ಹಾಡುಹಗಲೇ ತಲವಾರು ಹಿಡಿದು ತುಳು ಸಿನಿಮಾ ನಟನ ಗೂಂಡಾಗಿರಿ

By ಕಿರಣ್

ಮಂಗಳೂರು ಜೂನ್ 11: ಚುನಾವಣೆ ಮುಗಿದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವೈರತ್ವ ಕೊನೆಗೊಂಡಿಲ್ಲ. ಬಂಟ್ವಾಳದಲ್ಲಿ ತುಳು ಚಿತ್ರ ನಟ ಹಾಗೂ ಕಾಂಗ್ರೆಸ್ ಕಾರ್ಯಕರ್ತನೋರ್ವ ಹಾಡುಹಗಲೇ ತಲವಾರು ಝಳಪಿಸಿ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ.

ಹಾಡಹಗಲೇ ತಲವಾರು ಹಿಡಿದು ಗೂಂಡಾಗಿರಿ ಮಾಡಿದ ತುಳು ಸಿನಿಮಾ ನಟ

ಮಾಜಿ ಸಚಿವ ಬಿ.ರಮಾನಾಥ ರೈ‌ ಅವರ ಬೆಂಬಲಿಗ ಹಾಗೂ ಓರ್ವ ಕಾಂಗ್ರೆಸ್ ಕಾರ್ಯಕರ್ತ ಇಂದು ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ್ದಾರೆ. ಈ ಘಟನೆ ಬಂಟ್ವಾಳ ಪೇಟೆಯ ನಿತ್ಯಾನಂದ ಮಂದಿರದ ಬಳಿ ನಡೆದಿದೆ. ಸುರೇಂದ್ರ ಬಂಟ್ವಾಳ ಎಂಬಾತ ತಲವಾರು ಹಿಡಿದು ರಸ್ತೆಯಲ್ಲೇ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾನೆ ಎಂದು ಅರೋಪಿಸಲಾಗಿದೆ. ಅಂದ್ಹಾಗೆ, ಸುರೇಂದ್ರ ಬಂಟ್ವಾಳ 'ಚಾಲಿಪೋಲಿಲು' ಸೇರಿದಂತೆ ಕೆಲ ತುಳು ಚಿತ್ರಗಳಲ್ಲಿ ನಟಿಸಿದ್ದಾನೆ.

Tulu actor Surendra Bantwals Rowdism in Bantwal

ಗಣೇಶ್ ಮತ್ತು ಪುಷ್ಪರಾಜ್ ಮೇಲೆ ಸುರೇಂದ್ರ ಬಂಟ್ವಾಳ್ ತಲವಾರು ಬೀಸಿದ್ದು, ಅವರಿಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಮೊದಲು ಸುರೇಂದ್ರ ಬಂಟ್ವಾಳ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು. ಇದು ವಿಕೋಪಕ್ಕೆ ತಿರುಗಿ ತಲವಾರು ಕಾಳಗ ನಡೆಯುವ ಮಟ್ಟಕ್ಕೆ ಬೆಳೆದಿದೆ.

More from Filmibeat

English summary
Tulu Actor Surendra Bantwal's Rowdism in Bantwal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X