ಹಾಡುಹಗಲೇ ಗೂಂಡಾಗಿರಿ ನಡೆಸಿದ್ದ ನಟ ಅರೆಸ್ಟ್

By Naveen

ತುಳು ಚಿತ್ರ ನಟ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಸುರೇಂದ್ರ ಬಂಟ್ವಾಳ ಎಂಬುವವನ್ನು ಬಂಟ್ವಾಳ ಪೋಲೀಸರು ಬಂದಿಸಿದ್ದಾರೆ. ಜೂನ್ 11 ರಂದು ಹಾಡುಹಗಲೇ ತಲವಾರು ಝಳಪಿಸಿ ಬಿಜೆಪಿ ಕಾರ್ಯಕರ್ತರಿಗೆ ನಟ ಸುರೇಂದ್ರ ಬೆದರಿಕೆ ಹಾಕಿದ್ದ. ಈ ಸಂಬಂಧ ವಿಚಾರಣೆ ನಡೆಸಿದ ಪೋಲೀಸರು ಈಗ ಇಬ್ಬರನ್ನು ಬಂದಿಸಿದ್ದಾರೆ.

ಘಟನೆಯ ಬಗ್ಗೆ :

ಮಾಜಿ ಸಚಿವ ಬಿ.ರಮಾನಾಥ ರೈ‌ ಅವರ ಬೆಂಬಲಿಗ ಹಾಗೂ ನಟ ಸುರೇಂದ್ರ ಬಂಟ್ವಾಳ ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ್ದ. ಬಂಟ್ವಾಳ ಪೇಟೆಯ ನಿತ್ಯಾನಂದ ಮಂದಿರದ ಬಳಿ ಈ ಘಟನೆ ನಡೆದಿದ್ದು, ಸುರೇಂದ್ರ ಬಂಟ್ವಾಳ ತಲವಾರು ಹಿಡಿದು ರಸ್ತೆಯಲ್ಲೇ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದ.

Tulu Actor Surendra Bantwala has been arrested

ಗಣೇಶ್ ಮತ್ತು ಪುಷ್ಪರಾಜ್ ಮೇಲೆ ಸುರೇಂದ್ರ ಬಂಟ್ವಾಳ್ ತಲವಾರು ಬೀಸಿದ್ದು, ಅವರಿಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಘಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮೊದಲು ಸುರೇಂದ್ರ ಬಂಟ್ವಾಳ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು. ಇದು ವಿಕೋಪಕ್ಕೆ ತಿರುಗಿ ತಲವಾರು ಕಾಳಗ ನಡೆಯುವ ಮಟ್ಟಕ್ಕೆ ಬೆಳೆದಿತ್ತು. ಅಂದ್ಹಾಗೆ, ಸುರೇಂದ್ರ ಬಂಟ್ವಾಳ 'ಚಾಲಿಪೋಲಿಲು' ಸೇರಿದಂತೆ ಕೆಲ ತುಳು ಚಿತ್ರಗಳಲ್ಲಿ ನಟಿಸಿದ್ದಾನೆ.

More from Filmibeat

English summary
Tulu Actor Surendra Bantwala has been arrested in Bantwala Today (June19th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X