ತನ್ನ ಸ್ನೇಹಿತ ಸುನಿಲ್ ಪತ್ನಿಯ ಪ್ರಿಯಕರ ತೌಶೀಕ್ ನನ್ನ ಕಿಡ್ನಾಪ್ ಮಾಡಿ ಹೊರಮಾವು ಬಳಿಯ ತೋಟದ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಚಾಕುವಿನಿಂದ ತೌಶೀಕ್ ಎದೆ ಮತ್ತು ತೊಡೆ ಭಾಗಕ್ಕೆ ಸುನಾಮಿ ಕಿಟ್ಟಿ ಮತ್ತು ಸುನೀಲ್ ಟೀಮ್ ಇರಿದಿದ್ದರು. ಬಳಿಕ ಜ್ಞಾನ ಭಾರತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುನಾಮಿ ಕಿಟ್ಟಿ ಯೋಗೇಂದ್ರ ಮತ್ತು ಅರ್ಜುನ್ ನನ್ನು ಬಂದಿಸಿದ್ದರು.
ಆದರೆ ಈ ಪ್ರಕರಣಕ್ಕೆ ಸಂಭದಿಸಿದಂತೆ ಸದ್ಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಸುನಾಮಿ ಕಿಟ್ಟಿ ಸ್ನೇಹಿತ ಸುನೀಲ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ರಾಮಮೂರ್ತಿ ನಗರ ನಿವಾಸಿಯಾಗಿರುವ ಸುನಿಲ್ ಪತ್ನಿಯನ್ನು ಸದ್ಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾಳೆ. ಸುನೀಲ್ ಪತ್ನಿಗೆ ಚಿಕಿತ್ಸೆ ನೀಡಿದ ವೈದ್ಯರು ಜೀವಕ್ಕೆ ಯಾವುದೇ ಅಪಾಯವಿಲ್ಲಾ ಎಂದಿದ್ದಾರೆ.

ಅಂದಹಾಗೆ, ಸುನಾಮಿ ಕಿಟ್ಟಿ ಸ್ನೇಹಿತ ಸುನಿಲ್ ಪತ್ನಿ ತೌಶೀಕ್ ಎಂಬಾತ ಪ್ರೀತಿಸುತ್ತಿದ್ದಳು. ಫೆಬ್ರವರಿ 28ಕ್ಕೆ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಅಂಡ್ ರೆಸ್ಟೋರೆಂಟ್ ಗೆ ಸುನಿಲ್ ಪತ್ನಿ ಮತ್ತು ಊಟಕ್ಕೆ ಬಂದಿದ್ದರು. ಈ ವೇಳೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ನನ್ನೆ ಸುನಿಲ್ ಪತ್ನಿಯ ಪ್ರಿಯಕರ ಎಂದು ತಿಳಿದು ಆತನನ್ನು ಹೊರಮಾವು ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದರು. ನಂತರ ತೌಶೀಕ್ ನನ್ನ ಕಿಡ್ನಾಪ್ ಮಾಡಿ, ಗನ್ ತೋರಿಸಿ ಹೆಸರಿಸಿದ ಇವರನ್ನು ಜ್ಞಾನ ಭಾರತಿ ಪೊಲೀಸರು ಬಂದಿಸಿದ್ದಾರೆ.


Click it and Unblock the Notifications











